ಬೇಸರದಲ್ಲಿರೋ ಫೋಟೋ ಪೋಸ್ಟ್ ಮಾಡಿದ ರಕ್ಷಿತ್ ಶೆಟ್ಟಿ; ಅದೇ ಕಾರಣವಾ?

ರಕ್ಷಿತ್ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ, 'ರಿಚರ್ಡ್ ಆ್ಯಂಟನಿ' ಅಪ್‌ಡೇಟ್ ನೀಡದೆ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದರು. ಈ ಮಧ್ಯೆ, ಅವರು '777 ಚಾರ್ಲಿ' ಸಿನಿಮಾದ ದುಃಖದ ದೃಶ್ಯದ ಫೋಟೋ ಪೋಸ್ಟ್ ಮಾಡಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿದೆ. ರಶ್ಮಿಕಾ ಮಂದಣ್ಣ ಜೊತೆಗಿನ ಹಿಂದಿನ ವಿಷಯವೂ ಮತ್ತೆ ಮುನ್ನೆಲೆಗೆ ಬಂದಿದೆ.

ಬೇಸರದಲ್ಲಿರೋ ಫೋಟೋ ಪೋಸ್ಟ್ ಮಾಡಿದ ರಕ್ಷಿತ್ ಶೆಟ್ಟಿ; ಅದೇ ಕಾರಣವಾ?
ರಕ್ಷಿತ್ ಶೆಟ್ಟಿ

Updated on: Mar 06, 2026 | 9:19 AM

ರಕ್ಷಿತ್ ಶೆಟ್ಟಿ (Rakshith Shetty) ಅವರು ಇತ್ತೀಚೆಗೆ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಈವೆಂಟ್​​​ಗಳಿಗೆ ಅವರ ಹಾಜರಿ ಇಲ್ಲ. ‘ರಿಚರ್ಡ್ ಆ್ಯಂಟನಿ’ ಸಿನಿಮಾ ಘೋಷಣೆ ಮಾಡಿ ಹಲವು ಸಮಯ ಕಳೆದರೂ ಆ ಚಿತ್ರದ ಬಗ್ಗೆ ಯಾವುದೇ ಅಪ್​​ಡೇಟ್ ಇಲ್ಲ. ಈ ಎಲ್ಲ ವಿಷಯದಲ್ಲಿ ಫ್ಯಾನ್ಸ್​ಗೆ ಬೇಸರ ಇದೆ. ಹೀಗಿರುವಾಗಲೇ ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದ ಫೋಟೋನ ಪೋಸ್ಟ್ ಮಾಡಿದ್ದಾರೆ. ಈ ಫೋಟೋನ ರಕ್ಷಿತ್ ಹಂಚಿಕೊಂಡಿದ್ದೇಕೆ ಎಂಬ ಪ್ರಶ್ನೆ ಮೂಡಿದೆ.

‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಿದ್ದು 2022ರ ಜೂನ್ ಅಲ್ಲಿ. ಆ ಬಳಿಕ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಪಾರ್ಟ್ ಎ ಹಾಗೂ ಬಿಗಳು ರಿಲೀಸ್ ಆದವು. ಈಗ ರಕ್ಷಿತ್ ತೆರೆಮೇಲೆ ಕಾಣಿಸುತ್ತಿಲ್ಲ. ಅವರು ತಮ್ಮ ಹುಟ್ಟೂರಾದ ಉಡುಪಿಯಲ್ಲಿ ಸ್ಕ್ರಿಪ್ಟ್​ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈಗ ಅವರು ಏಕಾಏಕಿ ‘777 ಚಾರ್ಲಿ’ ಸಿನಿಮಾದ ಸ್ಯಾಡ್ ದೃಶ್ಯದ ಫೋಟೋನ ಫೇಸ್​​​ಬುಕ್ ಕವರ್ ಪೇಜ್ ಆಗಿ ಪೋಸ್ಟ್ ಮಾಡಿರೋದು ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ರಕ್ಷಿತ್ ವಿಷಯದಲ್ಲಿ ರಶ್ಮಿಕಾ ವಿವಾಹ ಟ್ರೋಲ್​ ಮಾಡಿದವರಿಗೆ ಖಡಕ್ ತಿರುಗೇಟು ಕೊಟ್ಟ ಕನ್ನಡತಿ

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಆ ಬಳಿಕ ನಿಶ್ಚಿತಾರ್ಥ ಮುರಿದು ಬಿತ್ತು.ಇದಕ್ಕೆ ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಆ ಬಳಿಕ ವಿಜಯ್ ಜೊತೆ ರಶ್ಮಿಕಾ ಆಪ್ತತೆ ಬೆಳೆಸಿಕೊಂಡರು. ಈಗ ಅವರು ಮದುವೆ ಆಗಿದ್ದಾರೆ. ಅವರು ಕಲರ್​​ಫುಲ್ ಫೋಟೋಗಳನ್ನು ಹಾಕುತ್ತಾ ಮಿಂಚುತ್ತಿದ್ದಾರೆ. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಬೇಸರದಲ್ಲಿರೋ ಫೋಟೋನೇ ಪೋಸ್ಟ್ ಮಾಡಿದ್ದು ಅಚ್ಚರಿ ಮೂಡಿಸಿದೆ.

ಕಮೆಂಟ್ ಬಾಕ್ಸ್ ಅಲ್ಲಿ ಕೆಲವರು ರಕ್ಷಿತ್ ಶೆಟ್ಟಿಗೆ ಸ್ಫೂರ್ತಿ ತುಂಬಿದ್ದಾರೆ. ‘ಹಳೆಯದನ್ನು ಮರೆತು ಮುಂದೆ ಸಾಗಿ’ ಎಂದು ಫ್ಯಾನ್ಸ್ ಹೇಳಿದ್ದಾರೆ. ಇನ್ನೂ ಕೆಲವರು, ‘ನಿಮ್ಮ ಕಂಬ್ಯಾಕ್ ಬೇರೆಯವರಿಗೆ ಸ್ಲಿಪ್ಪರ್ ಶಾಟ್ ಆಗಬೇಕು’ ಎಂದು ಬರೆದುಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಇದ್ದಿದ್ದು ಕಡಿಮೆ. ಫೇಸ್​​​ಬುಕ್​​ ಅಲ್ಲಿ ಅವರ ಕೊನೆಯ ಪೋಸ್ಟ್ ಬಂದಿದ್ದು 2025ರ ಏಪ್ರಿಲ್​​ನಲ್ಲಿ. ಆ ಬಳಿಕ ಅವರು ಪೋಸ್ಟ್ ಮಾಡುತ್ತಿರುವ ಫೋಟೋ ಇದೇ ಆಗಿದೆ. ಫೋಟೋ ಪೋಸ್ಟ್​ ಮಾಡಿ ಬಹಳ ದಿನ ಕಳೆದಿದೆ ಎಂಬ ಕಾರಣಕ್ಕೂ ಅವರು ಈ ಫೋಟೋ ಹಂಚಿಕೊಂಡಿರಬಹುದು ಎಂದು ಊಹಿಸಲಾಗುತ್ತಿದೆ. ಇನ್ನೂ ಕೆಲವರು ರಕ್ಷಿತ್​​ಗೆ ‘ಚಾರ್ಲಿ’ ಸಿನಿಮಾ ನೆನಪಾಗಿರಬೇಕು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us