‘777 ಚಾರ್ಲಿ’ ಸಿನಿಮಾದಲ್ಲಿ ಶ್ವಾನ ಪಡೆದ ಸಂಭಾವನೆ ಎಷ್ಟು? ರಕ್ಷಿತ್ ಶೆಟ್ಟಿ ನೀಡಿದ್ರು ಅಚ್ಚರಿಯ ಮಾಹಿತಿ

ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾ ಘೋಷಿಸಿದ ಬೆನ್ನಲ್ಲೇ ಸಾಕಷ್ಟು ಕುತೂಹಲ ಮೂಡಿತ್ತು. ಈ ಸಿನಿಮಾ ರೆಡಿ ಮಾಡೋಕೆ ಇಡೀ ಟೀಂ ಸಾಕಷ್ಟು ಸಮಯ ತೆಗೆದುಕೊಂಡಿತ್ತು. ಇದಕ್ಕೆ ಕೊವಿಡ್ ಒಂದು ಕಾರಣ ಆದರೆ, ಮತ್ತೊಂದು ಕಾರಣ ಶ್ವಾನದ ಮೂಡ್.

‘777 ಚಾರ್ಲಿ’ ಸಿನಿಮಾದಲ್ಲಿ ಶ್ವಾನ ಪಡೆದ ಸಂಭಾವನೆ ಎಷ್ಟು? ರಕ್ಷಿತ್ ಶೆಟ್ಟಿ ನೀಡಿದ್ರು ಅಚ್ಚರಿಯ ಮಾಹಿತಿ
ರಕ್ಷಿತ್
Edited By:

Updated on: Jun 13, 2022 | 8:01 PM

‘777 ಚಾರ್ಲಿ’ ಸಿನಿಮಾ (777 Charlie Movie) ಎಲ್ಲ ಕಡೆಗಳಲ್ಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ಮೂರೇ ದಿನಕ್ಕೆ ಸುಮಾರು 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಬಗ್ಗೆ ವರದಿ ಆಗಿದೆ. ಈ ಸಿನಿಮಾದಿಂದ ರಕ್ಷಿತ್ ವೃತ್ತಿ ಜೀವನಕ್ಕೆ ಹೊಸ ಮೈಲೇಜ್ ಸಿಕ್ಕಿದೆ. ಸಿನಿಮಾದಲ್ಲಿ ನಟಿಸಿದ ಪ್ರತಿ ಪಾತ್ರಗಳೂ ಹೈಲೈಟ್ ಆಗಿವೆ. ಶ್ವಾನ ಹಾಗೂ ಮನುಷ್ಯನ ನಡುವಿನ ಫ್ರೆಂಡ್​ಶಿಪ್ ಕಥೆ ‘777 ಚಾರ್ಲಿ’ ಸಿನಿಮಾದ ಹೈಲೈಟ್​. ಈ ಚಿತ್ರದಲ್ಲಿ ಚಾರ್ಲಿ ಶ್ವಾನದ ಪಾತ್ರ ತುಂಬಾನೇ ಮುಖ್ಯವಾದುದು. ‘ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿದ್ದು ಚಾರ್ಲಿ’ ಎಂದು ಅನೇಕರು ಮೆಚ್ಚುಗೆ ಸೂಚಿಸಿದ್ದಿದೆ. ಹಾಗಾದರೆ ಈ ಶ್ವಾನ ಪಡೆದ ಸಂಭಾವನೆ ಎಷ್ಟು? ಇದಕ್ಕೆ ರಕ್ಷಿತ್ ಶೆಟ್ಟಿ (Rakshit Shetty) ಅವರಿಂದಲೇ ಉತ್ತರ ಸಿಕ್ಕಿದೆ.

ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾ ಘೋಷಿಸಿದ ಬೆನ್ನಲ್ಲೇ ಸಾಕಷ್ಟು ಕುತೂಹಲ ಮೂಡಿತ್ತು. ಈ ಸಿನಿಮಾ ರೆಡಿ ಮಾಡೋಕೆ ಇಡೀ ಟೀಂ ಸಾಕಷ್ಟು ಸಮಯ ತೆಗೆದುಕೊಂಡಿತ್ತು. ಇದಕ್ಕೆ ಕೊವಿಡ್ ಒಂದು ಕಾರಣ ಆದರೆ, ಮತ್ತೊಂದು ಕಾರಣ ಶ್ವಾನದ ಮೂಡ್. ತರಬೇತಿ ಪಡೆದ ನಾಯಿಗಳು ನಮ್ಮ ಮಾತನ್ನು ಕೇಳುತ್ತವೆಯಾದರೂ ಅವುಗಳ ಮೂಡ್ ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ, ಸಿನಿಮಾ ಶೂಟಿಂಗ್​ಗೆ ಹೆಚ್ಚು ಸಮಯ ಹಿಡಿದಿದೆ. ಈ ಚಿತ್ರದಲ್ಲಿ ಶ್ವಾನ ಪಡೆದ ಸಂಭಾವನೆ ಬಗ್ಗೆ ರಕ್ಷಿತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಆ್ಯಂಕರ್ ಅನುಶ್ರೀ ಅವರು ‘777 ಚಾರ್ಲಿ’ ಟೀಂಅನ್ನು ಸಂದರ್ಶನ ಮಾಡಿದ್ದಾರೆ. ನಟ ರಕ್ಷಿತ್, ರಾಜ್​ ಬಿ. ಶೆಟ್ಟಿ, ನಟಿ ಸಂಗೀತಾ ಶೃಂಗೇರಿ ಹಾಗೂ ನಿರ್ದೇಶಕ ಕಿರಣ್ ರಾಜ್ ಈ ಸಂದರ್ಶನದಲ್ಲಿ ಇದ್ದರು. ಈ ಸಂದರ್ಶನದಲ್ಲಿ ಮಾತನಾಡುವ ಸಂದರ್ಭದಲ್ಲಿ ರಕ್ಷಿತ್​ಗೆ ‘ಚಾರ್ಲಿ ಎಷ್ಟು ಸಂಭಾವನೆ ಪಡೆದಿದೆ’ ಎಂದು ಕೇಳಲಾಯಿತು. ಇದಕ್ಕೆ ರಕ್ಷಿತ್ ಉತ್ತರಿಸಿದ್ದಾರೆ. ‘ಚಾರ್ಲಿಗೆ ಸಂಭಾವನೆ ಒಂದಷ್ಟಾಗಿದೆ. ಅದು ಕೋಟಿ ಮೊತ್ತದಲ್ಲಿದೆ’ ಎಂದರು ರಕ್ಷಿತ್. ಈ ವಿಚಾರ ಕೇಳಿ ಫ್ಯಾನ್ಸ್ ನಿಜಕ್ಕೂ ಅಚ್ಚರಿ ಹೊರಹಾಕಿದ್ದಾರೆ. ಇದು ಚಾರ್ಲಿಯ ಮೊದಲ ಹಾಗೂ ಕೊನೆಯ ಸಿನಿಮಾ. ಈ ಬಗ್ಗೆಯೂ ರಕ್ಷಿತ್ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
ಬಾಕ್ಸ್ ಆಫೀಸ್​ನಲ್ಲಿ ‘777 ಚಾರ್ಲಿ’ ಓಟ; ವಾರಾಂತ್ಯಕ್ಕೆ ರಕ್ಷಿತ್ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ವಿವರ
‘777 ಚಾರ್ಲಿ’ ಎಷ್ಟು ಲಾಭ ಮಾಡಿದೆ? ಮಾಹಿತಿ ಹಂಚಿಕೊಂಡ ರಕ್ಷಿತ್ ಶೆಟ್ಟಿ
777 Charlie Review: ಪ್ರಾಣಿಪ್ರಿಯರನ್ನು ನಗಿಸಿ, ಅಳಿಸುವ ಧರ್ಮ-ಚಾ​ರ್ಲಿಯ ಎಮೋಷನಲ್​ ಜರ್ನಿ; ಇಲ್ಲಿದೆ ವಿಮರ್ಶೆ
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು?

ಇದನ್ನೂ ಓದಿ: ಬಾಕ್ಸ್ ಆಫೀಸ್​ನಲ್ಲಿ ‘777 ಚಾರ್ಲಿ’ ಓಟ; ವಾರಾಂತ್ಯಕ್ಕೆ ರಕ್ಷಿತ್ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ವಿವರ

ಚಾರ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಸಿನಿಮಾ ರಿಲೀಸ್ ಆಗಿದ್ದು ಜೂನ್​ 10ಕ್ಕೆ. ಅದಕ್ಕೂ ಮೊದಲು ಅನೇಕ ಕಡೆಗಳಲ್ಲಿ ಸಿನಿಮಾ ಪ್ರೀಮಿಯರ್ ಆಗಿತ್ತು. ಪ್ರೀಮಿಯರ್​ನಿಂದ ಚಿತ್ರ 1.10 ಕೋಟಿ ರೂಪಾಯಿ ಗಳಿಸಿದೆ. ಜೂನ್​ 10 (4.90 ಕೋಟಿ ರೂಪಾಯಿ), ಜೂನ್​ 11 (6.25 ಕೋಟಿ ರೂಪಾಯಿ) ಕೋಟಿ ರೂಪಾಯಿ ಹಾಗೂ ಭಾನುವಾರ ಜೂನ್​ 12 (7.50 ಕೋಟಿ ರೂಪಾಯಿ) ಗಳಿಕೆ ಆಗಿದೆ. ಈ ಮೂಲಕ ಚಿತ್ರದ ಒಟ್ಟೂ ಗಳಿಕೆ 19.75 ಕೋಟಿ ರೂಪಾಯಿ ಆಗಿದೆ ಎಂದು ವರದಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Web contact

TV9 Kannada

Read More
Follow Us