ನಟ ಅನಿರುದ್ಧ ಜತ್ಕರ್ (Aniruddha Jatkar) ಅವರು ಇತ್ತೀಚಿನ ವರ್ಷಗಳಲ್ಲಿ ಕಿರುತೆರೆಯಲ್ಲಿ ಹೆಚ್ಚು ಬ್ಯುಸಿ ಇದ್ದರು. ಈಗ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನೆರವೇರಿದೆ. ರೇಚಲ್ ಡೇವಿಡ್ (Rachel David), ನಿಧಿ ಸುಬ್ಬಯ್ಯ ಚಿತ್ರದ ನಾಯಕಿಯರು. ಈ ಚಿತ್ರವನ್ನು ಆನಂದ್ ರಾಜ್ ನಿರ್ದೇಶನ ಮಾಡುತ್ತಿದ್ದು, ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಿರುವ ಖುಷಿಯನ್ನು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಅನಿರುದ್ಧ ಹಂಚಿಕೊಂಡಿದ್ದಾರೆ.
ನಿಜಕ್ಕೂ ಸಾಕಷ್ಟು ಖುಷಿ ಆಗುತ್ತಿದೆ. ನಾನು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸದೇ ಐದು ವರ್ಷ ಆಗಿದೆ. ಈಗ ಹೊಸ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಆದರೆ, ಈ ಐದು ವರ್ಷಗಳಲ್ಲಿ ಜನರಿಂದ ದೂರ ಹೋಗಿಲ್ಲ. ಜನರಿಗೆ ಮತ್ತಷ್ಟು ಹತ್ತಿರ ಆದೆ. ಧಾರಾವಾಹಿಗಳ ಮೂಲಕ ಜನರಿಗೆ ಹೆಚ್ಚು ತಲುಪಿಸಿದೆ.
ಖಂಡಿತವಾಗಿಯೂ. ಸಿನಿಮಾ ಇರಲಿ ಧಾರಾವಾಹಿ ಇರಲಿ ಸಿದ್ಧತೆಯಂತೂ ಮಾಡಿಕೊಂಡೇ ಇರುತ್ತೇನೆ. ಧಾರಾವಾಹಿಗಳಲ್ಲಿ ಒಂದು ದಿನದಲ್ಲಿ ಎಷ್ಟು ದೃಶ್ಯ ಮುಗಿಸುತ್ತೇವೆ ಅನ್ನೋದು ನಿರ್ಮಾಪಕರಿಗೆ ಮುಖ್ಯವಾಗುತ್ತದೆ. ಜನರ ಪ್ರತಿಕ್ರಿಯೆಗೆ ತಕ್ಕಂತೆ ಅಲ್ಲಿ ಬದಲಾವಣೆಗಳು ಆಗುತ್ತವೆ. ಆದರೆ, ಸಿನಿಮಾಗಳಲ್ಲಿ ಆ ರೀತಿ ಆಗುವುದಿಲ್ಲ. ಸಂಪೂರ್ಣ ಸಿದ್ಧತೆಯೊಂದಿಗೆ ತಂಡ ಸೆಟ್ಗೆ ಬರುತ್ತದೆ. ಸಾಕಷ್ಟು ಸಮಯ ತೆಗೆದುಕೊಂಡು ತಾಳ್ಮೆಯಿಂದ, ಪ್ರೀತಿಯಿಂದ ದೃಶ್ಯವನ್ನು ಶೂಟ್ ಮಾಡಬಹುದು.
ಆರ್ಕೆ ನಾರಾಯಣ್ ಅವರು ಬರೆದ ‘ಮಾಲ್ಗುಡಿ ಡೇಸ್’ ಪುಸ್ತಕವನ್ನು ‘ಮಾಲ್ಗುಡಿ ದಿನಗಳು’ ಎಂದು ಕನ್ನಡಕ್ಕೆ ಡಾ. ಎಚ್ ರಾಮಚಂದ್ರಸ್ವಾಮಿ ಅನುವಾದ ಮಾಡಿದ್ದಾರೆ. ಇದರಲ್ಲಿ 32 ಕಥೆಗಳಿವೆ. ಇದರ ಆಡಿಯೋ ಬುಕ್ ರೆಡಿ ಮಾಡಲಾಗಿದೆ. ಈ ಕಥೆಗಳನ್ನು ನಾನು ಓದಿದ್ದೇನೆ. ಆಗಸ್ಟ್ ಮೂರನೇವಾರಕ್ಕೆ ಇದು ಅಪ್ಲೋಡ್ ಆಗಬಹುದು. ನಾನು ‘ಮಾಲ್ಗುಡಿ ಡೇಸ್’ ನೋಡಿ ಬೆಳೆದವನು. ನಾನು ಬೆಂಗಳೂರಿಗೆ ಬರುವುದಕ್ಕಿಂತ ಮೊದಲೇ ಶಂಕರ್ ನಾಗ್ ತೀರಿಕೊಂಡಿದ್ದರು. ಮೊದಲೇ ಬೆಂಗಳೂರಿಗೆ ಬಂದು ಅವರನ್ನು ಭೇಟಿ ಮಾಡಿದ್ದರೆ ನನಗೆ ಇದರಲ್ಲಿ ನಟಿಸಲು ನನಗೂ ಅವಕಾಶ ಸಿಗುತ್ತಿತ್ತೋನೋ. ಈಗ ಈ ಕಥೆಗಳನ್ನು ಓದಿದ ಖುಷಿ ಇದೆ.
ಇದನ್ನೂ ಓದಿ: ವಿಷ್ಣುವರ್ಧನ್ ಸ್ಮಾರಕದಲ್ಲಿ ಅನಿರುದ್ಧ್ ಹೊಸ ಸಿನಿಮಾಕ್ಕೆ ಚಾಲನೆ: ಕತೆ ತುಸು ಭಿನ್ನ
ನನಗೆ ಹಿರಿತೆರೆ-ಕಿರುತೆರೆ ಎಂಬ ಭೇದಭಾವ ಇಲ್ಲ. ಎಲ್ಲಾ ಕ್ಷೇತ್ರಗಳು ತುಂಬಾನೇ ನೀಡಿವೆ. ಕಿರುತೆರೆಯಿಂದ ನಾನು ಸಾಕಷ್ಟು ಜನರಿಗೆ ಹತ್ತಿರವಾಗಿದ್ದೇನೆ. ಆ ಖುಷಿ ಇದೆ. ಮತ್ತೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಧಾರಾವಾಹಿಗಳಲ್ಲಿ ನಟಿಸುತ್ತೇನೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Sat, 29 July 23