Sanchari Vijay: ಚಿಕಿತ್ಸೆಗೆ ನಟ ಸಂಚಾರಿ ವಿಜಯ್ ಸ್ಪಂದಿಸುತ್ತಿಲ್ಲ; ಅಪೋಲೋ ವೈದ್ಯ ಅರುಣ್ ನಾಯ್ಕ್ ಮಾಹಿತಿ

| Updated By: sandhya thejappa

Updated on: Jun 14, 2021 | 10:52 AM

Sanchari Vijay Health Updates: ಚೇತರಿಕೆ ಪ್ರಾಮಾಣ ಕಡಿಮೆಯಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿಜಯ ಕುಟುಂಬಸ್ಥರು ಆಸ್ಪತ್ರೆಯತ್ತ ಇದ್ದಾರೆ. ಮೆದುಳಿನ ಭಾಗಕ್ಕೆ ಗಂಭೀರ ಪೆಟ್ಟು ಹಿನ್ನೆಲೆ ವಿಜಯ್ ಕೋಮಾದಲ್ಲಿದ್ದಾರೆ.

Sanchari Vijay: ಚಿಕಿತ್ಸೆಗೆ ನಟ ಸಂಚಾರಿ ವಿಜಯ್ ಸ್ಪಂದಿಸುತ್ತಿಲ್ಲ; ಅಪೋಲೋ ವೈದ್ಯ ಅರುಣ್ ನಾಯ್ಕ್ ಮಾಹಿತಿ
ನಟ ಸಂಚಾರಿ ವಿಜಯ್
Follow us on

ಬೆಂಗಳೂರು: ಬೈಕ್ ಅಪಘಾತದಲ್ಲಿ ಗಂಭೀರಗೊಂಡಿದ್ದ ನಟ ಸಂಚಾರಿ ವಿಜಯ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ನಟ ವಿಜಯ್ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ. ಚಿಕಿತ್ಸೆಗೆ ನಟ ಸ್ಪಂದಿಸುತ್ತಿಲ್ಲ. ಚೇತರಿಕೆ ಪ್ರಾಮಾಣ ಕಡಿಮೆಯಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿಜಯ ಕುಟುಂಬಸ್ಥರು ಆಸ್ಪತ್ರೆಯತ್ತ ಇದ್ದಾರೆ. ಮೆದುಳಿನ ಭಾಗಕ್ಕೆ ಗಂಭೀರ ಪೆಟ್ಟು ಹಿನ್ನೆಲೆ ವಿಜಯ್ ಕೋಮಾದಲ್ಲಿದ್ದಾರೆ. ಮೆದುಳಿನ ಭಾಗದಲ್ಲಿ ಗಂಭೀರ ರಕ್ತಸ್ರಾವಚಾಗಿದ್ದು, ಐಸಿಯು ಪುಲ್ ಲೈಪ್ ಸಪೂರ್ಟ್​ನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಚಿಕಿತ್ಸೆಗೆ ನಟ ಸ್ಪಂದಿಸುತ್ತಿಲ್ಲ ಎಂದು ಅಪೋಲೋ ವೈದ್ಯ ಅರುಣ್ ನಾಯ್ಕ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ನಟ ಸಂಚಾರಿ ವಿಜಯ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, 48 ಗಂಟೆಯೊಳಗೆ ಚೇತರಿಕೆ ಕಂಡರೆ ಸಮಸ್ಯೆ ಇಲ್ಲ. ಈ ವಿಷಯ ವಿಜಯ್ ಅವರ ಕುಟುಂಬಕ್ಕೆ ತಿಳಿಸಿದ್ದೇವೆ. 11.30ಕ್ಕೆ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ನ್ಯೂರೋ ಸರ್ಜನ್ ಡಾ.ಅರುಣ್ ನಾಯಕ್ ತಿಳಿಸಿದ್ದಾರೆ.

ಸಹಾಯಹಸ್ತ ಚಾಚಿದ ಸುದೀಪ್
ಜೂನ್ 12ರ ರಾತ್ರಿ ನಟ ಸಂಚಾರಿ ವಿಜಯ್​ಗೆ ಬನ್ನೇರುಘಟ್ಟ ರಸ್ತೆಯಲ್ಲಿ ಅಪಘಾತವಾಗಿತ್ತು. ತಕ್ಷಣ ಅಪೋಲೋ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಗೆ ಕರೆದುಕೊಂಡು ಬಂದಾಗಲೇ ನಟನ ಸ್ಥಿತಿ ಗಂಭೀರವಾಗಿತ್ತು. ಈ ವಿಷಯ ತಿಳಿದ ಕಿಚ್ಚ ಸುದೀಪ್ ಸಹಾಯಹಸ್ತ ಚಾಚಿದ್ದಾರೆ. ನಟ ಸುದೀಪ್ ಅಪೋಲೋ ಆಸ್ಪತ್ರೆ ವೈದ್ಯರಿಗೆ ಕರೆಮಾಡಿ ಶಸ್ತ್ರ ಚಿಕಿತ್ಸೆ ಮಾಡುವಂತೆ ಮನವಿ ಮಾಡಿದ್ದಾರೆ. ಸದ್ಯ ನಟ ಸಂಚಾರಿ ವಿಜಯ್ ಬೇಗ ಗುಣಮುಖರಾಗಲಿ ಎಂದು ಚಿತ್ರರಂಗ, ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬಸ್ಥರು ಪ್ರಾರ್ಥನೆ ಮಾಡುತ್ತಿದ್ದಾರೆ.

ಇದನ್ನೂ ಓದಿ

Sanchari Vijay: ಸಂಚಾರಿ ವಿಜಯ್ ಅಪಘಾತದ ಸುದ್ದಿ ತಿಳಿದ ತಕ್ಷಣ ಸಹಾಯ ಮಾಡಿದ ಸುದೀಪ್; ಕೂಡಲೇ ನಡೆಯಿತು ಸರ್ಜರಿ

ಸಂಚಾರಿ ವಿಜಯ್​ ಕೋಮಾದಲ್ಲೇ ಇದ್ದಾರೆ, ಆರೋಗ್ಯ ಸ್ಥಿತಿ ಗಂಭೀರವಾಗಿದೆ: ವೈದ್ಯರ ಮಾಹಿತಿ

(Apollo hospital doctor said actor Vijay was not responding to treatment)

Published On - 10:35 am, Mon, 14 June 21