Puneeth Rajkumar: ಅಪ್ಪು​ ಹೆಸರಿನಲ್ಲಿ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆ; ಕೈ ಜೋಡಿಸಿದ ಯಶ್​, ಸೂರ್ಯ, ಪ್ರಕಾಶ್​ ರೈ

| Updated By: ಮದನ್​ ಕುಮಾರ್​

Updated on: Oct 22, 2022 | 6:45 AM

Appu Express Ambulance: ಬಡವರಿಗಾಗಿ ಕರ್ನಾಟಕದಾದ್ಯಂತ ‘ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್’ ಓಡಾಡಲಿದೆ. ಅದಕ್ಕಾಗಿ ಯಶ್​, ಪ್ರಕಾಶ್​ ರೈ, ಸೂರ್ಯ, ಚಿರಂಜೀವಿ, ಶಿವಣ್ಣ ಮುಂತಾದವರು ಕೈ ಜೋಡಿಸಿದ್ದಾರೆ.

Puneeth Rajkumar: ಅಪ್ಪು​ ಹೆಸರಿನಲ್ಲಿ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆ; ಕೈ ಜೋಡಿಸಿದ ಯಶ್​, ಸೂರ್ಯ, ಪ್ರಕಾಶ್​ ರೈ
ಪ್ರಕಾಶ್ ರಾಜ್, ಪುನೀತ್​ ರಾಜ್​ಕುಮಾರ್​, ಯಶ್
Follow us on

ನಟನಾಗಿ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕವೂ ಪುನೀತ್​ ರಾಜ್​ಕುಮಾರ್ ಅವರು​​ ಜನರ ಆಶೀರ್ವಾದ ಪಡೆದಿದ್ದರು. ಅವರು ಮಾಡಿದ ಕಾರ್ಯಗಳು ಎಲ್ಲರಿಗೂ ಮಾದರಿ ಆಗಿವೆ. ಅವರನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಅನೇಕರು ಹಲವು ಜನಪರ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ. ಅದೇ ರೀತಿ ನಟ ಪ್ರಕಾಶ್​ ರೈ (Prakash Raj) ಅವರು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಆಂಬ್ಯುಲೆನ್ಸ್ ಸೇವೆ (Appu Express Ambulance) ನೀಡಲು ತೀರ್ಮಾನಿಸಿದರು. ಅದಕ್ಕಾಗಿ ದೊಡ್ಮನೆ ಕುಟುಂಬ ಕೂಡ ಸಾಥ್​ ನೀಡಿದೆ. ಶಿವರಾಜ್​ಕುಮಾರ್​ ಫ್ಯಾಮಿಲಿಯಿಂದ ಒಂದು ಆಂಬ್ಯುಲೆನ್ಸ್ ನೀಡಲಾಗಿದೆ. ಅದೇ ರೀತಿ ‘ಮೆಗಾ ಸ್ಟಾರ್​’ ಚಿರಂಜೀವಿ, ಕಾಲಿವುಡ್​ ನಟ ಸೂರ್ಯ ಕೂಡ ಆಂಬ್ಯುಲೆನ್ಸ್ ನೀಡುವ ಮೂಲಕ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ‘ಪುನೀತ ಪರ್ವ’ ಕಾರ್ಯಕ್ರಮದ ವೇಳೆ ಯಶ್​ (Yash) ಕೂಡ ಇದಕ್ಕೆ ತಮ್ಮ ಸಹಕಾರ ಇದೆ ಎಂಬುದನ್ನು ಘೋಷಿಸಿದರು.

ಪುನೀತ್​ ರಾಜ್​ಕುಮಾರ್​ ಬಗ್ಗೆ ಬರೀ ಮಾತನಾಡುವುದಲ್ಲ. ಏನಾದರೂ ಮಾಡಬೇಕು ಎಂಬುದು ಪ್ರಕಾಶ್​ ರಾಜ್​ ಅವರು ಆಶಯ. ಅದರ ಫಲವಾಗಿಯೇ ಕಾರ್ಯರೂಪಕ್ಕೆ ಬಂದಿರುವುದು ಅಪ್ಪು ಹೆಸರಿನ ಆಂಬ್ಯುಲೆನ್ಸ್ ಸೇವೆ. ಅದಕ್ಕೆ ಅನೇಕ ಸ್ಟಾರ್​ ನಟರ ಕೈ ಜೋಡಿಸಿರುವುದು ಶ್ಲಾಘನೀಯ. ‘ಬಡವರಿಗೋಸ್ಕರ ಕರ್ನಾಟದಲ್ಲಿ ಅಪ್ಪು ಎಕ್ಸ್​ಪ್ರೆಸ್​ ಎಂಬ ಆಂಬ್ಯುಲೆನ್ಸ್ ಓಡಬೇಕು ಎಂಬ ಆಸೆ ನನ್ನದು ಎಂದು ಶಿವಣ್ಣನ ಬಳಿ ಹೇಳಿದೆ. ಅವರ ಕುಟುಂಬದ ಕಡೆಯಿಂದ ಒಂದು ಆಂಬ್ಯುಲೆನ್ಸ್ ನೀಡಿದರು’ ಎಂದಿದ್ದಾರೆ ಪ್ರಕಾಶ್​ ರೈ.

ಯಶ್​ ಅವರು ಈ ಬಗ್ಗೆ ವೇದಿಕೆಯಲ್ಲೇ ಮಾತಾಡಿದರು. ‘ಇಡೀ ಕರುನಾಡಿಗೆ ಪ್ರಕಾಶ್​ ರಾಜ್​ ಅವರು ಆಂಬ್ಯುಲೆನ್ಸ್ ನೀಡಲು ಮುಂದಾಗಿರುವುದು ಈಗ ಗೊತ್ತಾಯಿತು. ಈಗ ಎಷ್ಟು ಆಂಬ್ಯುಲೆನ್ಸ್ ಆಗಿದೆಯೋ ಅದನ್ನು ಬಿಟ್ಟು ಇನ್ನುಳಿದ ಎಲ್ಲ ಜಿಲ್ಲೆಗೂ ನಾನು ಮತ್ತು ಕೆವಿಎನ್​ ಪ್ರೊಡಕ್ಷನ್​ನವರು ಜೊತೆ ಸೇರಿ ಆಂಬ್ಯುಲೆನ್ಸ್ ನೀಡುತ್ತೇನೆ’ ಎಂದು ಯಶ್​ ಘೋಷಿಸಿದರು.

ಇದನ್ನೂ ಓದಿ
‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
Puneetha Parva: ‘ಮಿಸ್​ ಯೂ ಅಪ್ಪು’: ಪುನೀತ ಪರ್ವ ವೇದಿಕೆಯಲ್ಲಿ ‘ಪವರ್​ ಸ್ಟಾರ್​’ಗೆ ನುಡಿ ನಮನ ಸಲ್ಲಿಸಿದ ಗಣ್ಯರು
‘ನಾನಿರುವವರೆಗೂ ಈ ಹಾಡು ನನ್ನ ಜತೆ ಇರುತ್ತದೆ’; ‘ಪುನೀತ ಪರ್ವ’ ವೇದಿಕೆ ಮೇಲೆ ರಾಘಣ್ಣ ಭಾವುಕ ನುಡಿ
Puneetha Parva: ‘ಪುನೀತ ಪರ್ವ’ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ; ಅರಮನೆ ಮೈದಾನದಲ್ಲಿ ತಾರೆಯರ ಸಂಗಮ

ಪುನೀತ್​ ರಾಜ್​ಕುಮಾರ್​ ಅವರಿಗೆ ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಯಿತು. ಸೂರ್ಯ, ಅಖಿಲ್​ ಅಕ್ಕಿನೇನಿ, ರಾಣಾ ದಗ್ಗುಬಾಟಿ, ಸಿದ್ದಾರ್ಥ್​ ಸೇರಿದಂತೆ ಅನೇಕ ನಟರ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದರು. ಕಮಲ್​ ಹಾಸನ್​ ಮತ್ತು ಅಮಿತಾಭ್​ ಬಚ್ಚನ್​​ ಅವರು ವಿಡಿಯೋ ಮೂಲಕ ಶುಭ ಹಾರೈಸಿದರು. ರಮ್ಯಾ, ಪ್ರಭುದೇವ, ಶಿವರಾಜ್​ಕುಮಾರ್​ ಮುಂತಾದವರು ವೇದಿಕೆ ಮೇಲೆ ಡ್ಯಾನ್ಸ್​ ಮಾಡಿ ಪುನೀತ್​ಗೆ ನಮನ ಸಲ್ಲಿಸಿದರು. ಲಕ್ಷಾಂತರ ಅಭಿಮಾನಿಗಳು ಇದರಲ್ಲಿ ಭಾಗಿ ಆದರು. ತುಂಬ ಅಚ್ಚುಕಟ್ಟಾಗಿ ದೊಡ್ಮನೆ ಕುಟುಂಬದವರು ಈ ಕಾರ್ಯಕ್ರಮ ನಡೆಸಿಕೊಟ್ಟರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.