‘ಅವತಾರ ಪುರಷ 2’ ಚಿತ್ರದಲ್ಲೊಂದು ರ‍್ಯಾಪ್ ಸಾಂಗ್; ಭಿನ್ನ ಗೆಟಪ್​ನಲ್ಲಿ ಬಂದ ಶರಣ್

|

Updated on: Mar 23, 2024 | 6:02 AM

ರ‍್ಯಾಪ್ ಸಾಂಗ್ ಲೋಕದಲ್ಲಿ ಎಂ.ಸಿ. ಬಿಜ್ಜು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಹಾಡನ್ನು ಹಾಡಿದ್ದಾರೆ. ಔರಾ ಹಾಗೂ ಅಭಿನಂದನ್ ಕಶ್ಯಪ್ ಕೂಡ ಧ್ವನಿಯಾಗಿದ್ದಾರೆ. ಈ ಹಾಡಿಗೆ ‘ಇವನೇ ಅವತಾರ ಪುರುಷ’ ಎಂದು ಟೈಟಲ್ ಇಡಲಾಗಿದೆ.

‘ಅವತಾರ ಪುರಷ 2’ ಚಿತ್ರದಲ್ಲೊಂದು ರ‍್ಯಾಪ್ ಸಾಂಗ್; ಭಿನ್ನ ಗೆಟಪ್​ನಲ್ಲಿ ಬಂದ ಶರಣ್
ಶರಣ್
Follow us on

ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ನಿರ್ಮಿಸಿರುವ, ಸಿಂಪಲ್ ಸುನಿ (Simple Suni) ನಿರ್ದೇಶನದ ‘ಅವತಾರ ಪುರುಷ’ ಸಿನಿಮಾ ಮೆಚ್ಚುಗೆ ಪಡೆದಿತ್ತು. ಈ ಕಥೆಯ ಮುಂದುವರಿದ ಭಾಗವಾಗಿ ‘ಅವತಾರ ಪುರುಷ 2’ ಸಿನಿಮಾ ಮೂಡಿಬರುತ್ತಿದೆ. ಎಲೆಕ್ಷನ್ ಹಾಗೂ ಐಪಿಎಲ್ ಗದ್ದಲದ ಮಧ್ಯೆಯೂ ಸಿನಿಮಾ ರಿಲೀಸ್ ಮಾಡೋ ಸಾಹಸಕ್ಕೆ ಪುಷ್ಕರ್ ಮುಂದಾಗಿದ್ದಾರೆ. ಅವರಿಗೆ ಚಿತ್ರದ ಬಗ್ಗೆ ಕಾನ್ಫಿಡೆನ್ಸ್ ಇದೆ. ಈ ಚಿತ್ರದಲ್ಲಿ ಶರಣ್ ಹಾಗೂ ಆಶಿಕಾ ರಂಗನಾಥ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಚಿತ್ರದ ರ‍್ಯಾಪ್ ಸಾಂಗ್ ಒಂದು ಬಿಡುಗಡೆ ಆಗಿದೆ. ಕಣ್ಣಿಗೆ ಹಾಗೂ ಕಿವಿಗೆ ಇದು ಭಿನ್ನ ಅನುಭವ ನೀಡುತ್ತದೆ.

ರ‍್ಯಾಪ್ ಸಾಂಗ್ ಲೋಕದಲ್ಲಿ ಎಂ.ಸಿ. ಬಿಜ್ಜು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಹಾಡನ್ನು ಹಾಡಿದ್ದಾರೆ. ಔರಾ ಹಾಗೂ ಅಭಿನಂದನ್ ಕಶ್ಯಪ್ ಕೂಡ ಧ್ವನಿಯಾಗಿದ್ದಾರೆ. ಈ ಹಾಡಿಗೆ ‘ಇವನೇ ಅವತಾರ ಪುರುಷ’ ಎಂದು ಟೈಟಲ್ ಇಡಲಾಗಿದೆ. ಸಾಂಗ್​ನ ಉದ್ದಕ್ಕೂ ‘ತರವಲ್ಲ ತಂಗಿ..’ ಲೈನ್​ಗಳು ಬಂದು ಹೋಗುತ್ತವೆ. ಇದರ ಜೊತೆಗೆ ‘ಅವತಾರ ಪರುಷ’ನ ಹೊಗಳುವ ಕೆಲಸ ಆಗಿದೆ.

ಹಾಡು ಮಾಡಿದ್ದು ಹೇಗೆ ಎನ್ನುವ ಬಗ್ಗೆ ಸಿಂಪಲ್ ಸುನಿ ಅವರು ಹೇಳಿಕೊಂಡಿದ್ದಾರೆ. ಪುಷ್ಕರ್ ಅವರು ಈ ಹಾಡು ಮಾಡೋಣ ಎಂದು ಕೇಳಿಕೊಂಡಿದ್ದರಂತೆ. ಆದರೆ, ಇದಕ್ಕೆ ಸುನಿ ಬೇಡ ಎಂದಿದ್ದರು. ನಂತರ ನಿರ್ಮಾಪಕರ ಒತ್ತಾಯದ ಬಳಿಕ ಅವರ ಮನಸ್ಸು ಬದಲಾಯಿತು. ಕೆಲವೆ ದಿನಗಳಲ್ಲಿ ಈ ಹಾಡಿನ ಶೂಟಿಂಗ್ ಮಾಡಿ ಮುಗಿಸಲಾಗಿದೆ. ಶಿಶುನಾಳ ಶರೀಫರ ‘ತರವಲ್ಲ ತಂಗಿ ನಿನ್ನ ತಂಬೂರಿ ಸ್ವರ..’ ಹಾಡಿನ ಮೊದಲ ಸಾಲಿನಿಂದ ಈ ಸಾಂಗ್ ಪ್ರಾರಂಭ ಆಗುತ್ತದೆ. ಎಂ.ಸಿ.ಬಿಜ್ಜು ಈ ಸಾಂಗ್​ನ ಬರೆದಿದ್ದಾರೆ.

ಇವನೇ ಅವತಾರ ಪುರುಷ ಸಾಂಗ್..

ಮಾರ್ಚ್ 9ರಂದು ಯುಗಾದಿ ಹಬ್ಬ ಇದೆ. ಇದು ಸಿನಿಮಾಗೆ ಸಹಕಾರಿ ಆಗಲಿದೆ. ಈ ಕಾರಣಕ್ಕೆ ಮಾರ್ಚ್​ 22ರ ಬದಲು ಏಪ್ರಿಲ್ 5ರಂದು ಸಿನಿಮಾ ಬಿಡುಗಡೆ ಮಾಡಿಕೊಳ್ಳಲು ತಂಡ ಮುಂದಾಗಿದೆ. ‘ಚೆನ್ನಾಗಿ ಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ’ ಎಂದು ಹೇಳಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ಈ ಹಾಡಿನಲ್ಲಿ ನಟಿ ಸಾತ್ವಿಕ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಅವತಾರ ಪುರುಷ ಎರಡನೇ ಪಾರ್ಟ್ ರಿಲೀಸ್ ಲೇಟ್ ಆಗಿಲ್ಲ’; ಕಾರಣ ಕೊಟ್ಟ ಶರಣ್

ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಧುಕೋಕಿಲ, ಸಾಯಿಕುಮಾರ್, ಭವ್ಯಾ, ಸುಧಾರಾಣಿ,  ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೊದಲ ಭಾಗದ ಕೊನೆಯಲ್ಲಿ ಒಂದು ಟ್ವಿಸ್ಟ್​ನೊಂದಿಗೆ ಸಿನಿಮಾ ಕೊನೆಗೊಂಡಿತ್ತು. ಎರಡನೇ ಪಾರ್ಟ್ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:43 am, Sat, 23 March 24