ಪಕ್ಕಾ ಡಬಲ್ ಮೀನಿಂಗ್ ಸ್ಟೈಲ್​ನಲ್ಲಿ ಬಂತು ‘ಬ್ಯಾಕ್ ಬೆಂಚರ್ಸ್’ ಟೀಸರ್; ಮತ್ತೊಂದು ಕಾಲೇಜು ಕಥೆ

‘ಹಾಸ್ಟೆಲ್ ಹುಡುಗರು’ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆದಿತ್ತು. ಎಲ್ಲಾ ಹೊಸ ಮುಖಗಳೇ ಈ ಸಿನಿಮಾದಲ್ಲಿ ನಟಿಸಿದ್ದರು. ಈಗ ಮತ್ತೊಂದು ಕಾಲೇಜು ಕಥೆ ತೆರೆಗೆ ಬರಲು ರೆಡಿ ಆಗಿದೆ. ‘ಬ್ಯಾಕ್ ಬೆಂಚರ್ಸ್’ ಚಿತ್ರದ ಟೀಸರ್​ನಲ್ಲಿರುವ ದೃಶ್ಯಗಳು, ಕಾಮಿಡಿ ಪಂಚ್​ಗಳಿಗೆ ಪ್ರೇಕ್ಷಕರೆಲ್ಲ ಮನಸೋತಿದ್ದಾರೆ.

ಪಕ್ಕಾ ಡಬಲ್ ಮೀನಿಂಗ್ ಸ್ಟೈಲ್​ನಲ್ಲಿ ಬಂತು ‘ಬ್ಯಾಕ್ ಬೆಂಚರ್ಸ್’ ಟೀಸರ್; ಮತ್ತೊಂದು ಕಾಲೇಜು ಕಥೆ
ಪಕ್ಕಾ ಡಬಲ್ ಮೀನಿಂಗ್ ಸ್ಟೈಲ್​ನಲ್ಲಿ ಬಂತು ‘ಬ್ಯಾಂಕ್ ಬೇಂಚರ್ಸ್’ ಟೀಸರ್

Updated on: May 11, 2024 | 10:26 PM

ಕಾಲೇಜು ಕಥೆಯನ್ನು ಇಟ್ಟುಕೊಂಡು ಈ ಮೊದಲು ಹಲವು ಸಿನಿಮಾಗಳು ರಿಲೀಸ್ ಆಗಿ ಗಮನ ಸೆಳೆದಿವೆ. ‘ಕಿರಿಕ್ ಪಾರ್ಟಿ’ (Kirik Party), ‘ಹಾಸ್ಟೆಲ್ ಹುಡುಗರು’ ಮೊದಲಾದ ಸಿನಿಮಾಗಳು ಹಿಟ್ ಎನಿಸಿಕೊಂಡಿವೆ. ಈಗ ‘ಬ್ಯಾಕ್ ಬೆಂಚರ್ಸ್’ ಹೆಸರಿನ ಸಿನಿಮಾ ಮೂಡಿಬಂದಿದೆ. ಈ ಚಿತ್ರದ ಟೀಸರ್ ಸಾಕಷ್ಟು ಗಮನ ಸೆಳೆದಿದೆ. ಪಕ್ಕಾ ಡಬಲ್ ಮೀನಿಂಗ್ ಸ್ಟೈಲ್​ನಲ್ಲಿ ಈ ಟೀಸರ್ ಮೂಡಿ ಬಂದಿದೆ. ನೋಡುಗರ ಮುಖದಲ್ಲಿ ನಗು ಮೂಡಿಸಿದೆ.

‘ಹಾಸ್ಟೆಲ್ ಹುಡುಗರು’ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆದಿತ್ತು. ಎಲ್ಲಾ ಹೊಸ ಮುಖಗಳೇ ಈ ಸಿನಿಮಾದಲ್ಲಿ ನಟಿಸಿದ್ದರು. ಈಗ ಮತ್ತೊಂದು ಕಾಲೇಜು ಕಥೆ ತೆರೆಗೆ ಬರಲು ರೆಡಿ ಆಗಿದೆ. ‘ಬ್ಯಾಕ್ ಬೆಂಚರ್ಸ್’ ಚಿತ್ರದ ಟೀಸರ್​ನಲ್ಲಿರುವ ದೃಶ್ಯಗಳು, ಕಾಮಿಡಿ ಪಂಚ್​ಗಳಿಗೆ ಪ್ರೇಕ್ಷಕರೆಲ್ಲ ಮನಸೋತಿದ್ದಾರೆ. ಇದು ಒಂದನೇ ಟೀಸರ್ ಎಂದು ಬರೆಯಲಾಗಿದೆ. ಹೀಗಾಗಿ, ಮತ್ತಷ್ಟು ಟೀಸರ್ ರಿಲೀಸ್ ಆಗಲಿದೆ ಅನ್ನೋದು ಪಕ್ಕಾ ಆಗಿದೆ.

ಬಿ.ಆರ್ ರಾಜಶೇಖರ್ ‘ಬ್ಯಾಕ್ ಬೆಂಚರ್ಸ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕರಾಗಿ, ನಿರ್ದೇಶಕರಾಗಿ ರಾಜಶೇಖರ್ ಹೆಸರು ಮಾಡಿದ್ದಾರೆ. ಈಗ ಅವರು ಹೊಸ ತಂಡವನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಬ್ಯಾಕ್ ಬೆಂಚರ್ಸ್ ಯಾವ ರೀತಿಯಲ್ಲಿ ಇರುತ್ತಾರೆ ಅನ್ನೋದು ಬಹುತೇಕರಿಗೆ ಗೊತ್ತಿರುತ್ತದೆ. ಅದೇ ರೀತಿಯ ತರ್ಲೆ ಈ ಸಿನಿಮಾದಲ್ಲಿ ಇರಲಿದೆ. ಸದ್ಯ ಈ ಟೀಸರ್ ಗಮನ ಸೆಳೆಯುತ್ತಿದೆ. ಟೀಸರ್​ನಲ್ಲಿ ಡಬಲ್ ಮೀನಿಂಗ್ ಜೋಕ್​ಗಳು ಗಮನ ಸೆಳೆದಿವೆ. ಯುವ ತಲೆಮಾರನ್ನು ಗಮನದಲ್ಲಿಟ್ಟುಕೊಂಡು ಟೀಸರ್ ಮಾಡಲಾಗಿದೆ.

ಇದನ್ನೂ ಓದಿ: ‘ಬ್ಯಾಕ್ ಬೆಂಚರ್ಸ್’ ಹೋಳಿ ಆಚರಿಸಿದರೆ ಎಷ್ಟು ಜೋರಾಗಿರುತ್ತೆ ನೀವೇ ನೋಡಿ..

ಈ ಮೊದಲು ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡುಗಳು ರಿಲೀಸ್ ಆಗಿದ್ದವು. ಈಗ ಟೀಸರ್ ಮೂಲಕ ತಂಡ ಕುತೂಹಲ ಮೂಡಿಸಿದೆ. ಈ ಚಿತ್ರದ ಕಥೆಯನ್ನು ನಿರ್ದೇಶಕ ರಾಜಶೇಖರ್ ವೀಕ್ಷಕರ ಅಂದಾಜಿಗೆ ನಿಲುಕದಂತೆ ರೂಪಿಸಿದ್ದಾರಂತೆ.  ‘ಪಿಪಿ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ರಾಜಶೇಖರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜತಿನ್ ಆರ್ಯನ್, ರಂಜನ್, ಆಕಾಶ್ ಎಂ.ಪಿ, ಸುಚೇಂದ್ರ ಪ್ರಸಾದ್, ಶಶಾಂಕ್ ಸಿಂಹ, ಅರವಿಂದ್ ಕುಪ್ಳೀಕರ್, ಕುಂಕುಮ್ ಹೆಚ್, ಮಾನ್ಯ ಗೌಡ, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ಚತುರ್ಥಿ ರಾಜ್, ವಿಜಯ್ ಪ್ರಸಾದ್, ಗೌರವ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:25 pm, Sat, 11 May 24