Bhajarangi 2 Teaser: ಶಿವಣ್ಣನ ಹುಟ್ಟುಹಬ್ಬದಂದೇ ಭಜರಂಗಿ-2 ಸಿನಿಮಾ ಟೀಸರ್ ಬಿಡುಗಡೆ​; ರಗಡ್​ ಲುಕ್​​ನಲ್ಲಿ ಮಿಂಚುತ್ತಿರುವ ಹ್ಯಾಟ್ರಿಕ್ ಹೀರೋ

| Updated By: Lakshmi Hegde

Updated on: Jul 12, 2021 | 1:19 PM

ಭಜರಂಗಿ-2 ಟೀಸರ್​: ಸಿನಿಮಾದಲ್ಲಿ ಶಿವರಾಜ್​ಕುಮಾರ್ ಜತೆ ಭಾವನಾ ಮೆನನ್​ ಅಭಿನಯಿಸಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನಿರ್ದೇಶನವಿದೆ. ಇದೀಗ ಟೀಸರ್​​ನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆ ಮಾಡಲಾಗಿದೆ.

Bhajarangi 2 Teaser: ಶಿವಣ್ಣನ ಹುಟ್ಟುಹಬ್ಬದಂದೇ ಭಜರಂಗಿ-2 ಸಿನಿಮಾ ಟೀಸರ್ ಬಿಡುಗಡೆ​; ರಗಡ್​ ಲುಕ್​​ನಲ್ಲಿ ಮಿಂಚುತ್ತಿರುವ ಹ್ಯಾಟ್ರಿಕ್ ಹೀರೋ
ಭಜರಂಗಿ-2 ಸಿನಿಮಾದಲ್ಲಿ ಶಿವರಾಜ್​ ಕುಮಾರ್​ ರಗಡ್​ ಲುಕ್​​
Follow us on

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಅವರಿಗೆ ಇಂದು 59ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇದೇ ಹೊತ್ತಲ್ಲಿ ಅವರ ಭಜರಂಗಿ-2 (Bhajarangi 2) ಸಿನಿಮಾದ ಟೀಸರ್ (Teaser) ಬಿಡುಗಡೆ ಮಾಡಲಾಗಿದೆ. ಒಂದು ನಿಮಿಷ 23 ಸೆಕೆಂಡ್​ಗಳ 4k ಟೀಸರ್​​ನಲ್ಲಿ ಶಿವಣ್ಣನ ಖಡಕ್​ ಲುಕ್​ ಗಮನಸೆಳೆಯುತ್ತದೆ. ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ-2 ಸಿನಿಮಾ ತಂಡ ನೀಡಿರುವ ವಿಶೇಷ ಉಡುಗೊರೆ ಇದಾಗಿದ್ದು, ಫ್ಯಾನ್ಸ್​ ಫುಲ್​ ಖುಷಿಯಾಗಿದ್ದಾರೆ.

ಭಜರಂಗಿ-2 ಸಿನಿಮಾ ಜಯಣ್ಣ ಫಿಲ್ಮ್ಸ್​ ನಿರ್ಮಾಣದಲ್ಲಿ ಮೂಡಿಬಂದಿದ್ದು, ಎ.ಹರ್ಷ ನಿರ್ದೇಶನ ಮಾಡಿದ್ದಾರೆ. ಶಿವಣ್ಣನ ಬರ್ತ್​ ಡೇ ದಿನ ಭಜರಂಗಿ-2 ಸಿನಿಮಾದ ಟೀಸರ್​ ಬಿಡುಗಡೆ ಮಾಡುವುದಾಗಿ ಹರ್ಷಾ ಅವರು ಜು.8ರಂದು ಟ್ವೀಟ್​ ಮಾಡಿದ್ದರು. ಶಿವಣ್ಣ ರಗಡ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದು, ಒರಟಾದ ನೋಟ ಬೀರುತ್ತ ಹೆಜ್ಜೆ ಹಾಕುತ್ತಿರುವ ದೃಶ್ಯದ ಟೀಸರ್ ಇದಾಗಿದೆ.
ಶಿವಣ್ಣ ಮತ್ತು ಐಂದ್ರಿತಾ ರೈ ಅಭಿನಯದ ಭಜರಂಗಿ ಸಿನಿಮಾ 2013ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಅದೊಂದು ಆ್ಯಕ್ಷನ್​ ಸಿನಿಮಾ ಆಗಿತ್ತು. ಇದೀಗ ಭಜರಂಗಿ-2 ಬಗ್ಗೆಯೂ ಬಹು ನಿರೀಕ್ಷೆ ಇದೆ.

ಸಿನಿಮಾದಲ್ಲಿ ಶಿವರಾಜ್​ಕುಮಾರ್ ಜತೆ ಭಾವನಾ ಮೆನನ್​ ಅಭಿನಯಿಸಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನಿರ್ದೇಶನವಿದೆ. ಇದೀಗ ಟೀಸರ್​​ನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಟೀಸರ್ ರಿಲೀಸ್​ ಆದ 2 ತಾಸಿನಲ್ಲಿ ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದುಕೊಂಡಿದೆ. ಸದ್ಯ ಟ್ರೆಂಡ್ ಆಗುತ್ತಿದೆ. ಈ ಬಾರಿ ಶಿವರಾಜ್​ ಕುಮಾರ್​ ಕೊವಿಡ್ 19 ಕಾರಣದಿಂದ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕುಟುಂಬದವರೊಂದಿಗೆ ಕೇಕ್​ ಕತ್ತರಿಸಿದ್ದಾರೆ.

ಇದನ್ನೂ ಓದಿ: ಯಾವುದೇ ಕಪ್ಪು ಚುಕ್ಕೆ ಇಲ್ಲ, ನನಗೆ ಅನುಭವ ಚೆನ್ನಾಗಿದೆ, ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗಿದೆ: ಸಚಿವ ಉಮೇಶ ಕತ್ತಿ

Bajrangi 2 Film Teaser released on shivrajkumar birthday as Special Gift

 

Published On - 1:17 pm, Mon, 12 July 21