ಟಾಪ್ 6ನಿಂದ ಧನುಶ್ ಎಲಿಮಿನೇಟ್; ಬಿದ್ದ ವೋಟ್ ಇಷ್ಟೇನಾ?

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಆರಂಭವಾಗಿದ್ದು, ಟಾಪ್ 6ರಲ್ಲಿ ಧನುಶ್ ಮೊದಲ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದಾರೆ. ಗೀತಾ ಧಾರಾವಾಹಿ ಖ್ಯಾತಿಯ ಧನುಶ್ ಉತ್ತಮ ಟಾಸ್ಕ್ ಪರ್ಫಾರ್ಮರ್ ಆಗಿದ್ದರೂ, ಮನೆಯಲ್ಲಿ ಸೈಲೆಂಟ್ ಆಗಿದ್ದ ಕಾರಣ ಹೊರಬಂದಿರಬಹುದೆಂದು ಅಂದಾಜಿಸಲಾಗಿದೆ. ಈಗ ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ, ಕಾವ್ಯಾ, ರಘು ಟಾಪ್ 5ರಲ್ಲಿದ್ದು, ರಾತ್ರಿ ವಿನ್ನರ್ ಘೋಷಣೆ ಆಗಲಿದೆ.

ಟಾಪ್ 6ನಿಂದ ಧನುಶ್ ಎಲಿಮಿನೇಟ್; ಬಿದ್ದ ವೋಟ್ ಇಷ್ಟೇನಾ?
ಧನುಶ್

Updated on: Jan 18, 2026 | 7:14 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಗ್ರ್ಯಾಂಡ್ ಫಿನಾಲೆ ಆರಂಭ ಆಗಿದೆ. ಜನವರಿ 18ರ ಮಧ್ಯಾಹ್ನ ಈ ಪ್ರಕ್ರಿಯೆ ಶುರುವಾಗಿದ್ದು, ಆರು ಗಂಟೆಗೆ ಕಲರ್ಸ್ ಹಾಗೂ ಜಿಯೋ ಹಾಟ್​​ಸ್ಟರ್​ನಲ್ಲಿ ಪ್ರಸಾರ ಆರಂಭ ಆಗಿದೆ. ರಂಗು ರಂಗಾದ ವೇದಿಕೆ ಮೇಲೆ ಸುದೀಪ್ ಅವರು ಆಗಮಿಸಿದರು. ನಂತರ ವಿವಿಧ ರೀತಿಯ ಡ್ಯಾನ್ಸ್ ಕಾರ್ಯಕ್ರಮ ಇತ್ತು. ಕಿಚ್ಚ ಸುದೀಪ್ ಅವರು ಮೊದಲು ಎಲಿಮಿನೇಟ್ ಆದ ವ್ಯಕ್ತಿ ಹೆಸರನ್ನು ಘೋಷಣೆ ಮಾಡಿದರು.

ಸೀಸನ್ 12ರ ಟಾಪ್ 6ರಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯಾ ಶೈವ, ರಘು ಹಾಗೂ ಧನುಶ್ ಇದ್ದರು. ಈ ಪೈಕಿ ಅತಿ ಕಡಿಮೆ ಮತ ಬಿದ್ದಿದ್ದು ಧನಶ್​ಗೆ. ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅವರು ಎಲಿಮಿನೇಟ್ ಆಗುತ್ತಾರೆ ಎಂದು ಬಹುತೇಕರು ಊಹಿಸಿದ್ದರು.

ಧನುಶ್ ಅವರು ‘ಗೀತಾ’ ಧಾರಾವಾಹಿ ಮೂಲಕ ಫೇಮಸ್ ಆದವರು. ಅವರಿಗೆ ಕಿರುತೆರೆ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಉತ್ತಮವಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಉತ್ತಮವಾಗಿ ಆಡುತ್ತಿದ್ದರು. ಟಾಸ್ಕ್ ವಿನ್ ಆಗಿ ಟಾಪ್ 6ಗೆ ಅವರು ಅರ್ಹತೆ ಪಡೆದುಕೊಂಡಿದ್ದರು.

ಧನುಶ್ ಅವರು ಟಾಸ್ಕ್ ಉತ್ತಮವಾಗಿ ಆಡಿದರೂ ಉಳಿದ ಸಮಯದಲ್ಲಿ ಸೈಲೆಂಟ್ ಆಗಿಯೇ ಇರುತ್ತಿದ್ದರು. ಯಾರ ಬಗ್ಗೆಯೂ ಅವರು ಮಾತನಾಡುತ್ತಿರಲಿಲ್ಲ. ಯಾವುದೇ ವಿವಾದ ಬಂದರೂ ದೂರ ಸರಿಯುತ್ತಿದ್ದರು. ಬಿಗ್ ಬಾಸ್​​ನಲ್ಲಿ ಈ ರೀತಿಯ ಗುಣ ಹೆಚ್ಚು ಕೆಲಸಕ್ಕೆ ಬರೋದಿಲ್ಲ. ಅವರು ಹೊರ ಹೋಗಲು ಇದುವೇ ಕಾರಣ ಆಯಿತೇ ಎಂಬ ಪ್ರಶ್ನೆ ಮೂಡಿದೆ. ಅವರಿಗೆ 1 ಕೋಟಿ 27 ಲಕ್ಷ ವೋಟ್ ಬಿದ್ದಿದೆ. ವಿನ್ನರ್ ವೋಟ್ 40 ಕೋಟಿ ಮೇಲಿದೆ. ಹೀಗಾಗಿ, ಅದಕ್ಕೆ ಹೋಲಿಸಿದರೆ ಇದು ಕಡಿಮೆಯೇ.

ಇದನ್ನೂ ಓದಿ: ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ

ಬಿಗ್ ಬಾಸ್​​ನಲ್ಲಿ ಸದ್ಯ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯಾ ಶೈವ, ರಘು ಇದ್ದಾರೆ. ರಾತ್ರಿ ವೇಳೆಗೆ ವಿನ್ನರ್ ಹೆಸರು ಘೋಷಣೆ ಆಗಲಿದೆ. ಈ ಐವರ ಪೈಕಿ ಯಾರು ಕಪ್ ಎತ್ತುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.