ಎಲ್ಲ ಚಿತ್ರಗಳ ಹಿಂದಿಕ್ಕಿದ ಪ್ರಿನ್ಸ್, ಅಲ್ಲು ಅರ್ಜುನ್: ಇಬ್ಬರ ಮಧ್ಯೆ ನಡೀತಿದೆ ಬಿಗ್ ಪೈಪೋಟಿ

ಟಾಲಿವುಡ್ ಬಾಕ್ಸಾಫಿಸ್‌ನಲ್ಲಿ ದೊಡ್ಡ ಪೈಪೋಟಿ ಸೃಷ್ಟಿಯಾಗಿದೆ. ನಾ ಮುಂದು ತಾ ಮುಂದು ಅಂತ ಸ್ಟಾರ್ ನಟರು ಸ್ಪರ್ಧೆಗಿಳಿದು ಬಿಟ್ಟಿದ್ದಾರೆ. ಟಾಲಿವುಡ್ ಪ್ರಿನ್ಸ್ ಮತ್ತು ಸ್ಟೈಲಿಶ್​ ಸ್ಟಾರ್​ ನಡುವೆ ದಾಖಲೆಗಳನ್ನ ಬರಿಯೋ, ಮುರಿಯೋ ಆಟ ಜೋರಾಗಿದೆ. ಅಲಾ ವೈಕುಂಠಪುರಮುಲೋ ವರ್ಸಸ್ ಸರಿಲೇರು ನೀಕೆವ್ವರು… ಪ್ರಿನ್ಸ್ ಮಹೇಶ್​ ಬಾಬು ವರ್ಸಸ್ ಸ್ಟೈಲಿಶ್​​ ಸ್ಟಾರ್​ ಅಲ್ಲು ಅರ್ಜುನ್. ಸದ್ಯ ಟಾಲಿವುಡ್​ನಲ್ಲಿ ಸೌಂಡು ಮಾಡುತ್ತಿರುವ ಹೆಸರುಗಳು. ತೆಲುಗು ಸಿನಿರಂಗದ ಸ್ಟಾರ್‌ಗಳಾದ ಅಲ್ಲು ಅರ್ಜುನ್ ಮತ್ತು ಮಹೇಶ್‌ ಬಾಬು ಒಟ್ಟೊಟ್ಟಿಗೆ ಬಾಕ್ಸ್‌ಆಫೀಸ್ ಕಾಳಕ್ಕಿಳಿದಿದ್ದು, ಎಲ್ಲರ […]

ಎಲ್ಲ ಚಿತ್ರಗಳ ಹಿಂದಿಕ್ಕಿದ ಪ್ರಿನ್ಸ್, ಅಲ್ಲು ಅರ್ಜುನ್: ಇಬ್ಬರ ಮಧ್ಯೆ ನಡೀತಿದೆ ಬಿಗ್ ಪೈಪೋಟಿ
ಸಾಧು ಶ್ರೀನಾಥ್​

Updated on: Jan 15, 2020 | 1:59 PM

ಟಾಲಿವುಡ್ ಬಾಕ್ಸಾಫಿಸ್‌ನಲ್ಲಿ ದೊಡ್ಡ ಪೈಪೋಟಿ ಸೃಷ್ಟಿಯಾಗಿದೆ. ನಾ ಮುಂದು ತಾ ಮುಂದು ಅಂತ ಸ್ಟಾರ್ ನಟರು ಸ್ಪರ್ಧೆಗಿಳಿದು ಬಿಟ್ಟಿದ್ದಾರೆ. ಟಾಲಿವುಡ್ ಪ್ರಿನ್ಸ್ ಮತ್ತು ಸ್ಟೈಲಿಶ್​ ಸ್ಟಾರ್​ ನಡುವೆ ದಾಖಲೆಗಳನ್ನ ಬರಿಯೋ, ಮುರಿಯೋ ಆಟ ಜೋರಾಗಿದೆ.

ಅಲಾ ವೈಕುಂಠಪುರಮುಲೋ ವರ್ಸಸ್ ಸರಿಲೇರು ನೀಕೆವ್ವರು… ಪ್ರಿನ್ಸ್ ಮಹೇಶ್​ ಬಾಬು ವರ್ಸಸ್ ಸ್ಟೈಲಿಶ್​​ ಸ್ಟಾರ್​ ಅಲ್ಲು ಅರ್ಜುನ್. ಸದ್ಯ ಟಾಲಿವುಡ್​ನಲ್ಲಿ ಸೌಂಡು ಮಾಡುತ್ತಿರುವ ಹೆಸರುಗಳು. ತೆಲುಗು ಸಿನಿರಂಗದ
ಸ್ಟಾರ್‌ಗಳಾದ ಅಲ್ಲು ಅರ್ಜುನ್ ಮತ್ತು ಮಹೇಶ್‌ ಬಾಬು ಒಟ್ಟೊಟ್ಟಿಗೆ ಬಾಕ್ಸ್‌ಆಫೀಸ್ ಕಾಳಕ್ಕಿಳಿದಿದ್ದು, ಎಲ್ಲರ ಕಣ್ಣು ಇವರಿಬ್ಬರ ಮೇಲ ಬಿದ್ದಿದೆ.

ಒಂದು ದಿನ ಅಂತರದಲ್ಲಿ ತೆರೆಗೆ ಬಂದ ಈ ಸಿನಿಮಾಗಳು ಧೂಳೇಬ್ಬಿಸುತ್ತಿವೆ. ಅದ್ರಲ್ಲೂ ಅಲ್ಲು ಅರ್ಜುನ್​ ಅಭಿನಯದ ಅಲಾ ವೈಕುಂಠ ಪುರ ಮುಲೋ ಸಿನಿಮಾಕ್ಕೆ ವಿದೇಶದಲ್ಲಿ ದೊಡ್ಡ ಸ್ವಾಗತ ಸಿಕ್ಕಿದೆ. ಅಖಾಡದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಇನ್ನು ಮಹೇಶ್ ಬಾಬು ಅಭಿನಯದ ಸರಿಲೇರು ನಿಕ್ಕೆವ್ವರು ಸಿನಿಮಾ ಕೂಡ ಬಾಕ್ಸ್‌ಆಫೀಸ್‌ನಲ್ಲಿ ಕಾರಬಾರು ಮಾಡುತ್ತಿದೆ. ಮೂರು ದಿನಕ್ಕೆ 103 ಕೋಟಿ ಕಲೆಹಾಕಿದೆ. ಈ ಮೂಲಕ ಪ್ರಿನ್ಸ್ ಮತ್ತೊಮ್ಮೆ ಬಿಗ್​ ಓಪನಿಂಗ್​ ಪಡೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ತೆರೆಗೆ ಬಂದ ಬಾಲಿವುಡ್​ನ ತಾನಾಜಿ ಮತ್ತು ಛಪಕ್​ ಸಿನಿಮಾಗಳು, ಸೌತ್​ ಸಿನಿಮಾಗಳ ಮುಂದೆ ಮಂಕಾಗಿ ಹೋಗಿವೆ. ಅದ್ರಲ್ಲೂ ಅಲ್ಲು ಅರ್ಜುನ್​ ಸಿನಿಮಾ ರಜನಿ ದರ್ಬಾರನ್ನೇ ಹಿಂದಿಕ್ಕಿ ದರ್ಬಾರ್ ಮಾಡುತ್ತಿದೆ.ಆ ಮಟ್ಟಿಗೆ ಜನವರಿ 12ಕ್ಕೆ ತೆರೆಗೆ ಬಂದ ಸ್ಟೈಲಿಶ್​ ಸ್ಟಾರ್​ ಓಟ ಮುಂದುವರಿದಿದೆ. ಆದ್ರೆ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಮಹೇಶ್​ ಬಾಬು ಸಿನಿಮಾವನ್ನ ಬಿಗ್​ ಓಪನಿಂಗ್​ ಪಡೆದುಕೊಂಡ ಅಲಾ ವೈಕುಂಠ ಪುರಮುಲೋ ಸಿನಿಮಾ ಸೋಲಿಸೋದು ಪಕ್ಕಾ ಅನ್ನೋ ಸೂಚನೆ ಕೊಟ್ಟಿದೆ.

ಒಟ್ನಲ್ಲಿ ಬಾಕ್ಸ್‌ಆಫಿಸ್​ನಲ್ಲಿ ಅಖಾಡಕ್ಕಿಳಿದ ಈ ಎರಡೂ ಸಿನಿಮಾಗಳ ನಡುವೆ ನೆಕ್‌ ಟೂ ನೆಕ್ ಫೈಟ್ ಇದ್ದು, ಇವುಗಳಲ್ಲಿ ಅತಿ ಹೆಚ್ಚು ಮೊತ್ತ ಕಲೆಹಾಕೋದು ಯಾರು? ಹೊಸ ದಾಖಲೆ ಬರೆಯೋದು ಯಾರು ಅನ್ನೋ ಕುತೂಹಲ ಟಾಲಿವುಡ್​ನಲ್ಲಿ ಮೂಡಿದೆ.

Published On - 8:12 am, Wed, 15 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us