ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್​ಗೆ ಕೈದಿ ನಂಬರ್ ನೀಡಿದ ಜೈಲಿನ ಅಧಿಕಾರಿಗಳು

| Updated By: ರಾಜೇಶ್ ದುಗ್ಗುಮನೆ

Updated on: Oct 24, 2023 | 2:32 PM

ಅನರ್ಹರ ಸಾಲಿನಲ್ಲಿ ಅವರು ದೊಡ್ಮನೆ ಸೇರಿದರು. ಬಿಗ್ ಬಾಸ್ ಮನೆಯಲ್ಲಿ ಎರಡು ವಾರಗಳ ಕಾಲ ವರ್ತೂರು ಸಂತೋಷ್ ಇದ್ದರು. ಮೂರನೇ ವಾರ ಆರಂಭಕ್ಕೂ ಮೊದಲೇ ಅವರು ಬಿಗ್ ಬಾಸ್​ನಿಂದ ಹೊರ ಬಂದಿದ್ದಾರೆ.

ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್​ಗೆ ಕೈದಿ ನಂಬರ್ ನೀಡಿದ ಜೈಲಿನ ಅಧಿಕಾರಿಗಳು
ವರ್ತೂರು ಸಂತೋಷ್
Follow us on

ವರ್ತೂರು ಸಂತೋಷ್ ಅವರು ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ಜೈಲು ಸೇರಿದ್ದಾರೆ. ಅವರನ್ನು ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವರ್ತೂರು ಸಂತೋಷ್ (Santosh) ಅವರನ್ನು ಇಡಲಾಗಿದೆ. ಸದ್ಯ ಅವರಿಗೆ ಕೈದಿ ಸಂಖ್ಯೆ ನೀಡಲಾಗಿದೆ. ಕಾರಾಗೃಹ ಅಧಿಕಾರಿಗಳು ಸಂತೋಷ್​ಗೆ ವಿಚಾರಣಾಧೀನ ಕೈದಿ ಸಂಖ್ಯೆ 10935 ಎಂಬ ನಂಬರ್ ನೀಡಿದ್ದಾರೆ. ಅವರು ಬಿಗ್ ಬಾಸ್ ಗೆಲ್ಲಬೇಕು ಎಂಬ ಕನಸು ದುರಂತ ಅಂತ್ಯ ಕಂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಅತಿಥಿಯಾಗಿ ವರ್ತೂರು ಸಂತೋಷ್ ಕಾಲಿಟ್ಟರು. ಅವರಿಗೆ ಪ್ರೇಕ್ಷಕರಿಂದ ಹೆಚ್ಚಿನ ವೋಟ್ ಸಿಗದೇ ಇದ್ದ ಕಾರಣ ಮನೆ ಒಳಗೆ ಹೋಗುವುದು ಅನುಮಾನ ಆಗಿತ್ತು. ಕೊನೆಗೆ ಅನರ್ಹರ ಸಾಲಿನಲ್ಲಿ ಅವರು ದೊಡ್ಮನೆ ಸೇರಿದರು. ಬಿಗ್ ಬಾಸ್ ಮನೆಯಲ್ಲಿ ಎರಡು ವಾರಗಳ ಕಾಲ ವರ್ತೂರು ಸಂತೋಷ್ ಇದ್ದರು. ಮೂರನೇ ವಾರ ಆರಂಭಕ್ಕೂ ಮೊದಲೇ ಅವರು ಬಿಗ್ ಬಾಸ್​ನಿಂದ ಹೊರ ಬಂದಿದ್ದಾರೆ.

ಬಿಗ್ ಬಾಸ್ ಮನೆಗೆ ಹೋಗುವ ಸಂದರ್ಭದಲ್ಲಿ ಅವರು ಕತ್ತಿಗೆ ಲಾಕೆಟ್​ ಒಂದನ್ನು ಹಾಕಿದ್ದರು. ಇದು ಹುಲಿಯ ಉಗುರಿನಿಂದ ಮಾಡಲ್ಪಟ್ಟಿತ್ತು. ಈ ಸಂಬಂಧ ಕೇಸ್ ದಾಖಲಿಸಲಾಯಿತು. ಕನ್ಫೆಷನ್ ರೂಂಗೆ ಬರುವಂತೆ ಸಂತೋಷ್​ಗೆ ಸೂಚಿಸಲಾಯಿತು. ಅವರನ್ನು ಬಿಗ್ ಬಾಸ್ ಮನೆ ಹೊರಗೆ ಕರೆತಂದ ಬಳಿಕ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದರು.

ಇದನ್ನೂ ಓದಿ: ಹುಲಿ ಉಗುರು: ವರ್ತೂರು ಸಂತೋಷ್​ ಬಳಿಕ ದರ್ಶನ್​, ವಿನಯ್​ ಗುರೂಜಿ ವಿರುದ್ಧ ದೂರು ದಾಖಲು

ಅರಣ್ಯಾಧಿಕಾರಿಗಳು ಸಂತೋಷ್ ಹೊಂದಿದ್ದ ಉಗುರನ್ನು ಪರಿಶೀಲನೆ ನಡೆಸಿದ್ದು, ಅದು ಹುಲಿಯದ್ದೇ ಎನ್ನುವುದು ಖಚಿತವಾಗಿದೆ. ಆ ಬಳಿಕ ಅವರನ್ನು ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಅವರಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಹುಲಿ ಉಗುರು ಹೊಂದಿದ್ದ ಪ್ರಕರಣದಲ್ಲಿ ಸದ್ಯ ಸಂತೋಷ್ ಜೈಲಿನಲ್ಲಿದ್ದಾರೆ. ಹೀಗಾಗಿ, ಅವರಿಗೆ ಕೈದಿ ಸಂಖ್ಯೆ ನೀಡಲಾಗಿದೆ.

ಹಳ್ಳಿಕಾರ್ ದನದ ತಳಿಯನ್ನು ರಕ್ಷಿಸಲು ಸಂತೋಷ್ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಅವರು ಬಿಗ್ ಬಾಸ್​ಗೆ ಬಂದಾಗ ಮೈಮೇಲೆ 400 ಗ್ರಾಂ ಚಿನ್ನ ಇತ್ತು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ