ಸೆಲ್ಫಿಗೆ ಮುಗಿಬಿದ್ದಿ ಜನ, ತಬ್ಬಿಬ್ಬಾದ ಬಾಲಿವುಡ್ ಕ್ವೀನ್ ಕಂಗಾನಾ

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದ್ಯ ತಲೈವಿ ಆಗಿ ಟಾಲಿವುಡ್, ಕಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಆದ್ರೆ ಕಂಗನಾ ಇತ್ತೀಚೆಗೆ ಹೈದರಾಬಾದ್​​ನಲ್ಲಿ ನಡೆದ ಒಂದು ಘಟನೆ ಶಾಕ್​ಗೆ ಒಳಗಾಗುವಂತೆ ಮಾಡಿತ್ತಂತೆ. ಕಂಗನಾ ರಣಾವತ್. ಬಾಲಿವುಡ್‌ನಲ್ಲಿ ಕ್ವೀನ್‌.. ಸದ್ಯ ಈ ಬ್ಯೂಟಿ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವತಾರದಲ್ಲಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಆ ಪಾತ್ರಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ಕಂಗನಾ ತಲೈವಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಈ ಸಿನಿಮಾದ ಶೂಟಿಂಗ್‌ ವೇಳೆ ನಡೆದ ಘಟನೆ […]

ಸೆಲ್ಫಿಗೆ ಮುಗಿಬಿದ್ದಿ ಜನ, ತಬ್ಬಿಬ್ಬಾದ ಬಾಲಿವುಡ್ ಕ್ವೀನ್ ಕಂಗಾನಾ
Follow us
ಸಾಧು ಶ್ರೀನಾಥ್​
|

Updated on:Dec 16, 2019 | 4:18 PM

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದ್ಯ ತಲೈವಿ ಆಗಿ ಟಾಲಿವುಡ್, ಕಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಆದ್ರೆ ಕಂಗನಾ ಇತ್ತೀಚೆಗೆ ಹೈದರಾಬಾದ್​​ನಲ್ಲಿ ನಡೆದ ಒಂದು ಘಟನೆ ಶಾಕ್​ಗೆ ಒಳಗಾಗುವಂತೆ ಮಾಡಿತ್ತಂತೆ.

ಕಂಗನಾ ರಣಾವತ್. ಬಾಲಿವುಡ್‌ನಲ್ಲಿ ಕ್ವೀನ್‌.. ಸದ್ಯ ಈ ಬ್ಯೂಟಿ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವತಾರದಲ್ಲಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಆ ಪಾತ್ರಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ಕಂಗನಾ ತಲೈವಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಈ ಸಿನಿಮಾದ ಶೂಟಿಂಗ್‌ ವೇಳೆ ನಡೆದ ಘಟನೆ ಬಗ್ಗೆ ಕಂಗನಾ ಹೇಳಿದ್ದನ್ನ ಕೇಳಿ ಅಭಿಮಾನಿಗಳು ಹೀಗೂ ಉಂಟೇ ಅಂತಿದ್ದಾರೆ.

ಹೈದರಾಬಾದ್​ನ ರಾಮನಾಯ್ಡು ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಸೆಟ್ ಹಾಕಿ ಚಿತ್ರತಂಡ ಇತ್ತೀಚೆಗೆ ತಲೈವಿ ಸಿನಿಮಾದ ಚಿತ್ರೀಕರಣ ಮಾಡುತ್ತಿತ್ತಂತೆ. ಈ ವೇಳೆ ಕಂಗನಾನನ್ನ ಕಂಡ ಅಭಿಮಾನಿಗಳು ಹಾಗೂ ಅಲ್ಲಿಯೇ ಇದ್ದ ಸುತ್ತಮುತ್ತಲಿನ ಜನ್ರು ಕಂಗನಾ ಜೊತೆ ಸೆಲ್ಫಿ ತೆಗೆದುಕೊಳ್ಳೊಕೆ ಮುಗಿಬಿದ್ದಿದ್ರಂತೆ. ಆಗ ಕಂಗನಾಗೆ ಕೊಂಚ ಇರಿಟೇಶನ್ ಕೂಡ ಆಗಿ ನಂತರ ಶೂಟಿಂಗ್ ಸ್ಪಾಟ್‌​​ನಲ್ಲಿ ಮೊಬೈಲ್ ತರದ ಹಾಗೆ ನೋಡಿಕೊಳ್ಳುವಂತೆ ಸೂಚಿಸಿದ್ರಂತೆ.

ಕಂಗನಾ ತಲೈವಿ ಅವತಾರಕ್ಕೆ ಅಭಿಮಾನಿಗಳು ದಿಲ್ ಖುಷ್ ಆಗಿ ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಆದ್ರೆ ಸೌತ್ ಸಿನಿರಸಿಕರ ಕ್ರೇಜಿ ಕ್ವೀನ್ ತಾರೆಗೆ ಇರಿಸು ಮುರಿಸು ಉಂಟಾ ಮಾಡಿದೆ. ಹೀಗಾಗಿ ಸುತ್ತಲಿದ್ದ ಬೌನ್ಸರ್​ಗಳ ಸಹಾಯದಿಂದ ಕಂಗನಾ ಪಾರಾಗಿ ಹೊರ ಬಂದ ನಂತರ ಅಲ್ಲಿ ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಈಗಾಗಲೇ ಜಯಲಲಿತಾ ಪಾತ್ರದಲ್ಲಿರುವ ಕಂಗನಾ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಪಾತ್ರವನ್ನ ಕೆಲ ಅಭಿಮಾನಿಗಳು ಇಷ್ಟ ಪಟ್ಟರೆ, ಕೆಲವರು ಕಂಗನಾಗೆ ಈ ಪಾತ್ರ ಅಷ್ಟೊಂದು ಮ್ಯಾಚ್ ಆಗಿಲ್ಲ ಅನ್ನೋ ಅಭಿಪ್ರಾಯ ಹೊರ ಹಾಕಿದ್ದಾರೆ. ಈ ನಡುವೆ ಸೌತ್ ಸಿನಿರಸಿಕರ ಕ್ರೇಜ್‌ಗೆ ಕಂಗಾನಾ ತಬ್ಬಿಬ್ಬು ಆಗಿದ್ದು ಮಾತ್ರ ಸುಳ್ಳಲ್ಲ.

Published On - 4:13 pm, Mon, 16 December 19

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್