ಸುಶಾಂತ್ ಸಿಂಗ್ ಸಾವು ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಬಿಐ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ದಿವಂಗತ ನಟ ವಾಸವಾಗಿದ್ದ ಮುಂಬೈನ ಬಾಂದ್ರಾದಲ್ಲಿರುವ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿತು. ತನಿಖಾಧಿಕಾರಿಗಳು, ಪ್ಲ್ಯಾಟ್‌ನಲ್ಲಿ ಸುಶಾಂತ್ನೊಂದಿಗೆ ವಾಸವಿದ್ದ ಸಿದ್ಧಾರ್ಥ ಪಿತಾನಿ, ನಟನ ಅಡಿಗೆಯವ ನೀರಜ್ ಹಾಗೂ ಅಪಾರ್ಟ್ಮೆಂಟ್ ಹೌಸ್ಕೀಪಿಂಗ್ ವಿಭಾಗದಲ್ಲಿ ಕೆಲಸ ಮಾಡುವ ದೀಪೇಶ್ ಅವರ ವಿಚಾರಣೆ ನಡೆಸಿದರು. ಜೂನ್ 13 ಮತ್ತು 14 ರಂದು ಫ್ಲ್ಯಾಟ್ನಲ್ಲಿ ಏನು ನಡೆಯಿತೆನ್ನುವ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಿದರೆಂದು ತಿಳಿದು […]
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ದಿವಂಗತ ನಟ ವಾಸವಾಗಿದ್ದ ಮುಂಬೈನ ಬಾಂದ್ರಾದಲ್ಲಿರುವ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿತು.
ತನಿಖಾಧಿಕಾರಿಗಳು, ಪ್ಲ್ಯಾಟ್‌ನಲ್ಲಿ ಸುಶಾಂತ್ನೊಂದಿಗೆ ವಾಸವಿದ್ದ ಸಿದ್ಧಾರ್ಥ ಪಿತಾನಿ, ನಟನ ಅಡಿಗೆಯವ ನೀರಜ್ ಹಾಗೂ ಅಪಾರ್ಟ್ಮೆಂಟ್ ಹೌಸ್ಕೀಪಿಂಗ್ ವಿಭಾಗದಲ್ಲಿ ಕೆಲಸ ಮಾಡುವ ದೀಪೇಶ್ ಅವರ ವಿಚಾರಣೆ ನಡೆಸಿದರು. ಜೂನ್ 13 ಮತ್ತು 14 ರಂದು ಫ್ಲ್ಯಾಟ್ನಲ್ಲಿ ಏನು ನಡೆಯಿತೆನ್ನುವ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಿದರೆಂದು ತಿಳಿದು ಬಂದಿದೆ.
ಏತನ್ಮಧ್ಯೆ, ಸುಶಾಂತ್ ಅವರ ಸಂಬಂಧಿಕ ಹಾಗೂ ಬಿಜೆಪಿ ಶಾಸಕರಾಗಿರುವ ನೀರಜ್ ಕುಮಾರ ಬಬ್ಲೂ, ‘‘ಸಿಬಿಐ ತನಿಖೆ ಸರಿಯಾದ ನಿಟ್ಟಿನಲ್ಲಿ ಸಾಗುತ್ತಿದೆ,’’ ಎಂದು ಟ್ವೀಟ್ ಮಾಡಿದ್ದಾರೆ.