ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಸಿಸಿಬಿ ದಾಳಿ

| Updated By: ಸಾಧು ಶ್ರೀನಾಥ್​

Updated on: Sep 04, 2020 | 9:46 AM

[lazy-load-videos-and-sticky-control id=”rqdR6aeWUwo”] ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಯಲಹಂಕ ಬಳಿಯಿರುವ ನಟಿ ನಿವಾಸಕ್ಕೆ ಸರ್ಚ್ ವಾರಂಟ್ ಸಮೇತ ದಾಳಿ ನಡೆಸಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಆರೋಪಕ್ಕೆ ಸಂಬಂಧಿಸಿ ನಿನ್ನೆ ನಟಿ ರಾಗಿಣಿ ದ್ವಿವೇದಿಯನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ನಟಿ ಕಾರಣಗಳನ್ನು ಹೇಳಿ ವಿಚಾರಣೆಗೆ ಹೋಗುವುದನ್ನು ತಪ್ಪಿಸಿದ್ದರು. ಹೀಗಾಗಿ ನಿನ್ನೆ ವಿಚಾರಣೆಗೆ ಹಾಜರಾಗಿರಲಿಲಲ್ಲ ಸಾಕಷ್ಟು ವಿಚಾರಗಳನ್ನ ಮುಚ್ಚಿಡುವ ಮತ್ತು ಸಾಕ್ಷ್ಯಗಳನ್ನ […]

ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಸಿಸಿಬಿ ದಾಳಿ
Follow us on

[lazy-load-videos-and-sticky-control id=”rqdR6aeWUwo”]

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಯಲಹಂಕ ಬಳಿಯಿರುವ ನಟಿ ನಿವಾಸಕ್ಕೆ ಸರ್ಚ್ ವಾರಂಟ್ ಸಮೇತ ದಾಳಿ ನಡೆಸಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಆರೋಪಕ್ಕೆ ಸಂಬಂಧಿಸಿ ನಿನ್ನೆ ನಟಿ ರಾಗಿಣಿ ದ್ವಿವೇದಿಯನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ನಟಿ ಕಾರಣಗಳನ್ನು ಹೇಳಿ ವಿಚಾರಣೆಗೆ ಹೋಗುವುದನ್ನು ತಪ್ಪಿಸಿದ್ದರು.

ಹೀಗಾಗಿ ನಿನ್ನೆ ವಿಚಾರಣೆಗೆ ಹಾಜರಾಗಿರಲಿಲಲ್ಲ ಸಾಕಷ್ಟು ವಿಚಾರಗಳನ್ನ ಮುಚ್ಚಿಡುವ ಮತ್ತು ಸಾಕ್ಷ್ಯಗಳನ್ನ ನಾಶ ಮಾಡುವ ಅನುಮಾನದಿಂದಾಗಿ ನ್ಯಾಯಾಲಯದಲ್ಲಿ ಸರ್ಚ್​ ವಾರೆಂಟ್​ ಪಡೆದು ಸಿಸಿಬಿ ಮನೆ ಮೇಲೆ ದಾಳಿ ನಡೆಸಿದೆ. ಇಂದು ಬೆಳ್ಳಂಬೆಳಗ್ಗೆ ಸರ್ಚ್​ ವಾರೆಂಟ್​ ಸಹಿತಿ ಯಲಹಂಕದಲ್ಲಿ ಇರುವ ನಿವಾಸಕ್ಕೆ ತೆರಳಿ ಶೋಧಕಾರ್ಯ ಮಾಡುತ್ತಿದ್ದಾರೆ.

ಯಲಹಂಕದ ಅನನ್ಯ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್ ಮೇಲೆ ಬೆಳಗ್ಗೆ 6.34ರ ಸುಮಾರಿಗೆ ಸಿಸಿಬಿ ಅಧಿಕಾರಿಗಳು 2 ಕಾರುಗಳಲ್ಲಿ ಆಗಮಿಸಿ ದಾಳಿ ನಡೆಸಿದ್ದಾರೆ.ನಟಿ ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

Published On - 7:24 am, Fri, 4 September 20