Drug peddler ರಾಹುಲ್ ನಟಿ ಸಂಜನಾಗೆ ಸೋದರ ಅಲ್ಲ ಎಂಬುದಕ್ಕೆ ಆ ಮೊಬೈಲ್​ನಲ್ಲಿದೆ ಸಾಕ್ಷ್ಯ!

Drug peddler ರಾಹುಲ್ ನಟಿ ಸಂಜನಾಗೆ ಸೋದರ ಅಲ್ಲ ಎಂಬುದಕ್ಕೆ ಆ ಮೊಬೈಲ್​ನಲ್ಲಿದೆ ಸಾಕ್ಷ್ಯ!

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳಿಂದ ರಾಹುಲ್ ವಿಚಾರಣೆ ನಡೆದಿದೆ. ರಾಹುಲ್ ಮೊಬೈಲ್‌ನಲ್ಲಿ ಡ್ರಗ್ಸ್ ವ್ಯವಹಾರದ ಬಗ್ಗೆ ಸಾಕಷ್ಟು ಮಹತ್ವದ ಮಾಹಿತಿ ದೊರೆತಿದ್ದು, ಸಂಜನಾ ಜತೆ ಆತ ವ್ಯವಹಾರ ನಡೆಸಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಸಂಜನಾ ಜತೆ ವೈಯಕ್ತಿಕ ಚಾಟಿಂಗ್ ಮಾಡಿರುವ ರಾಹುಲ್, ಸಂಜನಾಗೆ ಸಹೋದರನಲ್ಲ ಎಂಬುದಕ್ಕೂ ಸಾಕ್ಷ್ಯ ಪತ್ತೆಯಾಗಿದೆ. ಇದೇ ವೇಳೆ, ರಾಹುಲ್-ಸಂಜನಾ ನಡುವಿನ ವ್ಯವಹಾರ ಲೆಕ್ಕ, ವಯಕ್ತಿಕ ಚಾಟಿಂಗ್ ಮಾಹಿತಿಯೂ ರಾಹುಲ್ ಮೊಬೈಲ್ ನಲ್ಲಿ ಸಿಕ್ಕಿದೆ. ಜೊತೆ ಜೊತೆಗೆ ನಡೆಯುತ್ತಿದೆ ಡ್ರಗ್ಸ್ ದಂಧೆ ಬಗೆಗಿನ ಮಾಹಿತಿ ದೊರೆತಿದ್ದು, ಯಾವ ಆಯಾಮದಲ್ಲೂ ರಾಹುಲ್ ಸಂಜಾನಾಗೆ ಸಹೋದರನಲ್ಲ ಎಂಬುದಕ್ಕೆ ರಾಹುಲ್ ಮೊಬೈಲ್​ನಲ್ಲಿ ಸಿಕ್ಕಿರುವ ಈ ಅಂಶಗಳೇ ಸಾಕ್ಷಿ ಎಂದು ಸಿಸಿಬಿ ಮೂಲಗಳು ಹೇಳುತ್ತಿವೆ.

Click on your DTH Provider to Add TV9 Kannada