ನಟಿ ಸಂಜನಾಗೂ ಡವಡವ! ಇಂದು ಸಿಸಿಬಿಯಿಂದ ನೋಟಿಸ್​ ಸಾಧ್ಯತೆ

ನಟಿ ಸಂಜನಾಗೂ ಡವಡವ! ಇಂದು ಸಿಸಿಬಿಯಿಂದ ನೋಟಿಸ್​ ಸಾಧ್ಯತೆ

[lazy-load-videos-and-sticky-control id=”qWUdRmdxZPA”]

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್​ ಜಾಲದ ನಂಟು ಇದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಆಪ್ತ ರಾಹುಲ್ ಈಗಾಗಲೇ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಟಿ ಸಂಜನಾಗೂ ಸಿಸಿಬಿಯಿಂದ ನೋಟಿಸ್​ ಬರುವ ಸಾಧ್ಯತೆ ಇದೆ.

ಹೀಗಾಗಿ ಸ್ಯಾಂಡಲ್​ವುಡ್​ ನಟಿ ಸಂಜನಾ ಗಲ್ರಾನಿಗೆ ಡವಡವ ಶುರುವಾಗಿದೆಯಂತೆ. ಮಾದಕ ಲೋಕದ ರಹಸ್ಯ ತಿಳಿಯಲು ಸಿಸಿಬಿ ಪೊಲೀಸರು ಸಂಜನಾಗೆ ವಿಚಾರಣೆಗೆ ಹಾಜರಾಗುವಂತೆ ಇಂದು ನೋಟಿಸ್ ನೀಡುವ ಸಾಧ್ಯತೆ ಇದೆ. ಸದ್ಯ ಈಗ ಸಂಜನಾ ಬೆಂಗಳೂರಿನ ಇಂದಿರಾನಗರದಲ್ಲಿರುವ ಸಾಯಿ ತೇಜಸ್ವಿ ಅಪಾರ್ಟ್​ಮೆಂಟ್​ನಲ್ಲಿದ್ದಾರೆ.

Published On - 10:18 am, Fri, 4 September 20

Click on your DTH Provider to Add TV9 Kannada