ನಟಿ ಸಂಜನಾ 11 ಬ್ಯಾಂಕ್ ಖಾತೆಗಳು ಶೀಘ್ರವೇ ಫ್ರೀಜ್​ ಸಾಧ್ಯತೆ

| Updated By: ಸಾಧು ಶ್ರೀನಾಥ್​

Updated on: Sep 30, 2020 | 4:02 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗ ಇದೇ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಸೇರಿದ ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿಯ 11 ಬ್ಯಾಂಕ್​ ಖಾತೆಗಳು ಪತ್ತೆಯಾಗಿವೆ. ಬಂಧನಕ್ಕೂ ಕೆಲವೇ ದಿನಗಳ ಹಿಂದೆ ಸಂಜನಾ ಖಾತೆಗಳಿಂದ ಹಣ ಡ್ರಾ ಮಾಡಿದ್ದಾರೆ. 11 ಬ್ಯಾಂಕ್ ಖಾತೆಗಳಲ್ಲಿ ಕೇವಲ ₹40 ಲಕ್ಷ ಹಣ ಮಾತ್ರ ಉಳಿಸಿದ್ದಾರೆ. ಆದರೆ ಬಂಧನಕ್ಕೂ ಮೊದಲು‌ ಸಾಕಷ್ಟು ಹಣದ ವಹಿವಾಟು ಮಾಡಿದ್ದಾರೆ. ಸದ್ಯ 11 ಖಾತೆಗಳ ಹಣ […]

ನಟಿ ಸಂಜನಾ 11 ಬ್ಯಾಂಕ್ ಖಾತೆಗಳು ಶೀಘ್ರವೇ ಫ್ರೀಜ್​ ಸಾಧ್ಯತೆ
Follow us on

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗ ಇದೇ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಸೇರಿದ ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿಯ 11 ಬ್ಯಾಂಕ್​ ಖಾತೆಗಳು ಪತ್ತೆಯಾಗಿವೆ.

ಬಂಧನಕ್ಕೂ ಕೆಲವೇ ದಿನಗಳ ಹಿಂದೆ ಸಂಜನಾ ಖಾತೆಗಳಿಂದ ಹಣ ಡ್ರಾ ಮಾಡಿದ್ದಾರೆ. 11 ಬ್ಯಾಂಕ್ ಖಾತೆಗಳಲ್ಲಿ ಕೇವಲ ₹40 ಲಕ್ಷ ಹಣ ಮಾತ್ರ ಉಳಿಸಿದ್ದಾರೆ. ಆದರೆ ಬಂಧನಕ್ಕೂ ಮೊದಲು‌ ಸಾಕಷ್ಟು ಹಣದ ವಹಿವಾಟು ಮಾಡಿದ್ದಾರೆ. ಸದ್ಯ 11 ಖಾತೆಗಳ ಹಣ ವರ್ಗಾವಣೆಯ ಮಾಹಿತಿ‌ಯನ್ನು ಸಿಸಿಬಿ ಸಂಗ್ರಹಿಸಿದೆ. ಕೆಲ ಬ್ಯಾಂಕ್ ಖಾತೆಗಳಿಗೆ ವಿದೇಶಗಳಿಂದಲೂ ಹಣ ವರ್ಗಾವಣೆ ಮಾಡಲಾಗಿದೆ. ಆದರೆ ಯಾರು ಹಣ ಕಳಿಸುತ್ತಿದ್ದರೆಂಬುದರ ಬಗ್ಗೆ ಮಾಹಿತಿ ಸಂಗ್ರಹವಾಗಿಲ್ಲ. ಶೀಘ್ರವೇ ಸಂಜನಾ ಬ್ಯಾಂಕ್ ಖಾತೆಗಳನ್ನು ಫ್ರೀಜ್​ ಮಾಡುವ ಸಾಧ್ಯತೆ ಇದೆ.

Published On - 3:19 pm, Wed, 30 September 20