ಹೊಸ ವರ್ಷಕ್ಕೆ ಹೊಸ ಕಿಕ್ ಕೊಟ್ಟ ಚಂದನ್ ಶೆಟ್ಟಿ.. ಪಾರ್ಟಿ ಫ್ರೀಕ್ಗೆ ನ್ಯೂ ಸಾಂಗ್ ರಿಲೀಸ್
2020 ಕಂಪ್ಲೀಟ್ ಆಗಿ 2021ಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಸದ್ಯ ಪಾರ್ಟಿ ಪ್ರಿಯರಿಗೆ ಪ್ರತಿ ವರ್ಷದಂತೆ ಈ ವರ್ಷ ಸಂಭ್ರಮ ಪಡೋದಕ್ಕೆ ಆಗಲ್ಲ ಅನ್ನೋ ಬೇಜಾರಿದೆ. ಇದ್ರ ಬೆನ್ನಲ್ಲೇ ಸದ್ಯ ಪಾರ್ಟಿ ಪ್ರಿಯರ ಜೋಶ್ ಕೊಂಚ ಹೆಚ್ಚು ಮಾಡೋಕೆ ರ್ಯಾಪರ್ ಚಂದನ್ ಶೆಟ್ಟಿ ಹೊಸ ಸಾಂಗ್ ರಿಲೀಸ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನ ಸಂಗೀತ ನಿರ್ದೇಶಕ ಕಮ್ ಗಾಯಕ ಚಂದನ್ ಶೆಟ್ಟಿ ಹಲವು ವೆರೈಟಿ ಹಾಡುಗಳ ಮೂಲಕ ಮೋಡಿ ಮಾಡಿದ್ದಾರೆ. 2016ರಲ್ಲಿ ಮೂರೇ ಮೂರು ಪೆಗ್ಗಿಗೆ ಅನ್ನೋ ಸಾಂಗ್ ಝಲಕ್ ನೋಡಿದ್ದ ಅಭಿಮಾನಿಗಳು ಆ ಹಾಡಿನ ಗುಂಗಲ್ಲೇ ಪಾರ್ಟಿಗಳಲ್ಲಿ ಹಾಡಿ ಕುಣೀತಿದ್ರು.
ಇದಾದ ನಂತ್ರ 2017ರಲ್ಲಿ ಪಕ್ಕಾ ಚಾಕಲೇಟ್ ಗರ್ಲ್ ಅಂತ ಮುಂಗಾರು ಮಳೆ 2 ಸಿನಿಮಾದಲ್ಲಿ ನಟಿಸಿದ್ದ ನೇಹಾ ಶೆಟ್ಟಿ ಜೊತೆ ಹಾಡಿ ಕುಣಿದು ಕಮಾಲ್ ಮಾಡಿದ್ರು ಚಂದನ್ ಶೆಟ್ಟಿ. ನಂತ್ರ ಇತ್ತೀಚೆಗಷ್ಟೇ ಕೋಲುಮಂಡೆ ಹಾಡನ್ನ ರಿಲೀಸ್ ಮಾಡಿ ಒಂದಿಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದ್ರೂ ಕೋಲುಮಂಡೆ ಹಾಡಿನಿಂದ್ಲೂ ಪಡ್ಡೆ ಹುಡುಗರನ್ನ ಫಿದಾ ಮಾಡಿದ್ರು.
ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್ ಸದ್ಯ ಇದೆಲ್ಲದ್ರ ಜೊತೆಗೆ ಈ ಬಾರಿ ನ್ಯೂ ಇಯರ್ ಸಂಭ್ರಮವನ್ನ ಹೆಚ್ಚು ಮಾಡೋಕೆ ರೆಡಿಯಾಗಿರೋ ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್ ಹಾಡನ್ನ ರಿಲೀಸ್ ಮಾಡಿದ್ದಾರೆ. ಇನ್ನೇನು ನ್ಯೂ ಇಯರ್ಗೆ ಕೌಂಟ್‌ಡೌನ್ ಶುರುವಾಗಿರೋ ಬೆನ್ನಲ್ಲೇ ಈಗ ಪಾರ್ಟಿ ಫ್ರೀಕ್ ಸಾಂಗ್ ಸೌಂಡ್ ಮಾಡ್ತಿದೆ. ಇಂದು ಶನಿವಾರ ಮೈಯಲ್ಲಿ ಫುಲ್ ಜೋಶ್ ಇದೆ.. ನಾಳೆ ಭಾನುವಾರ ರೆಸ್ಟಿಗೆ ಫುಲ್ ಡೇ ಇದೆ ಅಂತ ವೀಕೆಂಡ್‌ನ ಪಾರ್ಟಿ ಗಮ್ಮತ್ತನ್ನ ಸಾಂಗ್‌ನಲ್ಲಿ ಹೇಳಿ ಜೋಶಿ ನೀಡ್ತಿದ್ದಾರೆ ಚಂದನ್ ಶೆಟ್ಟಿ.
ಒಟ್ನಲ್ಲಿ ಲೆಟ್ಸ್ ಸ್ಟಾರ್ಟ್ ದಿ ಪಾರ್ಟಿ ಅಂತ ಇನ್ನೂ ಹೊಸ ವರ್ಷಕ್ಕೆ ಕೌಂಟ್‌ಡೌನ್ ಶುರುವಾಗಿರೋ ಬೆನ್ನಲ್ಲೇ ಸಾಂಗ್ ರಿಲೀಸ್ ಆಗಿದೆ. ಮುಂದಿನ ದಿನಗಳಲ್ಲಿ ಅದ್ಹೇಗೆ ಪಾರ್ಟಿ ಫ್ರೀಕ್ ಮೋಡಿ ಮಾಡುತ್ತೆ ಅನ್ನೋದು ಕಾದು ನೋಡ್ಬೇಕು.
Photos ಸ್ಯಾಂಡಲ್ವುಡ್ ತಾರೆಯರ ಮನೆಯಲ್ಲಿ ದೀಪಾವಳಿ ಸಂಭ್ರಮದ ಒಂದು ಝಲಕ್!