‘ಶೆಫ್​ ಚಿದಂಬರ’ ಚಿತ್ರದಲ್ಲಿ ಅನಿರುದ್ಧ್​ಗೆ ಜೋಡಿಯಾದ ನಿಧಿ ಸುಬ್ಬಯ್ಯ; ಪೋಸ್ಟರ್​ ರಿಲೀಸ್​

|

Updated on: Dec 18, 2023 | 7:08 PM

‘ಶೆಫ್​ ಚಿದಂಬರ’ ಚಿತ್ರತಂಡವು ನಿಧಿ ಸುಬ್ಬಯ್ಯ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಅವರು ಮೋನಾ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಅವರ ಪೋಸ್ಟರ್​ ಕುತೂಹಲ ಮೂಡಿಸುವಂತಿದೆ. ನಿಧಿ ಸುಬ್ಬಯ ಅವರ ಕೈಯಲ್ಲಿ ಬೇಡಿ ಇದೆ.

‘ಶೆಫ್​ ಚಿದಂಬರ’ ಚಿತ್ರದಲ್ಲಿ ಅನಿರುದ್ಧ್​ಗೆ ಜೋಡಿಯಾದ ನಿಧಿ ಸುಬ್ಬಯ್ಯ; ಪೋಸ್ಟರ್​ ರಿಲೀಸ್​
ನಿಧಿ ಸುಬ್ಬಯ್ಯ, ಆನಂದ್​ರಾಜ್​, ಮಾಧುರಿ ಪರಶುರಾಮ್​
Follow us on

ಕನ್ನಡದ ಖ್ಯಾತ ನಟ ಅನಿರುದ್ಧ್ ಜತ್ಕರ್ (Anirudh Jatkar) ಅವರು ಹೀರೋ ಆಗಿ ಅಭಿನಯಿಸಿರುವ ‘ಶೆಫ್​ ಚಿದಂಬರ’ (Chef Chidambara) ಸಿನಿಮಾ ಹಲವು ಕಾರಣಗಳಿಂದ ಕೌತುಕ ಮೂಡಿಸಿದೆ. ‘ರಾಘು’ ಚಿತ್ರದ ಖ್ಯಾತಿಯ ನಿರ್ದೇಶಕ ಎಂ. ಆನಂದರಾಜ್ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾ ತಂಡದಿಂದ ಅಪ್​ಡೇಟ್​ ಸಿಕ್ಕಿದೆ. ‘ಶೆಫ್​ ಚಿದಂಬರ’ ಚಿತ್ರದ ಶೂಟಿಂಗ್​ ಮುಕ್ತಾಯ ಆಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಈಗ ನಾಯಕಿಯ ಪಾತ್ರವನ್ನು ಪರಿಚಯಿಸುವ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ. ‘ಶೆಫ್​ ಚಿದಂಬರ’ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ (Nidhi Subbaiah) ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಶೆಫ್​ ಚಿದಂಬರ’ ಚಿತ್ರತಂಡವು ನಿಧಿ ಸುಬ್ಬಯ್ಯ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಅವರು ಮೋನಾ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಅವರ ಪೋಸ್ಟರ್​ ಕುತೂಹಲ ಮೂಡಿಸುವಂತಿದೆ. ನಿಧಿ ಸುಬ್ಬಯ ಅವರ ಕೈಯಲ್ಲಿ ಬೇಡಿ ಇದೆ. ಹಾಗಾದರೆ ಅವರ ಪಾತ್ರ ಯಾವ ರೀತಿ ಇರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ನಿಧಿ ಸುಬ್ಬಯ್ಯ ಅವರ ಆಯ್ಕೆಯ ಬಗ್ಗೆ ನಿರ್ದೇಶಕ ಆನಂದ್​ರಾಜ್​ ಮಾತನಾಡಿದ್ದಾರೆ. ‘ಬಹಳ ದಿನಗಳ ಬಳಿಕ ನಿಧಿ ಸುಬ್ಬಯ್ಯ ಅವರು ನಮ್ಮ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಿಧಿ ಅವರ ಪೋಸ್ಟರ್​ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆ ಪಾತ್ರದ ಹಿಂದಿನ ಕುತೂಹಲ ತಣಿಯಬೇಕು ಎಂದರೆ ಪೂರ್ತಿ ಸಿನಿಮಾ ನೋಡಬೇಕು’ ಎಂದು ಆನಂದರಾಜ್ ಹೇಳಿದ್ದಾರೆ.

ಇದನ್ನೂ ಓದಿ: ‘ಯಜಮಾನ’ ಮುಹೂರ್ತ ನಡೆದ ದೈವಿ ಸ್ಥಳದಲ್ಲೇ ಸೆಟ್ಟೇರಿತು ಅನಿರುದ್ಧ್​ ಹೊಸ ಸಿನಿಮಾ ‘ಶೆಫ್​ ಚಿದಂಬರ’

ಅನಿರುದ್ಧ್ ಅವರು ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ‘ಶೆಫ್​ ಚಿದಂಬರ’ ಸಿನಿಮಾ ಡಾರ್ಕ್ ಕಾಮಿಡಿ ಪ್ರಕಾರದಲ್ಲಿ ಮೂಡಿಬರಲಿದೆ. ಈ ಪಾತ್ರಕ್ಕಾಗಿ ಅವರು ಬಹಳ ತಯಾರಿ ಮಾಡಿಕೊಂಡು ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ. ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ‘ಲವ್ ಮಾಕ್ಟೇಲ್’ ಸಿನಿಮಾದ ಖ್ಯಾತಿಯ ನಟಿ ರೆಚೆಲ್ ಡೇವಿಡ್‌ ಅವರು ಅಭಿನಯಿಸಿದ್ದಾರೆ. ಕೆ.ಎಸ್. ಶ್ರೀಧರ್‌, ಶರತ್ ಲೋಹಿತಾಶ್ವ, ಶಿವಮಣಿ ಮುಂತಾದ ಕಲಾವಿದರು ‘ಶೆಫ್​ ಚಿದಂಬರ’ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.

‘ದಮ್ತಿ ಪಿಕ್ಚರ್ಸ್’ ಲಾಂಛನದಲ್ಲಿ ರೂಪ ಡಿ.ಎನ್. ನಿರ್ಮಿಸುತ್ತಿರುವ ‘ಶೆಫ್​ ಚಿದಂಬರ’ ಸಿನಿಮಾಗೆ ನಿರ್ದೇಶಕರೇ ಕಥೆ ಬರೆದಿದ್ದಾರೆ. ಗಣೇಶ್ ಪರಶುರಾಮ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಉದಯ್​ಲೀಲ ಛಾಯಾಗ್ರಹಣ ಮಾಡಿದ್ದಾರೆ. ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜೇತ್ ಚಂದ್ರ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಅವರು ಡಿ.ಐ. ಮಾಡುತ್ತಿದ್ದಾರೆ. ನರಸಿಂಹಮೂರ್ತಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಕಾಸ್ಟ್ಯೂಮ್​ ಡಿಸೈನ್​ ಮತ್ತು ನೃತ್ಯ ನಿರ್ದೇಶನ ಮಾಧುರಿ ಪರಶುರಾಮ್ ಅವರದ್ದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.