ಚೆನ್ನೈ: ನನ್ನ ಸ್ವಂತ ಅಣ್ಣನಂತಿದ್ದ, ಆತ್ಮೀಯನನ್ನು ಕಳೆದುಕೊಂಡಿದ್ದೇವೆ. ಚಿತ್ರರಂಗಕ್ಕೆ ಈ ದಿನ ಕಪ್ಪು ದಿನವಾಗಿದೆ ಎಂದು SPB ನಿಧನಕ್ಕೆ ತೆಲುಗು ನಟ ಚಿರಂಜೀವಿ ಸಂತಾಪ ವ್ಯಕ್ತಪಡಿಸಿದ್ದಾರೆ.
SPB ಗುಣಮುಖರಾಗಿ ಬರುತ್ತಾರೆಂದು ತಿಳಿದುಕೊಂಡಿದ್ದೆವು. ಪ್ರತಿನಿತ್ಯ ಎಸ್.ಪಿ. ಶೈಲಜಾ ಜತೆ ನಾನು ಮಾತನಾಡುತ್ತಿದ್ದೆ. ಬೇಗ ಗುಣಮುಖರಾಗಿ ಬರುತ್ತಾರೆಂದು ಅವರು ಹೇಳುತ್ತಿದ್ದರು ಎಂದು ಚಿರಂಜೀವಿ ಹೇಳಿದ್ದಾರೆ.
ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ
SPB ಯವರನ್ನು ಅಣ್ಣ ಅಣ್ಣ ಎಂದು ಕರೆಯುತ್ತಿದ್ದೆ. SPBಯವರು ಹಲವು ಬರಿ ನನಗೆ ಸಲಹೆ ನೀಡುತ್ತಿದ್ದರು. ಚಿತ್ರಗಳ ಆಯ್ಕೆ ಬಗ್ಗೆ ಸಲಹೆ ಸಹ ನೀಡ್ತಿದ್ದರು. ಅವರ ಸಲಹೆಯಿಂದಲೇ ನಾನು ರುದ್ರವೀಣ, ಸ್ವಯಂಕೃಷಿ, ಆರಾಧನಾ, ಆಪದ್ಬಾಂಧವ ಚಿತ್ರಗಳನ್ನು ಮಾಡಿದ್ದೇನೆ. ತೆಲುಗು ಭಾಷೆಗೆ ಒಂದು ಅಂದವನ್ನು ತಂದುಕೊಟ್ಟವರೇ SPB ಎಂದು ಚಿರಂಜೀವಿ ಸ್ಮರಿಸಿದ್ದಾರೆ.
ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ. ಈ SPBಯವರ ಸ್ಥಾನವನ್ನು ಮತ್ತೊಬ್ಬರು ತುಂಬಲಾಗಲ್ಲ. ಆ ಸ್ಥಾನ ತುಂಬುವುದಕ್ಕೆ ಅವರೇ ಮತ್ತೆ ಹುಟ್ಟಿ ಬರಬೇಕು ಎಂದು ಚಿರಂಜೀವಿ ಹೇಳಿದ್ದಾರೆ.
ಇದನ್ನೂ ಓದಿ: ಅರ್ಧ ಶತಮಾನ ಕಾಲ ಸಂಗೀತ ಲೋಕದ ಅದ್ಭುತ, ಗಾನಗಂಧರ್ವ SP ಬಾಲಸುಬ್ರಮಣ್ಯಂ ಚಿರನಿದ್ರೆಗೆ
ಇದನ್ನೂ ಓದಿ: SPB ಕೊನೆವರೆಗೂ ಹೋರಾಡಿ ನಮ್ಮನ್ನು ಅಗಲಿದ್ದಾರೆ: ನಟ ರಜನಿಕಾಂತ್ ವಿಷಾದ
ಇದನ್ನೂ ಓದಿ: ಬೆಳಗ್ಗೆ ಆಸ್ಪತ್ರೆಗೆ ಬಂದು ಅಂತಿಮ ದರ್ಶನ ಪಡೆದ ಕಮಲ್ ಹಾಸನ್.. ಬಾಲು ನೆನಪಲ್ಲಿ ತೊಯ್ದರು!
భారతీయ సంగీత ప్రపంచానికి చీకటి రోజు. pic.twitter.com/y0f0ePQ8Lw
— Chiranjeevi Konidela (@KChiruTweets) September 25, 2020
Heartbroken!! RIP SP Balu garu. pic.twitter.com/YTgZEBdvo9
— Chiranjeevi Konidela (@KChiruTweets) September 25, 2020
Published On - 4:08 pm, Fri, 25 September 20