AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಜ್ರದ ಜಲಪಾತ’ವನ್ನೂ ಸೀಳುವ ಕಂಠಸಿರಿ! SP ಬಾಲಸುಬ್ರಹ್ಮಣ್ಯಂಗೆ ವೃತ್ತಿ ಸಹಜ ನುಡಿ ನಮನ

ಸ್ವರ ಸಾಮ್ರಾಟ ಎಸ್ಪಿ ಬಾಲಸುಬ್ರಹ್ಮಣ್ಯಂ ಕೊರೊನಾ ವಿರುದ್ಧದ ಹೋರಾಟದಲ್ಲಿ ವಿಧಿಯ ವಶರಾಗಿದ್ದಾರೆ. ಅಭಿಮಾನಿಗಳಿಗೆ ‘ಬಾಲು’ ಅಸ್ತಂಗತರಾದರು ಅನ್ನೋದನ್ನು ಅರಗಿಸಿಕೊಳ್ಳು ಆಗುತ್ತಿಲ್ಲ. ಎಸ್ಪಿ ಬಾಲಸುಬ್ರಹ್ಮಣ್ಯಂ ವಿಚಾರದಲ್ಲಿ.. ಆತ ಇಲ್ಲೇ, ಎಲ್ಲೋ ಕಾಫಿಗೆ ಹೋಗಿರ ಬೇಕು ಅನ್ನೋ ಭಾವ. ಅಥವಾ ಇನ್ನು ಸ್ವಲ್ಪ ದೂರ ಅಂದ್ರೆ ವಿದೇಶಕ್ಕೆಲ್ಲೋ ಮ್ಯೂಸಿಕಲ್ ನೈಟ್ ಪ್ರೋಗ್ರಾಂ ಕೊಡೋಕ್ಕೆ ಹೋಗಿರಬೇಕು ಅನ್ನಿಸುವಷ್ಟು ಆಪ್ಯಾಯತೆ ಆ ಗಾಯಕ ನಾಯಕನ ಬಗ್ಗೆ ಅವರ ಫ್ಯಾನ್ಸ್​ಗೆ. ಆದರೆ ಈ ಬಾರಿ ತುಸು ದೂರವೇ ಮರಳಿ ಬಾರದ ಲೋಕಕ್ಕೆ ಹೊರಟುಬಿಟ್ಟಿದ್ದಾರೆ SPB. […]

‘ವಜ್ರದ ಜಲಪಾತ’ವನ್ನೂ ಸೀಳುವ ಕಂಠಸಿರಿ! SP ಬಾಲಸುಬ್ರಹ್ಮಣ್ಯಂಗೆ ವೃತ್ತಿ ಸಹಜ ನುಡಿ ನಮನ
ಸಾಧು ಶ್ರೀನಾಥ್​
|

Updated on: Sep 25, 2020 | 5:44 PM

Share

ಸ್ವರ ಸಾಮ್ರಾಟ ಎಸ್ಪಿ ಬಾಲಸುಬ್ರಹ್ಮಣ್ಯಂ ಕೊರೊನಾ ವಿರುದ್ಧದ ಹೋರಾಟದಲ್ಲಿ ವಿಧಿಯ ವಶರಾಗಿದ್ದಾರೆ. ಅಭಿಮಾನಿಗಳಿಗೆ ‘ಬಾಲು’ ಅಸ್ತಂಗತರಾದರು ಅನ್ನೋದನ್ನು ಅರಗಿಸಿಕೊಳ್ಳು ಆಗುತ್ತಿಲ್ಲ. ಎಸ್ಪಿ ಬಾಲಸುಬ್ರಹ್ಮಣ್ಯಂ ವಿಚಾರದಲ್ಲಿ.. ಆತ ಇಲ್ಲೇ, ಎಲ್ಲೋ ಕಾಫಿಗೆ ಹೋಗಿರ ಬೇಕು ಅನ್ನೋ ಭಾವ. ಅಥವಾ ಇನ್ನು ಸ್ವಲ್ಪ ದೂರ ಅಂದ್ರೆ ವಿದೇಶಕ್ಕೆಲ್ಲೋ ಮ್ಯೂಸಿಕಲ್ ನೈಟ್ ಪ್ರೋಗ್ರಾಂ ಕೊಡೋಕ್ಕೆ ಹೋಗಿರಬೇಕು ಅನ್ನಿಸುವಷ್ಟು ಆಪ್ಯಾಯತೆ ಆ ಗಾಯಕ ನಾಯಕನ ಬಗ್ಗೆ ಅವರ ಫ್ಯಾನ್ಸ್​ಗೆ. ಆದರೆ ಈ ಬಾರಿ ತುಸು ದೂರವೇ ಮರಳಿ ಬಾರದ ಲೋಕಕ್ಕೆ ಹೊರಟುಬಿಟ್ಟಿದ್ದಾರೆ SPB. ಸಂಗೀತ ಲೋಕದ ‘ಬಂಧು ಬಳಗ’ ಬಿಟ್ಟು ಹೋದ ಗಾಯಕನ ಬಗ್ಗೆ ಶಿವಸ್ವಾಮಿ ನುಣ್ಣೂರು (ಟಿವಿ9-ಬುಲೆಟಿನ್ ಪ್ರೊಡ್ಯೂಸರ್) ಅವರು ವೃತ್ತಿ ಸಹಜವಾಗಿ ನುಡಿ-ನಮನ ಸಲ್ಲಿಸಿದ್ದಾರೆ.

‘ಸ್ವರ’ಗಳಲ್ಲೇ ಬದುಕಿದ ಗಾಯಕನಿಗೆ ವಿಧಿಯೇ ‘ಅಪಸ್ವರ’ ಉಸಿರು ನಿಲ್ಲಿಸಿದ ‘ಗಾನಗಂಧರ್ವ’ ಎಸ್ಪಿ ಬಾಲಸುಬ್ರಹ್ಮಣ್ಯಂ ‘ಬಾಲು’ ಹೆಸರು ಕೇಳಿದ್ರೆ ಸಂಗೀತ ಪರಿಕರಗಳ ‘ಸರಿಗಮಪ’ ಭಾರತದ ಸಂಗೀತ ಲೋಕದ ‘ವಾರಸ್ದಾರ’ ಇನ್ನಿಲ್ಲ ಭಾಷೆಗಳ ಹಂಗನ್ನೂ ಮೀರಿ ಬೆಳೆದಿದ್ದ ‘ಮಲಯ ಮಾರುತ’ ‘ಶರೀರ ಬಿಟ್ಟರೂ, ಶಾರೀರದಲ್ಲಿ ಉಳಿದ’ ಗಾನಗಂಧರ್ವ ಕಳಚಿತು ಸಂಗೀತ ಸಾಗರದ ‘ಪವಿತ್ರ ಸಂಬಂಧ’ ‘ಸಂದರ್ಭ’ಕ್ಕೆ ತಕ್ಕಂತೆ ‘ಸ್ವರ’ ಬದಲಿಸುತ್ತಿದ್ದ ‘ಗಂಧರ್ವ’

ಎಸ್ಪಿಬಿ ಕಂಠದಲ್ಲಿತ್ತು ‘ಸಮ್ಮೋಹನ’ಗೊಳಿಸೋ ಶಕ್ತಿ ‘ಸಾಮಂತ’ನಾಗಿ ಬಂದು ‘ಗಾಯನ ಚಕ್ರವರ್ತಿ’ಯಾದರು ಹೀರೋಗಳಿಗೆ ‘ಅಸ್ಥಿತ್ವ’ ತಂದಿತ್ತು ಬಾಲಸುಬ್ರಹ್ಮಣ್ಯಂ ‘ಸ್ವರ’ ‘ಜೀವನ ತರಂಗ’ದಲ್ಲಿ ಗಾಯನ ಮುಗಿಸಿದ ಗಾಯಕ ‘ಗಾನಗಂಧರ್ವ’ನಿಲ್ಲದೇ ಸಂಗೀತಲೋಕದಲ್ಲಿ ‘ಮೌನರಾಗ’ ‘ಹೂವುಮುಳ್ಳು’ ದಾಟಿ ಬೆಳೆದಿದ್ದ ಎಸ್ಪಿ ಬಾಲಸುಬ್ರಹ್ಮಣ್ಯಂ ಎಸ್ಪಿಬಿಗೆ ‘ಭಾಗ್ಯದ ಬಾಗಿಲು’ ತೆರೆದಿತ್ತು ‘ಗಾಂಧಿನಗರ’

‘ಶಿವಭಕ್ತ’ನಾಗಿ ‘ಕಾಡಿನ ರಹಸ್ಯ’ ಬಿಚ್ಚಿಟ್ಟಿದ್ದ ‘ಬಾಲು’ ‘ಅನಿರೀಕ್ಷಿತ’ವಾಗಿ ನಮ್ಮನ್ನ ಬಿಟ್ಟು ಅಗಲಿದ ಗಾಯಕ ‘ಸೋತು ಗೆದ್ದವಳು’ ಬಾಳಿಗೆ ಜೊತೆಯಾಗಿದ್ದ ಎಸ್ಪಿಬಿ ‘ನ್ಯಾಯವೇ ದೇವರು’ ಎಂದು ಬದುಕಿದ್ದ ಬಾಲು ಸರ್ ‘ಉತ್ತರ ದಕ್ಷಿಣ’ದಲ್ಲೂ ಬಾಲುಸುಬ್ರಹ್ಮಣ್ಯಂರದ್ದೇ ಮೋಡಿ ಹಾಡಿನ ಮೂಲಕವೇ ‘ಜಗ ಮೆಚ್ಚಿದ ಮಗ’ನಾಗಿದ್ದರು ‘ನಾಗರಹಾವು’ ಬಳಿಕ ವಿಷ್ಣುದಾದಾಗೆ ‘ಆಪ್ತಮಿತ್ರ’ ‘ಸಿಪಾಯಿ ರಾಮು’ಗೂ ಸೈ, ‘ಕುಳ್ಳ ಏಜೆಂಟ್’ಗೂ ಜೈ

ಗಾನ ಗಂಧರ್ವ ಎಸ್​ ಪಿ ಬಾಲಸುಬ್ರಮಣ್ಯಂ ವಿಧಿವಶ

ರೋಷದ ಹಾಡಿನ ಮೂಲಕವೇ ‘ಕ್ರಾಂತಿವೀರ’ನಾಗಿದ್ದರು ‘ಎಡಕಲ್ಲು ಗುಡ್ಡದ ಮೇಲೆ’ಯೂ ಇವರದ್ದೇ ಗಾಯನ ‘ನಾನೂ ಬಾಳಬೇಕು’ ಎನ್ನುತ್ತಲೇ ನಮ್ಮನ್ನಗಲಿದ ಬಾಲು ಹೊಸ ಗಾಯಕರು ಬೆಳೆಯಲು ‘ಮಹಾ ತ್ಯಾಗ’ ಮಾಡಿದ್ದರು ‘ಶುಭಮಂಗಳ’ದ ಮೂಲಕ ‘ಪ್ರಣಯರಾಜ’ನಿಗೆ ಮೆರುಗು ಬಾಳಿನುದ್ದಕ್ಕೂ ‘ನಿರೀಕ್ಷೆ’ ಮಾಡದೇ ಸಾಧನೆ ಮಾಡಿದರು ‘ಒಂದೇ ರೂಪ ಎರಡು ಗುಣ’ ಹೊಂದಿದ್ದ ‘ಬಾಲು’ ‘ಕಾವೇರಿ’ ತೀರದಲ್ಲೂ, ‘ದೇವರಗುಡಿ’ಯಲ್ಲೂ ಈಗ ಮೌನ

‘ಬೆಳುವಲದ ಮಡಿಲಲ್ಲಿ’ ಎಸ್ಪಿಬಿ ಹಾಡಿಲ್ಲದೇ ಶೋಕ ‘ಹುಡುಗಾಟದ ಹುಡುಗಿ’ಗೆ ‘ಕನಸು ನನಸು’ ಇವರದ್ದೇ ಧ್ಯಾನ ಹಾಡಬೇಕಿದ್ದ ಎಸ್ಪಿಬಿ ಬಾಳಿನ ‘ಫಲಿತಾಂಶ’ ಬದಲಿಸಿದ ವಿಧಿ ಸಂಗೀತ ಲೋಕಕ್ಕೆ ಬಾಲು, ‘ದೇವರು ಕೊಟ್ಟ ವರ’ ‘ಬಂಗಾರದ ಗುಡಿ’ಯಲ್ಲೂ ‘ಸ್ವರ’ಗಳ ‘ಬೆಸುಗೆ’ ಬದುಕಿನುದ್ದಕ್ಕೂ ‘ಬಾಳು ಜೇನು’ ಎಂಬಂತೆ ಬದುಕಿದ್ದರು ‘ಮುಗ್ಧ ಮಾನವ’ನಾಗಿ ಗಿನ್ನೆಸ್ ರೆಕಾರ್ಡ್ ಮಾಡಿದ್ದ ಬಾಲು ‘ಕರ್ತವ್ಯದ ಕರೆ’ಗೆ ಓಗೊಟ್ಟು ಹಾಡುತ್ತಿದ್ದವರು ಎಸ್ಪಿಬಿ

‘ಗಾನಗಂಧರ್ವ’ ಇಲ್ಲದ ಸಂಗೀತ ಲೋಕಕ್ಕೆ ‘ದೇವರೇ ದಿಕ್ಕು’ ಆರಿತು ಸಂಗೀತದ ‘ಬಂಗಾರದ ಗುಡಿ’ಯ ನಂದಾ‘ದೀಪ’ ‘ಲಕ್ಷ್ಮೀ ನಿವಾಸ’ದಲ್ಲಿ ಇನ್ನು ಸಪ್ತಸ್ವರಗಳ ಲಾಲಿತ್ಯವಿಲ್ಲ ‘ಗಲಾಟೆ ಸಂಸಾರ’ದಲ್ಲೂ ಇತ್ತು ಬಾಲು ‘ಸ್ವರ ಮಾಧುರ್ಯ’ ಬಾಲರ ಹಾಡು ಕೇಳಿದ ನಾವುಗಳೇ ‘ಭಾಗ್ಯವಂತರು’ ‘ಬಲು ಅಪರೂಪ ನಮ್ ಜೋಡಿ’-ಇಳಯರಾಜ, ಎಸ್ಪಿಬಿ ‘ಪ್ರೇಮಯಾನ’ದ ಮೂಲಕವೇ ಗಾಯನ ನಿಲ್ಲಿಸಿದ ಗಂಧರ್ವ ಕಡೆ ತನಕ ‘ಮಾತು ತಪ್ಪದ ಮಗ’ನಾಗಿ ಬಾಳಿದ್ದವರು

ಮೇರು ಗಾಯಕನ ಕಳಕೊಂಡು ‘ಚಿತೆಗೂ ಚಿಂತೆ’ ‘ಅಪರಿಚಿತ’ನಾಗಿ ಬಂದು ‘ಭಲೇ ಹುಡುಗ’ ಆಗಿದ್ರು ಸಂಗೀತಕ್ಕೆ ‘ನಾ ನಿನ್ನ ಬಿಡಲಾರೆ’ ಎನ್ನುತ್ತಿದ್ದ ಗಾಯಕ ಚಿಕ್ಕ ವಯಸ್ಸಿನಲ್ಲೇ ‘ಬಾಳಿನ ಗುರಿ’ ಮುಟ್ಟಿದ್ದ ಎಸ್ಪಿಬಿ ಎಸ್ಪಿಬಿ ಸ್ವರ ಕೇಳದೇ ‘ಕಾಡು ಕುದುರೆ’ಗೂ ರೋದನ ನೆಚ್ಚಿನ ಗಾಯಕನನ್ನ ಕರೆಸಿಕೊಂಡ ‘ಮಾಯೆಯ ಮುಸುಕು’ ‘ಪಲ್ಲವಿ’ ‘ಚರಣ’ಗಳಲ್ಲೇ ‘ಅನುರಕ್ತ’ರಾಗಿದ್ದವರು ಎಸ್ಪಿಬಿ ‘ವಜ್ರದ ಜಲಪಾತ’ವನ್ನೂ ಸೀಳುವ ಕಂಠಸಿರಿ

ಭೂ ಲೋಕ ಬಿಟ್ಟು ಬಾರದ ಲೋಕಕ್ಕೆ ‘ಮಿಂಚಿನ ಓಟ’ ‘ಮಕ್ಕಳ ಸೈನ್ಯ’ದಲ್ಲಿ ‘ಮಂಕುತಿಮ್ಮ’ನಾಗಿ ಸ್ವರ ‘ಅದಲು ಬದಲು’ ‘ಕಪ್ಪುಕೊಳ’ದಲ್ಲಿ ‘ಜಾರಿಬಿದ್ದ ಜಾಣ’ನಿಗೂ ನಿಂತಿತು ಧ್ವನಿ ಎಸ್ಪಿಬಿಯ ಹಾಡುಗಾರಿಗೆ ‘ಜನ್ಮ ಜನ್ಮದ ಅನುಬಂಧ’ ಬಾಲು ಬಾಳಲ್ಲಿ ಕ್ರೂರಿಯಾದ ವಿಧಿಯ ‘ಹದ್ದಿನ ಕಣ್ಣು’ ಹಿನ್ನೆಲೆ ಗಾಯಕನ ಕಳೆದುಕೊಂಡದ್ದು ‘ಆರದ ಗಾಯ’ ಎಸ್ಪಿಬಿ ಹಾಡುತ್ತಾರೆ ಅನ್ನೋದು ಇನ್ನು ‘ಸ್ವಪ್ನ’ ಮಾತ್ರ ಎಸ್ಪಿಬಿ ಹಾಡು ಕೇಳುತ್ತಿದ್ರೆ ‘ತೀರದ ಬಯಕೆ’

‘ಮನೆ ಮನೆ ಕಥೆ’ ಹೇಳಿದ್ದ ಸ್ವರ ಈಗ ಸ್ತಬ್ಧ ಎಸ್ಪಿಬಿ ಬಾಳಿಗೆ ‘ಜೀವಕ್ಕೆ ಜೀವ’ವಾಗಿತ್ತು ಸಂಗೀತ ಸಂ‘ಗೀತಾ’ದ ಮೂಲಕವೇ ‘ಘರ್ಜನೆ’ ಮಾಡಿದ್ದರು ‘ಗಾಳಿ ಮಾತು’ ಕೂಡ ‘ಸ್ವರ’ದಿಂದಲೇ ಕೂಡಿತ್ತು ಸಂಗೀತ ಲೋಕದ ‘ಭಾಗ್ಯದ ಬೆಳಕು’ ಇನ್ನಿಲ್ಲ ‘ದೇವರ ಆಟ’ಕ್ಕೆ ವಿಧಿವಶರಾದ ಬಾಲಸುಬ್ರಹ್ಮಣ್ಯಂ ‘ಅಂತ’ ಹಂತವಾಗಿ ಚಿತ್ರರಂಗದಲ್ಲಿ ಏಳಿಗೆ ಕಂಡವರು ‘ಅವಳಿ ಜವಳಿ’ಗೂ ಧ್ವನಿಯಾಗಿ ಅಚ್ಚರಿ ಮೂಡಿಸಿದ್ದರು

‘ಆಲೆಮನೆ’ಯಷ್ಟೇ ಸಿಹಿಯಾಗಿತ್ತು ಎಸ್ಪಿಬಿ ಗಾಯನ ಬಾಲು ಅವರ ಜೀವನ ಒಂದು ‘ಮರೆಯಲಾಗದ ಕಥೆ’ ‘ರಾಗ ತಾಳ’ ಕೇಳಿದರೆ ಸಾಕು ನಿದಿರೆಯಲ್ಲೂ ಗಾಯನ ‘ಮಾನಸ ಸರೋವರ’ದಲ್ಲಿ ‘ಕಮಲ’ ಅರಳಿಸಿದ್ದ ಸಿಂಗರ್ ‘ಗಾನ ಗಂಧರ್ವ’ನ ಬಾಳಿಗೆ ಕೊರೊನಾದಿಂದ ‘ಕಂಪನ’ ‘ಬಂಗಾರದ ಗುಡಿ’ಯಲ್ಲಿ ಬೇಡಿ ಕೊಂಡರು ಉಳಿಯಲಿಲ್ಲ ‘ಪಲ್ಲವಿ ಅನುಪಲ್ಲವಿ’ಯಲ್ಲೂ ಎಸ್ಪಿಬಿಯವರದ್ದೇ ‘ಸ್ವರ’ ‘ಹಸಿದ ಹೆಬ್ಬುಲಿ’ಯಂತೆ ಹಾಡು ಹೇಳಿದ್ದ ಎಸ್ಪಿಬಿ

‘ಸೋಲಿಲ್ಲದ ಸರದಾರ’ನಾಗಿ ಗಾನದಲ್ಲಿ ಮಿಂಚಿದ ಗಾಯಕ ಎಲ್ಲಾ ಭಾಷೆಗಳಲ್ಲೂ ‘ಎದೆ ತುಂಬಿ ಹಾಡುವೆನು’ ಎಂದಿದ್ದರು ಕನ್ನಡದಲ್ಲಿ ‘ನಕ್ಕರೆ ಅದೇ ಸ್ವರ್ಗ’ ಚಿತ್ರದಲ್ಲಿ ಮೊದಲ ಹಾಡು ‘ನಕ್ಕರೆ ಅದೇ ಸ್ವರ್ಗ’ ಚಿತ್ರದ ಹಾಡಿಗೆ ರಾಜ್ಯ ಪ್ರಶಸ್ತಿ ‘ಗಾನ ಗಂಧರ್ವ’ರ ಕಂಠಕ್ಕೆ ಮುಪ್ಪೇ ಇರಲಿಲ್ಲ ‘ಸ್ವರಗಳ ಏರಿಳಿತಗಳ’ ಅರಿತಿದ್ದ ಮಹಾನ್ ಗಾಯಕ ನಾಯಕರು, ನಿರ್ದೇಶಕರಿಗೆ ಇವರೇ ನೆಚ್ಚಿನ ಗಾಯಕ ನಾಲಗೆ ನುಲಿ ಹಾಡುಗಳನ್ನ ಲೀಲಾಜಾಲವಾಗಿ ಹಾಡುತ್ತಿದ್ದರು

‘ತರಿಕೆರೆ ಏರಿ ಮೇಲೆ’ ಹಾಡುತ್ತಲೇ ಮುಗಿಲು ಸೇರಿದ ಗಾಯಕ ‘ಸಂಗೀತ ಸಾರ್ವಭೌಮ’ರ ಮಧ್ಯೆ ಹಾಡಿ ಬೆಳೆದ ‘ಗಾನಗಂಧರ್ವ’ ‘ಶ್ರೀಶ್ರೀಶ್ರೀ ಮರ್ಯಾದಾ ರಾಮಣ್ಣ’ ಮೂಲಕ ಹಾಡುಗಾರಿಕೆ ‘ಶಂಕರಾಭರಣಂ’ ಸ್ವರ ಮಾಧುರ್ಯಕ್ಕೆ ಜಗವೇ ಫಿದಾ ಮಂತ್ರಮುಗ್ಧರನ್ನಾಗಿಸುತ್ತೆ ‘ಪಂಚಾಕ್ಷರಿ ಗವಾಯಿ’ ಹಾಡು ಸ್ವರ ಮಾಧುರ್ಯದಲ್ಲೇ ‘ಸಾಗರ ಸಂಗಮಂ’ ರೂಪಿಸಿದ್ದರು ‘ರುದ್ರವೀಣಾ’ದಲ್ಲಿ ‘ಬಾಲು’ ಗಾನಕ್ಕೆ ಮಾರು ಹೋಗಿದ್ದ ಜನ ಎನ್ಟಿಆರ್, ಅಕ್ಕಿನೇನಿ ನಾಗೇಶ್ವರ್ರಾವ್ಗೂ ಎಸ್ಪಿಬಿ ಸ್ವರ

‘ಇಳಯರಾಜ’ ಸಂಗೀತಕ್ಕೆ, ‘ಬಾಲು’ ಸ್ವರವೇ ಬೇಕಿತ್ತು..! ಎಂಜಿಆರ್, ಶಿವಾಜಿ ಗಣೇಶನ್ಗೂ ಧ್ವನಿಯಾಗಿದ್ದ ಗಾಯಕ ನಾಯಕರಿಗೆ ತಕ್ಕಂತೆ ಹಾಡುವ ಶೈಲಿ ಬದಲಿಸಿದ್ದ ಎಸ್ಪಿಬಿ ದಕ್ಷಿಣ ಭಾರತದ ಬಳಿಕ ಬಾಲಿವುಡ್ನಲ್ಲೂ ಗಾನಸುಧೆ ಬಾಲಸುಬ್ರಹ್ಮಣ್ಯಂ ಕಂಠಸಿರಿಗೆ ಬೆರಗಾಗಿತ್ತು ಬಾಲಿವುಡ್ ಸಲ್ಮಾನ್ ಖಾನ್ ಸಕ್ಸಸ್ ಹಿಂದೆ ಎಸ್ಪಿಬಿ ಸ್ವರದ ಬಲ ಮದ್ರಾಸಿ ಎಂದು ಮೂಗಿಮುರಿದವರ ಎದುರು ಬೆಳೆದು ನಿಂತರು ‘ಮೈನೆ ಪ್ಯಾರ್ ಕಿಯಾ’ದಿಂದ ‘ಬಾಳಿ’ವುಡ್ನಲ್ಲೂ ಮೋಡಿ

‘ಏಕ್ ದುಜೇ ಕೇಲಿಯೇ’, ‘ಸಾಜನ್’ನಲ್ಲಿ ವಾಯ್ಸ್ ಮ್ಯಾಜಿಕ್ ಇಂಜಿನಿಯರ್ ಆಗಬೇಕೆಂದುಕೊಂಡಿದ್ದ ಎಸ್ಪಿಬಿ ವಿದ್ಯಾರ್ಥಿ ದಿಶೆಯಲ್ಲೇ ಕಾಡಿತ್ತು ಟೈಫಾಯ್ಡ್ ರೋಗ ‘ಬಾಲು’ ಒಳಗಿನ ಗಾಯಕನ ಗುರುತಿಸಿದ್ದು ‘ಇಳಯರಾಜ’ ‘ರಾಗಮು, ಅನುರಾಗಮು’ ಹಾಡಿ ತೀರ್ಪುಗಾರರ ಮನ ಗೆದ್ದಿದ್ದರು ಬಾಲಸುಬ್ರಹ್ಮಣ್ಯಂ ಕಂಠಸಿರಿಗೆ ಬೆರಗಾಗಿದ್ದ ಘಂಟಸಾಲ ಎಸ್ಪಿಬಿಗೆ ಚಿತ್ರರಂಗದಲ್ಲಿ ಅವಕಾಶ ನೀಡಿದ ಕೋದಂಡಪಾಣಿ ‘ಘಂಟಸಾಲಾ’ರನ್ನ ಏಕಲವ್ಯನಂತೆ ಗುರು ಅಂತಾ ಭಾವಿಸಿದ್ದರು

ಸಿನಿಮಾ ಗೀತೆ, ಭಾವಗೀತೆ, ಆಲ್ಬಂಗಳಲ್ಲೂ ಹಾಡಿದ್ದರು ಕರ್ನಾಟಕ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಸಂಗೀತದಲ್ಲೂ ಸೈ ಯೇಸುದಾಸ್ರ ಪಾದಪೂಜೆ ಮಾಡುತ್ತಿದ್ದ ಬಾಲಸುಬ್ರಹ್ಮಣ್ಯಂ ‘ಗಾನಗಂಧರ್ವ’ನಿಗೆ ಕನ್ನಡ ಅಂದ್ರೆ ಅಚ್ಚುಮೆಚ್ಚು ‘ಎದೆ ತುಂಬಿ ಹಾಡುವೆನು’ ಪ್ರೋಗ್ರಾಂನಲ್ಲಿ ಕನ್ನಡದ ಕಿಚ್ಚು..! ಗಾಯನಕ್ಕೂ ಸೈ.. ನಟನೆಗೂ ಸೈ ಎಂದಿದ್ದ ಗಾನಗಂಧರ್ವ ಗಾಯನ ಮಾತ್ರವಲ್ಲ, ನಟನೆಯನ್ನೂ ಮಾಡಿದ್ದ ‘ಹಾಡುಹಕ್ಕಿ’ ‘ಮಿಥಿಲೆಯ ಸೀತೆಯರು’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟನೆ

‘ದೀಪಾವಳಿ.. ದೀಪಾವಳಿ’ ಹಾಡಲ್ಲೂ ಹೆಜ್ಜೆ ಹಾಕಿದ್ದರು ಸಾಹಸಸಿಂಹ ಅಂದ್ರೆ ಎಸ್ಪಿಬಿಗೆ ಪಂಚಪ್ರಾಣ..! ಎಸ್ಪಿಬಿ ಹಾಡು ಹಾಡಲೇಬೇಕೆಂದು ಕಂಡೀಷನ್ ಹಾಕ್ತಿದ್ದ ವಿಷ್ಣು..! ವಿಷ್ಣುವರ್ಧನ್ ಜೊತೆ ಸ್ನೇಹ ಹೊಂದಿದ್ದ ಬಾಲಸುಬ್ರಹ್ಮಣ್ಯಂ ಒಂದೇ ದಿನ 19 ಹಾಡುಗಳಿಗೆ ಧ್ವನಿಯಾಗಿದ್ದ ಎಸ್ಪಿಬಿ ಹಿಂದಿಯಲ್ಲಿ ಒಂದೇ ದಿನ 16 ಚಿತ್ರಗಳಿಗೆ ಗಾಯನ ‘ಪಲ್ಲವಿ’ ಹಾಡುತ್ತಲೇ ಶಿವನ ‘ಚರಣ’ಕ್ಕೆ ಸುಬ್ರಹ್ಮಣ್ಯಂ ‘ಸಾವಿತ್ರಿ’ ಜೊತೆ ದಾಂಪತ್ಯ ಜೀವನ ಕಳೆದಿದ್ದ ಗಾಯಕ

ಮಗಳಿಗೆ ‘ಪಲ್ಲವಿ’, ಮಗನಿಗೆ ‘ಚರಣ’ ಅಂತಾ ನಾಮಕರಣ ಹೊಸ ಗಾಯಕರ ಅಬ್ಬರದ ನಡುವೆಯೂ ಇತ್ತು ಡಿಮ್ಯಾಂಡ್ ರಿಯಾಲಿಟಿ ಶೋ, ಸಿನಿಮಾಗಳಲ್ಲಿ ಸದಾ ಬಿಜಿಯಾಗಿದ್ದರು ನಾಲ್ಕು ಭಾಷೆಗಳಲ್ಲಿ 6 ರಾಷ್ಟ್ರ ಪ್ರಶಸ್ತಿ ಮುಕುಟ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳೇ ಇವರ ಕಿರೀಟ 40 ಸಾವಿರಕ್ಕೂ ಹೆಚ್ಚು ಹಾಡಿಗಳಿಗೆ ‘ಸ್ವರ’ವಾಗಿದ್ದರು ಬಾಲು ಕಳೆದುಕೊಂಡು ‘ನಂದಿ’ದ ಪ್ರಶಸ್ತಿಗಳ ಹಿರಿಮೆ 6 ಬಾರಿ ರಾಷ್ಟ್ರ ಪ್ರಶಸ್ತಿಗಳನ್ನ ಪಡೆದಿದ್ದ ಎಸ್ಪಿಬಿ

68 ಚಿತ್ರಗಳಿಗಿತ್ತು ಬಾಲು ಸಂಗೀತ ನಿರ್ದೇಶನ 112 ಚಿತ್ರಗಳಲ್ಲಿ ಅಭಿನಯಿಸಿದ್ದ ಬಾಲಸುಬ್ರಹ್ಮಣ್ಯಂ ಎಸ್ಪಿಬಿ ‘ಗಾನ ಭಂಡಾರ’ದಲ್ಲಿವೆ ಸಹಸ್ರ ಹಾಡು ‘ಏರಿದವನು ಚಿಕ್ಕವನಿರಬೇಕು’ ಎಂಬಂತೆ ಬಾಳಿದ್ದರು ಚಿತ್ರರಂಗದ ಪಾಲಿಗೆ ‘ಮುದ್ದಿನ ಮಾವ’ನಾಗಿದ್ದ ಎಸ್ಪಿಬಿ ಗಾಯಕರ ಪಟ್ಟಿಯಲ್ಲಿ ‘ಅಗ್ರಜ’ನಾಗಿ ಗುರುತಿಸಿಕೊಂಡಿದ್ದರು ‘ಈ ಭೂಮಿ’ ಬಿಟ್ಟು ‘ಈ ಬಾನು..’ನತ್ತ ಬಾಲು ಪಯಣ ಸಂಗೀತ ಲೋಕಕ್ಕೆ ‘ತೂಫಾನ್’ನಂತೆ ಬಂದಿದ್ದ ‘ಗಂಧರ್ವ’

‘ದೇವದಾಸ’ನಿಗೂ ಅಚ್ಚುಮೆಚ್ಚಾಗಿತ್ತು ಬಾಲು ಗಾಯನ ‘ಈ ಸಂಜೆ’ ಸಂಗೀತ ಲೋಕದಲ್ಲಿ ಆವರಿಸಿದ ಶೋಕ ‘ಕಾಲ್ಗೆಜ್ಜೆ’ ನಾದದಲ್ಲೇ ‘ಸ್ವರ’ ಮೂಡಿಸಿದ್ದ ಗಾಯಕ ಕಂಠಸಿರಿ ಮೂಲಕ ‘ಧೂಳ್’ ಎಬ್ಬಿಸಿದ್ದ ಎಸ್ಪಿಬಿ ‘ಬಣ್ಣ ಬಣ್ಣದ ಲೋಕ’ದಲ್ಲಿ ಇಂದು ‘ಮೌನರಾಗ’ ‘ಮರ್ಯಾದಾ ರಾಮಣ್ಣ’ನಿಗೂ ‘ಇಷ್ಟ’ವಾಗಿದ್ದ ರಾಗ ‘ಕುಹೂ.. ಕುಹೂ..’ ಎನ್ನುತ್ತಲೇ ಸಾಗಿತ್ತು ‘ಪ್ರೀತಿಯ ತೇರು’ ಸ್ನೇಹಿತರ ಪಾಲಿಗೆ ‘ಆಪ್ತ ರಕ್ಷಕ’ನಾಗಿ ಬಾಳಿದ ಬಾಲು

‘ಸೊಗಸುಗಾರ’ನಾದರೂ ‘ಗುಣ’ವಂತನಾಗಿ ಜೀವನ ಹೊಸ ಗಾಯಕರ ಪಾಲಿಗೆ ಇವರೇ ‘ಸ್ಕೂಲ್ ಮಾಸ್ಟರ್’ ‘ಪ್ರೀತಿ ನೀ ಶಾಶ್ವತನಾ..’ ಎನ್ನುತ್ತ ‘ಪ್ರೇಮಿಸಂ’ ಮಾಡಿದ್ದರು ‘ತಿಪ್ಪಾರಳ್ಳಿ ತರಲೆಗಳು’ ‘ಪ್ರೇಮಿಸಂ’ ಮಾಡಲು ಇವರೇ ಸ್ಫೂರ್ತಿ ‘ಹೂ’ ಕೊಟ್ಟು ‘ಕುಣಿದು ಕುಣಿದು ಬಾರೇ’ ಎಂದಿದ್ದ ಗಾಯಕ ‘ಮೈಲಾರಿ’ಗೆ ಹಾಡಿದ ಪರಿ ನಿಜಕ್ಕೂ ‘ಸೂಪರ್’ ಸಂಗೀತ ಸಾಗರದ ‘ಅಂಬಾರಿ’ಯಲ್ಲಿ ವಿಜೃಂಭಿಸಿದ್ದರು ಎಸ್ಪಿಬಿ ಹಾಡು ಕೇಳಿದರೆ ಅಭಿಮಾನಿಗಳಿಗೆ ‘ಏನೋ ಒಂಥರಾ’

ಬಾಲಸುಬ್ರಹ್ಮಣ್ಯಂರನ್ನ ಕಳೆದುಕೊಂಡು ‘ತಬ್ಬಲಿ’ಯಾದ ಸಂಗೀತ ‘ರಾಜಕುಮಾರಿ’ ಪಾಲಿಗೂ ಬಾಲು ‘ನಮ್ ಯಜಮಾನರು’ ಎಲ್ಲಾ ಭಾಷೆಗಳ ಆರಾಧಿಸುತ್ತಾ ಗಾನ‘ಪೂಜಾರಿ’ಯಾಗಿದ್ದರು ಎಲ್ಲಾ ಹಾಡುಗಳನ್ನೂ ‘ಜೋಶ್’ನಿಂದಲೇ ಹಾಡುತ್ತಿದ್ದರು ‘ಬಳ್ಳಾರಿ ನಾಗ’ನಿಗೂ ಧ್ವನಿಯಾಗಿದ್ದ ಬಾಲುಗೆ ‘ಸೆಲ್ಯೂಟ್’ ‘ಯುಗ ಯುಗಗಳೇ ಸಾಗಲಿ’.. ನಿಮ್ಮ ಹಾಡು ಶಾಶ್ವತ.. ಕನ್ನಡದ ಭಾಷೆಯ ‘ಅಭಿಮಾನಿ’ಯಾಗಿದ್ದ ಬಾಲು ‘ದೇವರು ಕೊಟ್ಟ ತಂಗಿ’ಗೆ ನೆಚ್ಚಿನ ಅಣ್ಣನಾಗಿದ್ದರು ಸಂಗೀತ ಲೋಕದ ‘ಬಂಧು ಬಳಗ’ ಬಿಟ್ಟು ಹೋದ ಗಾಯಕ