ಯಾವಾಗ ರಿಲೀಸ್​ ಆಗಲಿದೆ ಚಿರಂಜೀವಿ ಸರ್ಜಾ ನಟನೆಯ ‘ರಣಂ’? ಫ್ಯಾನ್ಸ್​ಗೆ ಬ್ರೇಕಿಂಗ್​ ನ್ಯೂಸ್ ನೀಡಿದ​ ಚಿತ್ರತಂಡ

ಕಳೆದ ವರ್ಷ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಅಭಿಮಾನಿಗಳು ಖುಷಿ ಪಡುವಂತಹ ಸುದ್ದಿ ಕೇಳಿಬಂದಿದೆ. ಮಾ.26ಕ್ಕಾಗಿ ಅವರೆಲ್ಲ ಕಾಯುವಂತಾಗಿದೆ.

ಯಾವಾಗ ರಿಲೀಸ್​ ಆಗಲಿದೆ ಚಿರಂಜೀವಿ ಸರ್ಜಾ ನಟನೆಯ ‘ರಣಂ’?  ಫ್ಯಾನ್ಸ್​ಗೆ ಬ್ರೇಕಿಂಗ್​ ನ್ಯೂಸ್ ನೀಡಿದ​ ಚಿತ್ರತಂಡ
‘ರಣಂ’ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ

Updated on: Mar 10, 2021 | 2:07 PM

ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಆದಂತಹ ಚಾರ್ಮ್​ ಹೊಂದಿದ್ದ ನಟ ಚಿರಂಜೀವಿ ಸರ್ಜಾ ಅವರು 2020ರ ಜೂನ್​ 7ರಂದು ಹೃದಯಾಘಾತದಿಂದ ಮೃತರಾದರು. ಆ ದುರ್ಘಟನೆ ಸಂಭವಿಸುವುದಕ್ಕೂ ಮುನ್ನ ಅವರು ಕೆಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಅವುಗಳಲ್ಲಿ ‘ರಣಂ’ ಕೂಡ ಪ್ರಮುಖವಾದದ್ದು. ಈಗ ಆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ರಣಂ’ ಚಿತ್ರತಂಡ ರಿಲೀಸ್​ ದಿನಾಂಕ ಘೋಷಿಸಿಕೊಂಡಿದೆ.

ಮಾರ್ಚ್​ 26ರಂದು ರಾಜ್ಯಾದ್ಯಂತ ‘ರಣಂ’ ಬಿಡುಗಡೆ ಆಗಲಿದೆ. ವಿಶೇಷ ಏನೆಂದರೆ, ಚಿರು ನಿಧನರಾಗುವುದಕ್ಕೂ ಮುನ್ನ ಈ ಸಿನಿಮಾದ ಶೂಟಿಂಗ್​ ಮತ್ತು ಡಬ್ಬಿಂಗ್​ ಕೆಲಸಗಳನ್ನು ಮುಗಿಸಿದ್ದರು. ಚಿರು ಧ್ವನಿ ನೀಡಿದ ಕೊನೇ ಸಿನಿಮಾ ಇದಾಗಿದೆ. ಹಾಗಾಗಿ, ಇದು ಅಭಿಮಾನಿಗಳ ಪಾಲಿಗೆ ಸ್ಪೆಷಲ್​. ನಂತರ ಬರಲಿರುವ ‘ರಾಜಮಾರ್ತಾಂಡ’ ಚಿತ್ರದ ಶೂಟಿಂಗ್​ ಕೂಡ ಮುಗಿದಿದೆಯಾದರೂ ಅದಕ್ಕೆ ಚಿರು ಡಬ್ಬಿಂಗ್​ ಮಾಡುವ ಮುನ್ನವೇ ಇಹಲೋಕ ತ್ಯಜಿಸಿದ್ದು ವಿಪರ್ಯಾಸ. ಹಾಗಾಗಿ, ದೊಡ್ಡ ಪರದೆಯಲ್ಲಿ ಚಿರಂಜೀವಿ ಸರ್ಜಾ ಅವರ ಧ್ವನಿಯಿರುವ ಸಿನಿಮಾ ನೋಡುವ ಕೊನೇ ಅವಕಾಶವು ‘ರಣಂ’ ಮೂಲಕ ಅಭಿಮಾನಿಗಳಿಗೆ ಸಿಗುತ್ತಿದೆ.

ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಜೊತೆ ‘ಆ ದಿನಗಳು’ ಚೇತನ್​ ಕೂಡ ನಟಿಸಿದ್ದಾರೆ. ನಾಯಕಿಯಾಗಿ ವರಲಕ್ಷ್ಮೀ ಶರತ್​ ಕುಮಾರ್​ ಅಭಿನಯಿಸಿದ್ದಾರೆ. ಚಿರು ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮಧುಸೂದನ್, ಕಾರ್ತಿಕ್, ಅಭಿಲಾಶ್, ಹರೀಶ್, ಪ್ರವೀಣ್​ ಮುಂತಾದವರು ಕೂಡ ನಟಿಸಿದ್ದಾರೆ. ವಿ. ಸಮುದ್ರ ನಿರ್ದೇಶನದ ಈ ಚಿತ್ರಕ್ಕೆ ರವಿಶಂಕರ್ ಹಾಗೂ ಎಸ್. ಚಿನ್ನ ಸಂಗೀತ ನೀಡಿದ್ದಾರೆ. ಆರ್.ಎಸ್. ಪ್ರೊಡಕ್ಷನ್ಸ್ ಮೂಲಕ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡಿರುವ 21ನೇ ಚಿತ್ರವಿದು. ಕಿರಣ್ ಗೌಡ ಈ ಚಿತ್ರದ ಸಹ ನಿರ್ಮಾಪಕರು.

ಚಿರು ನಟಿಸಿರುವ ಮತ್ತೊಂದು ಸಿನಿಮಾ ‘ರಾಜಮಾರ್ತಾಂಡ’ ಸಿನಿಮಾಗೆ ಚಿರು ಸಹೋದರ ಧ್ರುವ ಸರ್ಜಾ ಧ್ವನಿ ನೀಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಆ ಸಿನಿಮಾದ ಟ್ರೇಲರ್​ ಅನ್ನು ಚಿರು-ಮೇಘನಾ ರಾಜ್​ ಪುತ್ರನ ಕೈಯಲ್ಲಿ ರಿಲೀಸ್​ ಮಾಡಿಸಲಾಗಿತ್ತು. ಅದು 1.8 ಮಿಲಿಯನ್​ ವ್ಯೂಸ್​ ಪಡೆದುಕೊಂಡಿದೆ. ‘ರಾಜಮಾರ್ತಾಂಡ’ ಮೇಲೆ ಅಭಿಮಾನಿಗಳಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ.

ಇದನ್ನೂ ಓದಿ: ನನಗೆ ನನ್ನ ಮಗನೇ ಶಕ್ತಿ, ಸ್ಫೂರ್ತಿ.. ಅವನಿಗೆ ಒಳ್ಳೇ ಹೆಸರು ಇಡ್ತೇವೆ -ಮೇಘನಾ ರಾಜ್

 ಪತ್ನಿ-ಅತ್ತೆಯಿಂದ ನಟ ಚಿರಂಜೀವಿ ಸರ್ಜಾ ಸಮಾಧಿ ಬಳಿ ಕ್ರಿಶ್ಚಿಯನ್​ ಪ್ರಾರ್ಥನೆ

Published On - 1:01 pm, Wed, 10 March 21

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us