ಪತ್ನಿ-ಅತ್ತೆಯಿಂದ ನಟ ಚಿರಂಜೀವಿ ಸರ್ಜಾ ಸಮಾಧಿ ಬಳಿ ಕ್ರಿಶ್ಚಿಯನ್​ ಪ್ರಾರ್ಥನೆ

ಪತ್ನಿ-ಅತ್ತೆಯಿಂದ ನಟ ಚಿರಂಜೀವಿ ಸರ್ಜಾ ಸಮಾಧಿ ಬಳಿ ಕ್ರಿಶ್ಚಿಯನ್​ ಪ್ರಾರ್ಥನೆ

ಬೆಂಗಳೂರು: ಸ್ಯಾಂಡಲ್​ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಬೆಂಗಳೂರು ದಕ್ಷಿಣ ತಾಲೂಕಿನ ನೆಲಗುಳಿ ಗ್ರಾಮದ ಬಳಿ ಸಹೋದರ ಧ್ರುವ ಸರ್ಜಾ ಫಾರ್ಮ್‌ಹೌಸ್​ನಲ್ಲಿ ನೆರವೇರಿದೆ. ಗೌಡ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆಯನ್ನು ಮಾಡಲಾಯಿತು. ಇದೇ ವೇಳೆ, ನಟ ಚಿರಂಜೀವಿ ಸರ್ಜಾ ಸಮಾಧಿ ಮುಂದೆ ಕ್ರಿಶ್ಚಿಯನ್​ ಸಂಪ್ರದಾಯದಂತೆ ನಿಕಟ ಸಂಬಂಧಿಕರು ಪ್ರಾರ್ಥನೆ ಸಲ್ಲಿಸಿದರು. ಚಿರು ಪತ್ನಿ ಮೇಘನಾ ರಾಜ್ ಹಾಗೂ ಅತ್ತೆ ಪ್ರಮೀಳಾ ಜೋಷಾಯ್ ಸೇರಿದಂತೆ ಕೆಲ ಸಂಬಂಧಿಗಳು ಸಮಾಧಿ ಬಳಿ ಕುಳಿತು ಕ್ರಿಶ್ಚಿಯನ್ ಸಂಪ್ರದಾಯದಂತೆ ಆಂಗ್ಲ ಭಾಷೆ […]

sadhu srinath

|

Jun 08, 2020 | 7:23 PM

ಬೆಂಗಳೂರು: ಸ್ಯಾಂಡಲ್​ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಬೆಂಗಳೂರು ದಕ್ಷಿಣ ತಾಲೂಕಿನ ನೆಲಗುಳಿ ಗ್ರಾಮದ ಬಳಿ ಸಹೋದರ ಧ್ರುವ ಸರ್ಜಾ ಫಾರ್ಮ್‌ಹೌಸ್​ನಲ್ಲಿ ನೆರವೇರಿದೆ. ಗೌಡ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆಯನ್ನು ಮಾಡಲಾಯಿತು.

ಇದೇ ವೇಳೆ, ನಟ ಚಿರಂಜೀವಿ ಸರ್ಜಾ ಸಮಾಧಿ ಮುಂದೆ ಕ್ರಿಶ್ಚಿಯನ್​ ಸಂಪ್ರದಾಯದಂತೆ ನಿಕಟ ಸಂಬಂಧಿಕರು ಪ್ರಾರ್ಥನೆ ಸಲ್ಲಿಸಿದರು. ಚಿರು ಪತ್ನಿ ಮೇಘನಾ ರಾಜ್ ಹಾಗೂ ಅತ್ತೆ ಪ್ರಮೀಳಾ ಜೋಷಾಯ್ ಸೇರಿದಂತೆ ಕೆಲ ಸಂಬಂಧಿಗಳು ಸಮಾಧಿ ಬಳಿ ಕುಳಿತು ಕ್ರಿಶ್ಚಿಯನ್ ಸಂಪ್ರದಾಯದಂತೆ ಆಂಗ್ಲ ಭಾಷೆ ಹಾಗೂ ಕನ್ನಡ ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸೋದರ ಮಾವ ಅರ್ಜುನ್ ಸರ್ಜಾ ಭಾವಪರವಶರಾಗಿ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ, ಬಿಕ್ಕಳಿಕೆ ತಾಳಲಾರದೆ ಅರ್ಜುನ್ ಸರ್ಜಾ ತಾವೊಬ್ಬರೇ ಏಕಾಂತಕ್ಕೆ ತೆರಳಿದರು.

Follow us on

Related Stories

Most Read Stories

Click on your DTH Provider to Add TV9 Kannada