ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರೀತಿ ಪರೀಕ್ಷೆಯ ಕಾಲ
Daily Horoscope 4 February: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ ಬುಧವಾರ ವಿಭಜನೆ, ವಿದ್ಯಾಭ್ಯಾಸ, ವಿದೇಶ ಪ್ರವಾಸ, ಪರ ಕಾರ್ಯ, ಸಮೀಕ್ಷೆ, ಖರೀದಿ, ಸಣ್ಣ ಹೂಡಿಕೆ ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ:
ಆದಾಯಕ್ಕೆ ಮೂಲವಾದುದನ್ನು ಹುಡುಕಿಕೊಳ್ಳುವುದು ಭವಿಷ್ಯ ದೃಷ್ಟಿಯಿಂದ ಉತ್ತಮ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ನಿಮಗಾದ ನೋವಿಗೆ ಯಾರ ಸಾಂತ್ವನವೂ ಉಪಯೋಗಕ್ಕೆ ಬಾರದು. ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗಬಹುದು. ನಕಾರಾತ್ಮಕತೆಯನ್ನು ಬುದ್ಧಿಪೂರ್ವಕವಾಗಿ ಹಿಮ್ಮೆಟ್ಟಿಸಿ. ನಿಮ್ಮ ಮನೋಬಲವು ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಇನ್ನೊಬ್ಬರ ಅನುಭವವನ್ನು ನೀವು ಪಾಠವಾಗಿಸಿಕೊಳ್ಳಿ.
ವೃಷಭ ರಾಶಿ:
ಹೊಸ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯ ಸಾಲದು. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಅತಿಥಿಗಳ ಜೊತೆ ಸಲ್ಪ ಸಮಯ ಕಳೆಯಬೇಕಾಗುವುದು. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಲಿದ್ದೀರಿ. ಭೂಮಿಯ ವ್ಯವಹಾರದಲ್ಲಿ ನೀವು ಜಯಶಾಲಿಯಾಗುವಿರಿ. ಒಬ್ಬರ ಬಳಿಯೇ ಎಲ್ಲವನ್ನೂ ಹೇಳಿಕೊಳ್ಳಿ.
ಮಿಥುನ ರಾಶಿ:
ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ. ಕುಟುಂಬ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಮಕ್ಕಳ ಮೇಲೇ ಅಕ್ಕರೆ ಇರುವುದು. ಹೇಗಾದರೂ ಮಾಡಿ ಬೆಳೆಯಬೇಕು ಎನ್ನುವ ಬಯಕೆ ಅತಿಯಾಗಿರುವುದು. ಅಸಹಾಯಕತೆಯು ಸಿಟ್ಟಾಗಿ ಪರಿಣಮಿಸಬಹುದು.
ಕರ್ಕಾಟಕ ರಾಶಿ:
ಸಲ್ಲದ ಆಸೆಗಳಿಂದ ನಿಮಗೆ ಬಂಧನವನ್ನು ಹಾಕಿಕೊಳ್ಳುವಿರಿ. ಎಂದೋ ಬಯಸಿದ ವಸ್ತುವುದು ಇಂದು ನಿಮಗೆ ಅನಿರೀಕ್ಷಿತವಾಗಿ ಸಿಗುವುದು. ಸಂಗಾತಿಯ ಆಯ್ಕೆಯಲ್ಲಿ ಗೊಂದಲ ಇರುವುದು. ಯಾರಿಗಾದರೂ ನಿಜವನ್ನು ತಿಳಿಸಬೇಕಾದರೆ ಮನಸ್ಸಿಗೆ ನೋವಾಗದಂತೆ ತಿಳಿಸಿ. ಎಂದೋ ಆದ ಘಟನೆಯನ್ನು ಮತ್ತೆ ನೆನಪಿಸಿಕೊಂಡು ಮನಸ್ತಾಪವನ್ನು ತಂದುಕೊಳ್ಳುವಿರಿ. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ ಮಾಡಿ.
ಸಿಂಹ ರಾಶಿ:
ದೌರ್ಭಾಗ್ಯಗಳು ನಿಮ್ಮನ್ನು ಯಾವುದಾದರೂ ಒಂದು ರೀತಿಯಲ್ಲಿ ನಿಮ್ಮನ್ನು ಸೇರಬಹುದು. ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ನಿಮ್ಮ ಆದಾಯಕ್ಕೆ ತಕ್ಕಂತೆ ಜೀವನವಿರಲಿದೆ. ನೀವೇ ಆಶ್ಚರ್ಯವಾಗುವಂತೆ ಆಕರ್ಷಕವಾಗಿ ನೀವು ಇಂದು ಕಾಣಲಿದ್ದೀರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ನಿಮ್ಮ ಮಾತಿಗೆ ಕೆಲವರ ಬೆಂಬಲವು ನಿಮಗೆ ಖುಷಿಕೊಡುವುದು. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು.
ಕನ್ಯಾ ರಾಶಿ:
ನಿಮ್ಮ ಸಹಕಾರವನ್ನು ಬಂಧುಗಳು ಮರೆತು ವರ್ತಿಸುತ್ತಾರೆ. ಪ್ರಯಾಣದಲ್ಲಿ ಸುರಕ್ಷತೆಯ ಬಗ್ಗೆ ಗಮನವಿರಲಿ. ಹಣದ ಕೊರೆತೆ ಇಲ್ಲದಿದ್ದರೂ ಹಳೆಯ ಮನೆಯನ್ನೇ ಅವಶ್ಯಕತೆಗೆ ಸರಿಯಾಗಿ ಗಟ್ಟಿ ಮಾಡಿಕೊಳ್ಳಿ. ಮಿತಿಯಲ್ಲಿ ನಿಮ್ಮ ಮಾತು ಇರಬೇಕಾಗುವುದು. ವಿದೇಶೀಯ ವಸ್ತುಗಳ ಬಳಕೆಯನ್ನು ಮಾಡುವುದು ಕಾರಣಾಂತರಗಳಿಂದ ಇಷ್ಟವಾಗದು. ಸಂಪನ್ಮೂಲ ವ್ಯಕ್ತಿಗಳಾಗಿ ದೂರದ ಊರಿಗೆ ಹೋಗುವಿರಿ.
ತುಲಾ ರಾಶಿ:
ಉನ್ನತ ಮಟ್ಟದ ಕಾರ್ಯಕ್ಕೆ ಪರಿಚಿತರ ಬೆಂಬಲವನ್ನು ಪಡೆಯುವಿರಿ. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಬೇರೆಯವರ ಕೆಳಗೆ ಕೆಲಸಮಾಡಲು ಇಷ್ಟವಾಗದು. ಕುಟುಂಬದಲ್ಲಿ ನಡೆಯುವ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು. ಎಲ್ಲ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಕಾಣಬೇಕಾಗಬಹುದು. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡುವುದಿಲ್ಲ.
ವೃಶ್ಚಿಕ ರಾಶಿ:
ನಿಮ್ಮ ಮಾತಿನಿಂದ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಜೀವನ ಶೈಲಿ ವಿಶೇಷ ರೀತಿಯಲ್ಲಿ ಕಾಣಿಸಬಹುದು. ಮೇಲಿಂದ ಮೇಲೆ ಬರುತ್ತಿರುವ ಆರೋಗ್ಯದ ತೊಂದರೆಯು ನಿಮಗೆ ಅಸತಂಕವನ್ನು ಉಂಟುಮಾಡಬಹುದು. ಬೇಡವಾದುದನ್ನು ಕಳೆದುಕೊಳ್ಳಲು ಪ್ರಯತ್ನಿಸಿ. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.
ಧನು ರಾಶಿ:
ರಾಜಕೀಯದವರು ತಮ್ಮ ಹೇಳಿಕೆಗಳಿಗೆ ಸ್ಪಷ್ಟತೆಯನ್ನು ನೀಡುವರು. ಸ್ನೇಹಿತರ ನಿರೀಕ್ಷೆಯಲ್ಲಿ ಹೆಚ್ಚಿನ ಸಮಯವು ಕಳೆದುಹೋಗುವುದು. ಅಪರಿಚಿತರ ಮೂಲಕ ನಿಮ್ಮ ಹಣವನ್ನು ಕಳೆದುಕೊಳ್ಳಲಿದ್ದೀರಿ. ವೃತ್ತಿಯಲ್ಲಿ ನಿಮಗೆ ವಿರಾಮವು ಇಂದು ಸಿಗದೇ ನಿಮ್ಮ ಸ್ವಂತ ಕಾರ್ಯವನ್ನು ಕೈ ಬಿಡಬೇಕಾಗುವುದು. ನಿಮ್ಮ ಜೀವನ ಪ್ರೀತಿ ಇತರರಿಗೆ ಖುಷಿಕೊಡುವುದು. ಅಗತ್ಯವಿದ್ದಾಗ ಮಾತ್ರ ಸಾಲದ ಬಗ್ಗೆ ಆಲೋಚಿಸಿ. ಸರ್ಕಾರಿ ಉದ್ಯೋಗದವರು ವರ್ಗಾವಣೆಯಿಂದ ದೂರವಿರಬೇಕಾಗಬಹುದು.
ಮಕರ ರಾಶಿ:
ಸಂಗಾತಿಯ ಸಂಪತ್ತಿನಿಂದ ನಿಮಗೆ ಬೇಕಾದುದನ್ನು ಪಡೆಯುವಿರಿ. ಅತಿಯಾದ ಬಾಯಾರಿಕೆ ಆಗಬಹುದು. ಯಾರ ಮಾತನ್ನು ಒಪ್ಪಿಕೊಳ್ಳದೇ ನಿಮ್ಮದೇ ಆದ ದಾರಿಯಲ್ಲಿ ನಡೆಯುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಮಧ್ಯೆ ಅನಗತ್ಯರ ಪ್ರವೇಶದಿಂದ ಕೋಪಗೊಳ್ಳುವಿರಿ. ನಿಮ್ಮ ಮಕ್ಕಳ ವರ್ತನೆಯಿಂದ ಬೇಸರ ಆಗುವುದು. ಮಾಡಬೇಕಾದ ಒಳ್ಳೆಯ ಕೆಲಸದ ಬಗ್ಗೆ ಗಮನವಿರಲಿ. ಬೇರೆಯವರಿಂದ ನಿಮ್ಮವರ ಬಗ್ಗೆ ದೂರನ್ನೂ ಕೇಳಬೇಕಾದೀತು.
ಕುಂಭ ರಾಶಿ:
ಸಹೋದ್ಯೋಗಿಗಳ ಜೊತೆ ವಿವಾಹ ನಿಶ್ಚಯ ಮಾಡಿಕೊಳ್ಳುವಿರಿ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಿದ್ದರೂ ಅದನ್ನು ಬಳಸಿಕೊಳ್ಳುವ ಜಾಣತನವೂ ಅಗತ್ಯವಿದೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಕಾರ್ಯದ ಒತ್ತಡದಿಂದ ಸಾಧ್ಯವಾಗದು. ಮೋಜಿನ ಕಾರಣಕ್ಕೆ ಸುತ್ತಾಟ ಮಾಡುವಿರಿ. ಬಂಧುಗಳ ಜೊತೆ ಅನಗತ್ಯ ವಾಗ್ವಾದ ಬೇಡ. ನಿಮ್ಮ ಮೇಲಿನ ಪ್ರೀತಿ ಕಡಿಮೆ ಆಗುವುದು. ಯಾವುದೂ ಬೇಡವೆನ್ನುವ ಭಾವವು ಇರುವುದು.
ಮೀನ ರಾಶಿ:
ಪ್ರೀತಿಯ ವಿಷಯಗಳಲ್ಲಿ ಭಾವನೆಗಳಿಗೆ ಗಮನ ಕೊಡಿ. ಹಣದ ವಿಷಯಗಳಲ್ಲಿ ಯೋಜನೆಗೆ ಆದ್ಯತೆ ನೀಡಬೇಕು. ಹಳೆಯ ದಾಂಪತ್ಯವಾದರೂ ಸಂತೋಷಕ್ಕೆ ಕೊರತೆ ಇಲ್ಲದಂತೆ ಇರುವಿರಿ. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಕೊಡುಗೆಯನ್ನು ನೀಡುವಿರಿ. ಕಛೇರಿಯ ಕೆಲಸಗಳನ್ನು ವೇಗವಾಗಿ ಮಾಡಿ ಜವಾಬ್ದಾರಿಯನ್ನು ಮುಗಿಸುವಿರಿ. ವ್ಯವಹಾರದಲ್ಲಿ ಹೆಚ್ಚಿನ ಲಾಭವು ಬರಬಹುದು. ಪ್ರಸಾರ ಮಾಧ್ಯಮದವರು ಮನೆಯಿಂದ ದೂರ ಹೋಗಬೇಕಾಗಬಹುದು.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಸೌಭಾಗ್ಯ, ಕರಣ : ತೈತಿಲ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 23 pm, ಇಂದಿನ ಶುಭಾಶುಭ ಕಾಲ : ರಾಹು 12:38 – 14:05, ಯಮಗಂಡ ಕಾಲ 08:19 – 09:46, ಗುಳಿಕ ಕಾಲ 11:12 – 12:38
-ಲೋಹಿತ ಹೆಬ್ಬಾರ್ – 8762924271 (what’s app only)
