AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 4ರ ದಿನಭವಿಷ್ಯ

Daily Numerology February 4: ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 4ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 4ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Feb 04, 2026 | 12:30 AM

Share

ಈ ದಿನ ನಿಮ್ಮಿಂದ ಸಾಧ್ಯವಾದಲ್ಲಿ ಗ್ರಂಥ ದಾನವನ್ನು ಮಾಡಿ. ಉದಾಹರಣೆಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಹೀಗೆ ಗ್ರಂಥವೊಂದನ್ನು ದಾನ ಮಾಡಿ. ಇನ್ನು ಸಾರ್ವಜನಿಕ ಸಾರಿಗೆಯನ್ನು ಬಳಸುವವರಾಗಿದ್ದಲ್ಲಿ ಮುಖ್ಯವಾದ ಡಾಕ್ಯುಮೆಂಟ್ ಗಳು, ಗ್ಯಾಜೆಟ್ ಗಳನ್ನು ತೆಗೆದುಕೊಂಡುವಾಗ ಜಾಗ್ರತೆಯಿಂದ ಇರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಕ್ಲಿಕ್ ಆಗಿಯೇ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ನೀವು ಆರಂಭಿಸಿದ ವೃತ್ತಿ- ವ್ಯಾಪಾರ ಅಂದುಕೊಂಡ ದಿಕ್ಕಿನಲ್ಲಿಯೇ ಸಾಗಲಿದೆ. ಹಣಕಾಸಿನ ಹೊಂದಾಣಿಕೆ ಮಾಡಬೇಕು ಎಂದಿದ್ದಲ್ಲಿ ಅದು ಕೂಡ ಸಲೀಸಾಗಿ ಆಗಲಿದೆ. ನೀವು ಮುಂಜಾಗ್ರತೆಯಿಂದ ಹಣ ಉಳಿತಾಯ ಮಾಡಿಕೊಂಡು ಬಂದಿದ್ದು ಅಂತೂ ಪ್ರಯೋಜನಕ್ಕೆ ಬಂತು ಎಂಬ ಸಮಾಧಾನ ಈ ದಿನ ನಿಮಗೆ ಸಿಗಲಿದೆ

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಗ್ಯಾರೇಜ್ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ವಾಹನಗಳ ಬಿಡಿ ಭಾಗಗಳ ಹೋಲ್ ಸೇಲ್ ಮಾರಾಟ ಮಾಡುವಂಥವರಿಗೆ ವಿಸ್ತರಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ರಿಯಾಯಿತಿಯಲ್ಲಿ ಸಿಗುತ್ತಿದೆ ಎಂಬ ಕಾರಣಕ್ಕೋ ಅಥವಾ ಬೇರೆ ಯಾವುದೋ ಆಫರ್ ಗಳಿವೆ ಅಂತಲೋ ವಾಷಿಂಗ್ ಮಶೀನ್, ರೆಫ್ರಿಜರೇಟ್, ಟಿವಿ ಇಂಥವುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮಗೆ ತುಂಬ ಚೆನ್ನಾಗಿ ಗೊತ್ತಿರುವಂಥ- ಅನುಭವ ಇರುವಂಥ ವಿಷಯಗಳಲ್ಲಿಯೇ ನಿರೀಕ್ಷಿತ ಮಟ್ಟದ ಫಲಿತಾಂಶ ಪಡೆದುಕೊಳ್ಳಲು ಹರಸಾಹಸ ಪಡುವಂತೆ ಆಗಲಿದೆ. ನಿಮ್ಮ ಸುತ್ತಮುತ್ತ ಏನೋ ಬದಲಾವನೆ ಆಗುತ್ತಿದೆ ಎಂಬುದು ಬಲವಾಗಿ ಮನಸ್ಸಿನಲ್ಲಿ ಬೇರೂರಲಿದೆ. ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಕೆಲವು ಕೋರ್ಸ್ ಗಳಿಗೆ ಸೇರ್ಪಡೆ ಆಗುವುದಕ್ಕೆ ಆಲೋಚನೆ ಮಾಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.