ಚಿರು ಕುಟುಂಬಕ್ಕೆ ಕೊರೊನಾ ಪಾಸಿಟಿವ್: ನಾನು, ಜೂನಿಯರ್ C ಚೆನ್ನಾಗಿದ್ದೇವೆ ಅಂದ್ರು ಮೇಘನಾ ರಾಜ್
ಚಿರು ಪತ್ನಿ ಮೇಘನಾ ರಾಜ್, ಜೂನಿಯರ್ ಚಿರು, ಮೇಘನಾ ತಂದೆ, ತಾಯಿ ಎಲ್ಲರಿಗೂ ಕೊವಿಡ್ ಪಾಸಿಟಿವ್ ವರದಿ ಬಂದಿದೆ. ಮೇಘನಾ ರಾಜ್ ಈ ಬಗ್ಗೆ ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ನಿಧನರಾದ ನಟ ಚಿರಂಜೀವಿ ಸರ್ಜಾ ಕುಟುಂಬದ ಸದಸ್ಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಪತ್ನಿ ಮೇಘನಾ ರಾಜ್, ಪುಟ್ಟ ಮಗು, ಮೇಘನಾ ರಾಜ್ ತಂದೆ, ತಾಯಿ ಎಲ್ಲರಿಗೂ ಕೊವಿಡ್ ಪಾಸಿಟಿವ್ ವರದಿ ಬಂದಿದ್ದು, ಮೇಘನಾ ರಾಜ್ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
ಕೊವಿಡ್ ಪಾಸಿಟಿವ್ ಆದ ಬಗ್ಗೆ ಇಂದು ಸಂಜೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಕಳೆದ ಕೆಲವು ವಾರಗಳಿಂದ ತಮ್ಮ ಸಂಪರ್ಕಕ್ಕೆ ಬಂದಿರುವವರು ಜಾಗ್ರತೆ ವಹಿಸುವಂತೆ ತಿಳಿಸಿದ್ದಾರೆ.
ನಾವು ನಮ್ಮ ಕುಟುಂಬ ಕೊವಿಡ್ ಗೆಲ್ಲುತ್ತೇವೆ ನಾನು, ನಮ್ಮ ಕುಟುಂಬ ಮತ್ತು ಮಗು ಎಲ್ಲರೂ ಚೆನ್ನಾಗಿದ್ದೇವೆ. ಚಿಕಿತ್ಸೆ ಪಡೆಯುತ್ತಿದ್ದೇವೆ. ಕೊರೊನಾ ಗೆದ್ದೇ ಗೆಲ್ಲುತ್ತೇವೆ. ನನ್ನ ಅಥವಾ ಚಿರು ಅಭಿಮಾನಿಗಳು ತಳಮಳಗೊಳ್ಳಬಾರದು ಎಂದು ಕೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಹುಟ್ಟಿದ್ದ ಗಂಡು ಮಗುವನ್ನು ಜೂನಿಯರ್ C ಎಂದು ಕರೆದಿರುವ ಅವರು, ಮಗನೂ ಚೆನ್ನಾಗಿದ್ದಾನೆ ಎಂದು ಹೇಳಿದ್ದಾರೆ.
— MEGHANA RAJ SARJA (@meghanasraj) December 8, 2020
ನನಗೆ ನನ್ನ ಮಗನೇ ಶಕ್ತಿ, ಸ್ಫೂರ್ತಿ.. ಅವನಿಗೆ ಒಳ್ಳೇ ಹೆಸರು ಇಡ್ತೇವೆ -ಮೇಘನಾ ರಾಜ್
Published On - 7:03 pm, Tue, 8 December 20