ಉದಾತ್ತ ಉದ್ದೇಶಕ್ಕಾಗಿ.. ಪೊಗರು ಶೂಟಿಂಗ್​ ನಂತರ ತಲೆಗೂದಲು ಕಟ್ ಮಾಡಿಸ್ಕೊಂಡ ಧ್ರುವ ಸರ್ಜಾ

ಉದಾತ್ತ ಉದ್ದೇಶಕ್ಕಾಗಿ.. ಪೊಗರು ಶೂಟಿಂಗ್​ ನಂತರ ತಲೆಗೂದಲು ಕಟ್ ಮಾಡಿಸ್ಕೊಂಡ ಧ್ರುವ ಸರ್ಜಾ

ಬೆಂಗಳೂರು: ಚಿತ್ರನಟ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಉದ್ದ ಕೂದಲಿಗೆ ಕೊನೆಗೂ ಕತ್ತರಿ ಹಾಕಿದ್ದಾರೆ. ‘ಪೊಗರು’ ಚಿತ್ರಕ್ಕಾಗಿ 3 ವರ್ಷಗಳ ಕಾಲ ಪೊಗರ್ದಸ್ತಾಗಿ ಬೆಳೆಸಿದ್ದ ಕೂದಲನ್ನು ಒಂದು ಒಳ್ಳೇ ಉದ್ದೇಶಕ್ಕೆ ದಾನ ಮಾಡುವ ಮೂಲಕ ಮಾದರಿಯೂ ಆಗಿದ್ದಾರೆ. ಕಿಮೊಥೆರಪಿ ಚಿಕಿತ್ಸೆ ಪಡೆಯುವ ಕ್ಯಾನ್ಸರ್ ಪೀಡಿತರು ಕೂದಲು ಉದುರುವ ಸಮಸ್ಯೆ ಅನುಭವಿಸುತ್ತಾರೆ. ಇದೇ ಕಾರಣಕ್ಕೆ ಮಕ್ಕಳಲ್ಲಿ ಹಿಂಜರಿಕೆಯ ಮನಃಸ್ಥಿತಿಯೂ ಬೆಳೆಯುತ್ತದೆ. ಇಂಥವರಿಗೆ ವಿಗ್ ತಯಾರಿಸಿ ನೀಡುವ ಕಾರ್ಯದಲ್ಲಿ ಹಲವರು ತೊಡಗಿಸಿಕೊಂಡಿದ್ದಾರೆ. ಧ್ರುವ ಸರ್ಜಾ ದಾನ ಮಾಡಿರುವ ಕೂದಲು […]

KUSHAL V

| Edited By: pruthvi Shankar

Nov 21, 2020 | 2:55 PM

ಬೆಂಗಳೂರು: ಚಿತ್ರನಟ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಉದ್ದ ಕೂದಲಿಗೆ ಕೊನೆಗೂ ಕತ್ತರಿ ಹಾಕಿದ್ದಾರೆ. ‘ಪೊಗರು’ ಚಿತ್ರಕ್ಕಾಗಿ 3 ವರ್ಷಗಳ ಕಾಲ ಪೊಗರ್ದಸ್ತಾಗಿ ಬೆಳೆಸಿದ್ದ ಕೂದಲನ್ನು ಒಂದು ಒಳ್ಳೇ ಉದ್ದೇಶಕ್ಕೆ ದಾನ ಮಾಡುವ ಮೂಲಕ ಮಾದರಿಯೂ ಆಗಿದ್ದಾರೆ.

ಕಿಮೊಥೆರಪಿ ಚಿಕಿತ್ಸೆ ಪಡೆಯುವ ಕ್ಯಾನ್ಸರ್ ಪೀಡಿತರು ಕೂದಲು ಉದುರುವ ಸಮಸ್ಯೆ ಅನುಭವಿಸುತ್ತಾರೆ. ಇದೇ ಕಾರಣಕ್ಕೆ ಮಕ್ಕಳಲ್ಲಿ ಹಿಂಜರಿಕೆಯ ಮನಃಸ್ಥಿತಿಯೂ ಬೆಳೆಯುತ್ತದೆ. ಇಂಥವರಿಗೆ ವಿಗ್ ತಯಾರಿಸಿ ನೀಡುವ ಕಾರ್ಯದಲ್ಲಿ ಹಲವರು ತೊಡಗಿಸಿಕೊಂಡಿದ್ದಾರೆ. ಧ್ರುವ ಸರ್ಜಾ ದಾನ ಮಾಡಿರುವ ಕೂದಲು ಸಹ ವಿಗ್ ಆಗಿ ಇಂಥ ಮಗುವೊಂದರ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಲಿದೆ.

ಇದನ್ನೂ ಓದಿ ಖ್ಯಾತನಾಮರು ತಮ್ಮ ತಲೆಗೂದಲನ್ನು ತೆಗೆಸಿಕೊಳ್ಳುವುದರ ಹಿಂದಿದೆ ಉದಾತ್ತ ಉದ್ದೇಶ, ಏನದು?

ಧ್ರುವ ಸರ್ಜಾ ‘ಪೊಗರು’ ಚಿತ್ರಕ್ಕಾಗಿ ಮೂರು ವರ್ಷಗಳಿಂದ ಬೆಳೆಸಿದ್ದ ತಲೆ ಕೂದಲು 10 ಇಂಚಿಗಿಂತಲೂ ಉದ್ದವಿತ್ತು. ಇದೀಗ ಚಿತ್ರದ ಚಿತ್ರೀಕರಣ ಮುಗಿದಿದೆ. ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ದಾನ ಮಾಡುವುದು ಒಳಿತು ಎಂಬ ಆಪ್ತರ ಸಲಹೆಗೆ ಕಿವಿಗೊಟ್ಟು ಆ್ಯಕ್ಷನ್ ಪ್ರಿನ್ಸ್ ಇಂಥ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಜೊತೆಗೆ, ತಮ್ಮ ಹೇರ್​ ಕಟ್ಟಿಂಗ್​ ವಿಡಿಯೋವನ್ನ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada