ಡಾಲಿ ಧನಂಜಯ ಹೊಸ ಸಿನಿಮಾ ಹೆಸರು ‘ಕೋಟಿ’; ಗಮನ ಸೆಳೆದ ಪೋಸ್ಟರ್

ಯುಗಾದಿ ಹಬ್ಬದ ದಿನ ಹೊಸ ಸಿನಿಮಾ ಘೋಷಣೆ, ಟೈಟಲ್ ರಿವೀಲ್ ಮಾಡೋದು ಕಾಮನ್. ಅದೇ ರೀತಿ, ‘ಕೋಟಿ’ ಸಿನಿಮಾ ಟೈಟಲ್ ಪೋಸ್ಟರ್ ಬಿಡುಗಡೆ ಆಗಿದೆ. ಸಿನಿಮಾ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ತೋರಿಸಲಾಗಿದೆ. ಮುಖವನ್ನು 500 ರೂಪಾಯಿ ನೋಟಿನಿಂದ ಮುಚ್ಚಲಾಗಿದೆ

ಡಾಲಿ ಧನಂಜಯ ಹೊಸ ಸಿನಿಮಾ ಹೆಸರು ‘ಕೋಟಿ’; ಗಮನ ಸೆಳೆದ ಪೋಸ್ಟರ್
ಧನಂಜಯ್

Updated on: Apr 09, 2024 | 11:24 AM

ನಟ ಧನಂಜಯ್ (Dhananjay) ಅವರು ಒಂದೇ ಮಾದರಿಯ ಪಾತ್ರಕ್ಕೆ ಕಟ್ಟು ಬಿದ್ದವರಲ್ಲ. ಹೊಸ ಹೊಸ ಪ್ರಯೋಗಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಈಗ ಯುಗಾದಿ ಸಂದರ್ಭದಲ್ಲಿ ಅವರ ಹೊಸ ಸಿನಿಮಾ ಟೈಟಲ್ ಘೋಷಣೆ ಆಗಿದೆ. ಪರಮ್ ನಿರ್ದೇಶನದ ಮೊದಲ ಚಿತ್ರಕ್ಕೆ ಡಾಲಿ ಹೀರೋ. ಪರಮ್ ಅವರು ಈ ಮೊದಲು ಕಲರ್ಸ್ ಕನ್ನಡದ ಹೆಡ್ ಆಗಿದ್ದರು. ಈ ಸಿನಿಮಾಗೆ ‘ಕೋಟಿ’ ಅನ್ನೋ ಟೈಟಲ್ ಇಡಲಾಗಿದೆ. ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿರುವ ಅವರು ದೊಡ್ಡ ಪರದೆಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ.

ಯುಗಾದಿ ಹಬ್ಬಕ್ಕೆ ಗಮನ ಸೆಳೆದ ಪೋಸ್ಟರ್

ಯುಗಾದಿ ಹಬ್ಬದ ದಿನ ಹೊಸ ಸಿನಿಮಾ ಘೋಷಣೆ, ಟೈಟಲ್ ರಿವೀಲ್ ಮಾಡೋದು ಕಾಮನ್. ಅದೇ ರೀತಿ, ‘ಕೋಟಿ’ ಸಿನಿಮಾ ಟೈಟಲ್ ಪೋಸ್ಟರ್ ಬಿಡುಗಡೆ ಆಗಿದೆ. ಸಿನಿಮಾ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ತೋರಿಸಲಾಗಿದೆ. ಮುಖವನ್ನು 500 ರೂಪಾಯಿ ನೋಟಿನಿಂದ ಮುಚ್ಚಲಾಗಿದೆ. ಸದ್ಯ ಈ ಪೋಸ್ಟರ್‌ ಗಮನ ಸೆಳೆಯುತ್ತಿದೆ.‌

‘ಕೋಟಿ’ ಟೈಟಲ್ ಹೇಳುವಂತೆ ಇದೊಂದು ಹಣದ ಕಥೆ ಎನ್ನಲಾಗಿದೆ. ದುಡ್ಡಿನ ಹಿಂದೆ ಬೀಳುವ ಸಾಮಾನ್ಯ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಹೇಳಲಿದೆ ಎನ್ನಲಾಗುತ್ತಿದೆ. ಸದ್ಯ ಟೈಟಲ್ ಪೋಸ್ಟರ್ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನವನ್ನು ಧನಂಜಯ್ ಮಾಡಿದ್ದಾರೆ. ಈ ಸಿನಿಮಾದ ರಿಲೀಸ್ ದಿನಾಂಕ ಇನ್ನಷ್ಟೇ ತಿಳಿಯಬೇಕಿದೆ.

‘ಕೋಟಿ’ ಚಿತ್ರಕ್ಕೆ ಕತೆ, ಚಿತ್ರಕತೆ ಮತ್ತು ಸಂಭಾಷಣೆ ಬರೆದು ಸ್ವತಃ ಪರಮ್‌ ಅವರೇ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರೊಂದಿಗೆ ಸಿನಮಾ ಮಾಡಬೇಕು ಎಂಬ ಅವರ ಬಹುದಿನಗಳ ಕನಸು ಈಡೇರಿದೆ. ಕಳೆದ ವರ್ಷ ಅವರು ಕಲರ್ಸ್ ಕನ್ನಡದಿಂದ ಹೊರ ಬಂದಾಗ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ‘ಡಾಲಿ ಪಿಕ್ಚರ್ಸ್’ ಮೂಲಕ ಹೊಸ ಸುದ್ದಿ ನೀಡಿದ ಡಾಲಿ ಧನಂಜಯ್​

ಈ ಚಿತ್ರವನ್ನು ‘ಜಿಯೋ ಸ್ಟುಡಿಯೋಸ್‌’ ಪ್ರೆಸೆಂಟ್ ಮಾಡುತ್ತಿದೆ. ಜ್ಯೋತಿ ದೇಶಪಾಂಡೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಾಸುಕಿ ವೈಭವ್‌ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ನೊಬಿನ್‌ ಪೌಲ್‌ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾಗೆ ಅರುಣ್‌ ಬ್ರಹ್ಮನ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ಶನಿವಾರ ಚಿತ್ರದ ಟೀಸರ್ ಅನಾವರಣಗೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ