ದಾವಣಗೆರೆ ‘ದವನ ಫೆಸ್ಟ್’ ವೇದಿಕೆಯಲ್ಲಿ ‘ಕೋಟಿ’ ಬಗ್ಗೆ ಮಾತಾಡಿದ ಡಾಲಿ ಧನಂಜಯ

ಖ್ಯಾತ ನಟ ಡಾಲಿ ಧನಂಜಯ್ ನಟಿಸಿದ ಬಹುನಿರೀಕ್ಷಿತ ‘ಕೋಟಿ’ ಸಿನಿಮಾ ಜೂನ್ 14ರಂದು ಬಿಡುಗಡೆ ಆಗಲು ಸಿದ್ಧವಾಗಿದೆ.‌ ಈಗಾಗಲೇ ಈ ಸಿನಿಮಾದ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ. ಬುಧವಾರ (ಜೂನ್​ 5) ‘ಕೋಟಿ’ ಟ್ರೇಲರ್ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರದ ಸಲುವಾಗಿ ಡಾಲಿ ಧನಂಜಯ ಅವರು ಇತ್ತೀಚೆಗೆ ದಾವಣಗೆರೆಗೆ ತೆರಳಿದ್ದರು.

ದಾವಣಗೆರೆ ‘ದವನ ಫೆಸ್ಟ್’ ವೇದಿಕೆಯಲ್ಲಿ ‘ಕೋಟಿ’ ಬಗ್ಗೆ ಮಾತಾಡಿದ ಡಾಲಿ ಧನಂಜಯ
ಡಾಲಿ ಧನಂಜಯ

Updated on: Jun 02, 2024 | 6:04 PM

ದಾವಣಗೆರೆಯ (Davanagere) ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ‘ದವನ ಫೆಸ್ಟ್’ ಅತಿದೊಡ್ಡ ಕಾಲೇಜ್ ಫೆಸ್ಟಿವಲ್‌ಗಳಲ್ಲೊಂದು. ಇಲ್ಲಿಗೆ ಡಾಲಿ ಧನಂಜಯ (Daali Dhananjay) ಅವರು ಮುಖ್ಯ ಅತಿಥಿಯಾಗಿ ಬಂದಿದ್ದು ವಿದ್ಯಾರ್ಥಿಗಳಿಗೆ, ಅಭಿಮಾನಿಗಳಿಗೆ ಖುಷಿ ನೀಡಿತು. ಸುಮಾರು 5 ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಸೇರಿದ್ದ ಈ ಸಮಾರಂಭದಲ್ಲಿ ಡಾಲಿ ಧನಂಜಯ್​ ಅವರ ಜೊತೆ ‘ಕೋಟಿ’ (Kotee Movie) ಸಿನಿಮಾದ ನಾಯಕಿ ಮೋಕ್ಷಾ ಕುಶಾಲ್ ಹಾಗೂ ಸಹ ಕಲಾವಿದರಾದ ಪೃಥ್ವಿ ಶಾಮನೂರು, ಅಭಿಷೇಕ್ ಶ್ರೀಕಾಂತ್, ತನುಜಾ ವೆಂಕಟೇಶ್ ಕೂಡ ಭಾಗವಹಿಸಿದ್ದರು.

‘ದವನ’ ವೇದಿಕೆ ಮೇಲೆ ಡಾಲಿ ಧನಂಜಯ ಬರುತ್ತಿದ್ದಂತೆಯೇ ಅಭಿಮಾನಿಗಳ ಕೇಕೆ, ಕೂಗಾಟ ಮುಗಿಲು ಮುಟ್ಟಿತ್ತು. ಈ ವೇದಿಕೆಯಲ್ಲಿ ‘ಕೋಟಿ’ ಬಗ್ಗೆ ಡಾಲಿ ಮಾತನಾಡಿದರು. ‘ಕೋಟಿ ಒಬ್ಬ ಸಾಮಾನ್ಯ ಡ್ರೈವರ್‌. ಯಾರಿಗೂ ಮೋಸ ಮಾಡದೇ, ನೋವು ಕೊಡದೇ 1 ಕೋಟಿ ರೂಪಾಯಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ಆತನದ್ದು. ಇಲ್ಲಿ ಯಾರಿಗೆಲ್ಲ ಕೋಟಿ ದುಡಿಯುವ ಆಸೆ ಇದೆ’ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಧನಂಜಯ ಕೇಳಿದರು. ಎಲ್ಲರ ಉತ್ತರ ಕೇಳಿದ ಬಳಿಕ, ‘ಕೋಟಿ ನಿಮ್ಮೆಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ’ ಎಂದು ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ‘ಕೋಟಿ’ ಟೀಸರ್ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಧನಂಜಯ ಅವರು ಕಾರ್ಯಕ್ರಮದಿಂದ ವಾಪಸ್​ ಹೋಗುವ ತನಕ ಇಡೀ ಕಾಲೇಜಿನ‌ ಮೂಲೆಮೂಲೆಯಲ್ಲಿ ‘ಡಾಲಿ ಡಾಲಿ..’ ಎಂಬ ಅಭಿಮಾನಿಗಳ‌ ಪ್ರೀತಿಯ ಜೈಕಾರ ಮೊಳಗುತ್ತಿತ್ತು. ಈ ಸಿನಿಮಾವನ್ನು ‘ಜಿಯೋ ಸ್ಟುಡಿಯೋಸ್’ ನಿರ್ಮಾಣ ಮಾಡಿದೆ. ಪರಮ್‌ ಅವರು ನಿರ್ದೇಶನ ಮಾಡಿದ್ದಾರೆ. ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ‘ಕೋಟಿ’ ತೆರೆಕಾಣಲಿದೆ.

ಇದನ್ನೂ ಓದಿ: ಡಾಲಿ ಧನಂಜಯ ನಟನೆಯ ‘ಕೋಟಿ’ ಸಿನಿಮಾ ಬಿಡುಗಡೆ ಮಾಡಲಿರುವ ‘ಕೆಆರ್​ಜಿ’

‘ಕೋಟಿ’ ಸಿನಿಮಾದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ನಟಿಸಿದ್ದಾರೆ. ಖಳನಾಯಕನಾಗಿ ರಮೇಶ್ ಇಂದಿರಾ ಅಭಿನಯಿಸಿದ್ದಾರೆ. ರಂಗಾಯಣ ರಘು, ಸರ್ದಾರ್‌ ಸತ್ಯ, ತಾರಾ, ಪೃಥ್ವಿ ಶಾಮನೂರು, ಅಭಿಷೇಕ್ ಶ್ರೀಕಾಂತ್, ತನುಜಾ ವೆಂಕಟೇಶ್, ವಿಜಯ್ ಶೋಭರಾಜ್ ಪವೂರ್ ಮುಂತಾದ ಕಲಾವಿದರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಈ ಸಿನಿಮಾದ 5 ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದಾರೆ. ಯೋಗರಾಜ್‌ ಭಟ್‌, ವಾಸುಕಿ ವೈಭವ್‌ ಸಾಹಿತ್ಯ ಬರೆದಿದ್ದಾರೆ. ‘777 ಚಾರ್ಲಿ’ ಖ್ಯಾತಿಯ ನೊಬಿನ್‌ ಪೌಲ್‌ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರತೀಕ್‌ ಶೆಟ್ಟಿ ಅವರ ಸಂಕಲನ, ಅರುಣ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us