ಒಬ್ಬಂಟಿಯಾದೆ ನಾ: ‘ಲವ್ ಮಾಕ್ಟೇಲ್ 3’ ಸಿನಿಮಾದ ಹೊಸ ಹಾಡು ರಿಲೀಸ್

‘ಲವ್ ಮಾಕ್ಟೇಲ್ 3’ ಸಿನಿಮಾದಿಂದ ‘ಒಬ್ಬಂಟಿಯಾದೆ ನಾ’ ಲಿರಿಕಲ್ ವೀಡಿಯೋ ಬಿಡುಗಡೆ ಆಗಿದೆ. ಸಿನಿಮಾಗೆ ಸಂಗೀತ ಸಂಯೋಜಿಸಿರುವ ನಕುಲ್ ಅಭ್ಯಂಕರ್ ಅವರೇ ಈ ಗೀತೆಯನ್ನು ಹಾಡಿದ್ದಾರೆ. ರಾಘವೇಂದ್ರ ಕಾಮತ್ ಅವರು ಸಾಹಿತ್ಯ ಬರೆದಿದ್ದಾರೆ. ಏಪ್ರಿಲ್ 10ಕ್ಕೆ ‘ಲವ್ ಮಾಕ್ಟೇಲ್ 3’ ರಿಲೀಸ್ ಆಗಲಿದೆ.

ಒಬ್ಬಂಟಿಯಾದೆ ನಾ: ‘ಲವ್ ಮಾಕ್ಟೇಲ್ 3’ ಸಿನಿಮಾದ ಹೊಸ ಹಾಡು ರಿಲೀಸ್
Darling Krishna
Image Credit source: Tv9 Kannada

Updated on: Feb 18, 2026 | 5:27 PM

ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರಿಗೆ ದೊಡ್ಡ ಸಕ್ಸಸ್ ಕೊಟ್ಟ ಸಿನಿಮಾ ‘ಲವ್ ಮಾಕ್ಟೇಲ್’. ಆ ಸಿನಿಮಾದ ಸೀಕ್ವೆಲ್ (ಲವ್ ಮಾಕ್ಟೇಲ್ 2) ಕೂಡ ಜನಮೆಚ್ಚುಗೆ ಪಡೆಯಿತು. ಈಗ ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾ ಸಹ ಬಿಡುಗಡೆಗೆ ಸಿದ್ಧವಾಗಿದೆ. ಹಾಡುಗಳ ಮೂಲಕ ಈ ಚಿತ್ರ ನಿರೀಕ್ಷೆ ಮೂಡಿಸಿದೆ. ಪ್ರೇಮಿಗಳಿಗೆ ಇಷ್ಟ ಆಗುವ ರೀತಿಯಲ್ಲಿ ಮೂಡಿಬಂದಿದ್ದ ಎರಡು ಸಿನಿಮಾಗಳ ರೀತಿಯೇ ಮೂರನೇ ಪಾರ್ಟ್​ ಕೂಡ ಸಿದ್ಧವಾಗಿದೆ ಎಂಬುದಕ್ಕೆ ಹಾಡುಗಳು ಸಾಕ್ಷಿಯಾಗಿವೆ. ‘ಲವ್ ಮಾಕ್ಟೇಲ್ 3’ ಸಿನಿಮಾದ ‘ಒಬ್ಬಂಟಿಯಾದೆ ನಾ’ (Obbantiyaade Naa) ಹಾಡು ಇತ್ತೀಚೆಗೆ ರಿಲೀಸ್ ಆಯಿತು.

ಈ ಬಾರಿ ಕೂಡ ಡಾರ್ಲಿಂಗ್ ಕೃಷ್ಣ ಅವರೇ ‘ಲವ್ ಮಾಕ್ಟೇಲ್ 3’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರೇ ನಾಯಕನಾಗಿ ನಟಿಸಿದ್ದಾರೆ ಕೂಡ. ಇತ್ತೀಚೆಗಷ್ಟೇ ತಂದೆ-ಮಗಳ ಬಾಂಧವ್ಯ ತಿಳಿಸುವ ಹಾಡೊಂದು ಬಿಡುಗಡೆ ಆಗಿತ್ತು. ಅದರ ಬೆನ್ನಲ್ಲೇ ‘ಒಬ್ಬಂಟಿಯಾದೆ ನಾ’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಜನರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.

ಪ್ರೇಕ್ಷಕರು ‘ಲವ್ ಮಾಕ್ಟೇಲ್ 3’ ಸಿನಿಮಾದ ಟ್ರೇಲರ್ ನೋಡಲು ಕಾದಿದ್ದಾರೆ. ಅದಕ್ಕೂ ಮುನ್ನ, ಪ್ರೇಮಿಗಳ ದಿನದ ಸಲುವಾಗಿ ‘ಒಬ್ಬಂಟಿಯಾದೆ ನಾ’ ಹಾಡನ್ನು ರಿಲೀಸ್ ಮಾಡಿತು ಚಿತ್ರತಂಡ. ಈ ಸಿನಿಮಾಗೆ ನಕುಲ್ ಅಭ್ಯಂಕರ್ ಅವರು ಸಂಗೀತ ಸಂಯೋಜಿಸಿದ್ದಾರೆ. ‘ಒಬ್ಬಂಟಿಯಾದೆ ನಾ’ ಹಾಡಿಗೆ ಅವರೇ ಧ್ವನಿ ನೀಡಿದ್ದಾರೆ. ‘ಮಾತು ಮೌನವಾಗಿದೆ, ಶೋಕ ಭಾವ ಮೂಡಿದೆ..’ ಎಂದು ಆರಂಭ ಆಗುವ ಈ ಗೀತೆಯನ್ನು ರಾಘವೇಂದ್ರ ಕಾಮತ್ ಅವರು ಬರೆದಿದ್ದಾರೆ.

Obbantiyaade Naa Lyrical Video| Love Mocktail-3 | Darling Krishna | Nakul Abhaynkar |

‘ಲವ್ ಮಾಕ್ಟೇಲ್ 3’ ಸಿನಿಮಾ ಏಪ್ರಿಲ್ 10ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ‘ಕ್ರಿಸ್‌ಮಿ’ ಬ್ಯಾನರ್ ಮೂಲಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಅಮೃತಾ ಅಯ್ಯಂಗಾರ್, ಮಿಲನಾ ನಾಗರಾಜ್, ಸಂವೃತಾ, ರೇಚಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ವರ್ಷಗಳ ಕಾಲ ನೆನಪುಳಿವ ಸಿನಿಮಾ: ‘ಫಾದರ್’ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತು

ಡಾರ್ಲಿಂಗ್ ಕೃಷ್ಣ ಅವರು ‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು. ಆ ಸಿನಿಮಾಗಳ ಗೆಲುವಿನಲ್ಲಿ ಹಾಡುಗಳ ಕೊಡುಗೆ ದೊಡ್ಡದಿತ್ತು. ಈಗ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಕೂಡ ಹಾಡುಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us