‘ನಿಮಗೆ ಡಿ ಬಾಸ್, ನನಗೆ ಮಗ; ಇನ್ನೆರಡು ತಿಂಗಳಲ್ಲಿ ಅವನು ಆಚೆ ಬರ್ತಾನೆ’; ರವಿಚಂದ್ರನ್

ನಟ ದರ್ಶನ್ ಬಂಧನದ ನಂತರ ಅವರ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜಾಮೀನು ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾಗಿದೆ. ಆದರೆ, ನಟ ರವಿಚಂದ್ರನ್, ದರ್ಶನ್ ಎರಡು ತಿಂಗಳಲ್ಲಿ ಹೊರಬರುತ್ತಾರೆ ಎಂದು ಸುಳಿವು ನೀಡಿ ಅಭಿಮಾನಿಗಳಿಗೆ ಭರವಸೆ ಮೂಡಿಸಿದ್ದಾರೆ. ಇದು ದರ್ಶನ್ ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ.

‘ನಿಮಗೆ ಡಿ ಬಾಸ್, ನನಗೆ ಮಗ; ಇನ್ನೆರಡು ತಿಂಗಳಲ್ಲಿ ಅವನು ಆಚೆ ಬರ್ತಾನೆ’; ರವಿಚಂದ್ರನ್
ದರ್ಶನ್-ರವಿಚಂದ್ರನ್

Updated on: Feb 17, 2026 | 8:42 AM

ನಟ ದರ್ಶನ್ (Darshan) ಅವರು ಸದ್ಯ ಜೈಲಿನಲ್ಲಿದ್ದಾರೆ. ಅವರು ಯಾವಾಗ ಹೊರ ಬರುತ್ತಾರೆ ಎಂದು ಫ್ಯಾನ್ಸ್ ಕಾಯುತ್ತಾ ಕೂತಿದ್ದಾರೆ. ಜಾಮೀನು ಅರ್ಜಿ ಸುಪ್ರೀಂಕೋರ್ಟ್​​​ನಲ್ಲೇ ರಿಜೆಕ್ಟ್ ಆಗಿರುವುದರಿಂದ ಅವರು ಯಾವುದೇ ಜಾಮೀನು ಅರ್ಜಿ ಸಲ್ಲಿಕೆ ಮಾಡಿಲ್ಲ ಎನ್ನಲಾಗುತ್ತಿದೆ. ಹೀಗಿರುವಾಗಲೇ ರವಿಚಂದ್ರನ್ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ ಹೊರ ಬರೋದು ಯಾವಾಗ ಎಂಬ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ದರ್ಶನ್ ಹಾಗೂ ರವಿಚಂದ್ರನ್ ಮಧ್ಯೆ ಒಳ್ಳೆಯ ಬಾಧಂವ್ಯ ಇದೆ. 2023ರ ‘ಕ್ರಾಂತಿ’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ದರ್ಶನ್ ಅವರಿಗೂ ರವಿಚಂದ್ರನ್ ಎಂದರೆ ಎಲ್ಲಿಲ್ಲದ ಗೌರವ. ಈಗ ರವಿಚಂದ್ರನ್ ಅವರು ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ದರ್ಶನ್ ಹೊರ ಬರೋದು ಯಾವಾಗ ಎಂಬ ಬಗ್ಗೆ ಹಿಂಟ್ ಕೊಟ್ಟಿದ್ದಾರೆ.

ಕಾರ್ಯಕ್ರಮ ಒಂದರಲ್ಲಿ ರವಿಚಂದ್ರನ್ ಮಾತನಾಡಿದರು. ಈ ವೇಳೆ ಸಿನಿಮಾ ಡೈಲಾಗ್ ಹೇಳುವಂತೆ ಅವರಿ ಬಳಿ ಕೋರಲಾಗಿದೆ. ಆದರೆ, ಅಲ್ಲಿದ್ದ ಅಭಿಮಾನಿಗಳು ಡಿಬಾಸ್ ಎಂದು ಕೂಗಿದ್ದಾರೆ. ಆಗ ರವಿಚಂದ್ರನ್ ಅವರು , ‘ಡಿಬಾಸ್ ಎರಡು ತಿಂಗಳಲ್ಲಿ ಆಚೆ ಬರುತ್ತಾರಂತೆ. ಈ ಬಾಯಲ್ಲಿ ಹೇಳಿದೀನಿ ಬರ್ತಾರೆ. ನಿಮಗೆಲ್ಲ ಅವನು ಡಿ ಬಾಸ್, ನನಗೆ ಮಗ, ನೆನಪಿಟ್ಟುಕೊಳ್ಳಿ. ಇದೆಲ್ಲ ಕೆಟ್ಟ ಘಳಿಗೆ ಅಷ್ಟೇ. ಕೆಟ್ಟ ಘಳಿಗೆ ಮನುಷ್ಯನ್ನ ಕುಗ್ಗಿಸುತ್ತದೆ. ಅದೇ ಸಮಯ ಒಂದಲ್ಲ ಒಂದು ದಿನ ಮೇಲಕ್ಕೆ ಎತ್ತಲೇಬೇಕು. ಅವರನ್ನು ಎದೆಯಲ್ಲೇ ಇಟ್ಟು ಪೂಜಿಸಿ’ ಎಂದರು. ಇದೇ ವೇಳೆ ‘ಎಲ್ಲದಕ್ಕೂ ಕಾಯಬೇಕು’ ಎನ್ನುವ ಮಾತನ್ನು ಹೇಳಿದರು.

ದರ್ಶನ್ ಅವರ ಜಾಮೀನು ಸುಪ್ರೀಂಕೋರ್ಟ್​​ನಲ್ಲೇ ರಿಜೆಕ್ಟ್ ಆಗಿದೆ. ಹೀಗಾಗಿ, ಅವರಿಗೆ ಸದ್ಯಕ್ಕೆ ಜಾಮೀನು ಸಿಗೋದು ಅನುಮಾನವೇ ಎಂದೆಲ್ಲ ಮಾತನಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗ ರವಿಚಂದ್ರನ್ ಅವರು ಪಾಸಿಟಿವ್ ಆಗಿ ಮಾತನಾಡಿದ್ದು, ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

ಇದನ್ನೂ ಓದಿ: ಪವಿತ್ರಾಗೆ ದೊಡ್ಡ ನಿರಾಸೆ; ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ

ಪವಿತ್ರಾ ಗೌಡ ಅವರು ಮಗಳಿಗೆ ಪರೀಕ್ಷೆ ಸಮಯ ಎಂದು 21 ದಿನಗಳ ಮಧ್ಯಂತರ ಜಾಮೀನು ಕೋರಿದ್ದರು. ಆದರೆ, ಇದನ್ನು ನೀಡಲು ಕೋರ್ಟ್ ನಿರಾಕರಿಸಿದೆ. ದರ್ಶನ್ ಅರ್ಜಿ ಸಲ್ಲಿಕೆ ಮಾಡಿದರೂ ಇದೇ ತೊಂದರೆ ಎದುರಾಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us