ದರ್ಶನ್​ಗೆ ಕೂಲಿಂಗ್ ಗ್ಲಾಸ್‌ ಧರಿಸಲು ಅನುಮತಿ ನೀಡಿದ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಡಿಐಜಿ ಪತ್ರ

ರೇಣುಕಾಸ್ವಾಮಿ ಕೊಲೆ ಕೇಸ್​ನ ಪ್ರಮುಖ ಆರೋಪಿ ದರ್ಶನ್​ ಬಳ್ಳಾರಿ ಜೈಲಿಗೆ ಸ್ಟೈಲಿಶ್​ ಲುಕ್​ನಲ್ಲಿ ಎಂಟ್ರಿ ನೀಡಿದ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ನಟನಿಗೆ ಕೂಲಿಂಗ್​ ಕ್ಲಾಸ್​ ಧರಿಸಲು ಅನುಮತಿ ನೀಡಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಐಜಿ ಪತ್ರ ಬರೆದಿದ್ದಾರೆ. ಬಳ್ಳಾರಿ ಜೈಲಿಗೆ ದರ್ಶನ್ ಬಂದ ಬಳಿಕ ಇನ್ನುಳಿದ ಖೈದಿಗಳಿಗೂ ಸಂಕಷ್ಟ ಶುರುವಾಗಿದೆ.

ದರ್ಶನ್​ಗೆ ಕೂಲಿಂಗ್ ಗ್ಲಾಸ್‌ ಧರಿಸಲು ಅನುಮತಿ ನೀಡಿದ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಡಿಐಜಿ ಪತ್ರ
ದರ್ಶನ್​
Edited By:

Updated on: Aug 29, 2024 | 3:36 PM

ಪರಪ್ಪನ ಅಗ್ರಹಾರದಲ್ಲಿ ತಮ್ಮ ಪ್ರಭಾವ ಬಳಸಿ ವಿಶೇಷ ಸವಲತ್ತುಗಳನ್ನು ಪಡೆದ ಬಳಿಕ ನಟ ದರ್ಶನ್​ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿನಲ್ಲಿಯೂ ಒಂದು ಎಡವಟ್ಟು ಆಗಿದೆ. ದರ್ಶನ್​ ಎಂಟ್ರಿ ನೀಡುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿರುವುದು ಕಂಡು ಬಂದಿದೆ. ನಟನಿಗೆ ಕೂಲಿಂಗ್​ ಗ್ಲಾಸ್​ ಧರಿಸಲು ಭದ್ರತಾ ಸಿಬ್ಬಂದಿ ಅನುಮತಿ ನೀಡಿದ್ದಾರೆ. ಈ ಬಗ್ಗೆ ಟಿವಿ9 ವರದಿ ಮಾಡಿತ್ತು. ಅದರ ಪರಿಣಾಮವಾಗಿ, ಕರ್ತವ್ಯ ಲೋಪ ಎಸಗಿದ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರಾಗೃಹ ಇಲಾಖೆಯ ಡಿಜಿಪಿಗೆ ಡಿಐಜಿ ಟಿ.ಪಿ. ಶೇಷ ಅವರು ಪತ್ರ ಬರೆದಿದ್ದಾರೆ.

ಬಳ್ಳಾರಿ ಜೈಲಿಗೆ ದರ್ಶನ್​ ಸ್ಥಳಾಂತರದ ಇಂಚಿಂಚೂ ಪ್ರಕ್ರಿಯೆನ್ನು ಜನರು ಗಮನಿಸುತ್ತಿದ್ದಾರೆ. ಬೆಂಗಳೂರಿನಿಂದ ಹೊರಟು ಬಳ್ಳಾರಿ ಜೈಲು ತಲುಪಿದ ದರ್ಶನ್​ ಅವರು ಕಾರಾಗೃಹದ ಒಳಗೆ ಎಂಟ್ರಿ ನೀಡುವಾಗ ಸ್ಟೈಲಿಶ್​​ ಲುಕ್​ನಲ್ಲಿ ಕಾಣಿಸಿಕೊಂಡರು. ಅವರಿಗೆ ಕೂಲಿಂಗ್​ ಗ್ಲಾಸ್​ ಧರಿಸಲು ಏಕೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆ ಉದ್ಭವ ಆಗಿದೆ.

ಜೈಲಿನ ನಿಯಮಾನುಸಾರ ಮುಖ್ಯ ದ್ವಾರದಲ್ಲಿ ಸ್ವಂತ ವಸ್ತುಗಳನ್ನು ಒಪ್ಪಿಸಬೇಕು. ಆದರೆ ದರ್ಶನ್​ಗೆ ಕೂಲಿಂಗ್ ಗ್ಲಾಸ್‌ ಧರಿಸಲು ಅನುಮತಿ ನೀಡಿದ್ದರಿಂದ ಕರ್ತವ್ಯಲೋಪ ಆಗಿದೆ. ಈ ಹಿನ್ನೆಲೆಯಲ್ಲಿ, ದರ್ಶನ್ ಅವರನ್ನು ಕರೆತಂದ ಭದ್ರತಾ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಕಾರಾಗೃಹ ಡಿಐಜಿ ಟಿ.ಪಿ. ಶೇಷ ಪತ್ರ ಬರೆದಿದ್ದಾರೆ. ಶಿಸ್ತು ಕ್ರಮ ಜರುಗಿಸಲು ಮಾನ್ಯ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.

ದರ್ಶನ್​ ಜತೆ ಕೈಕುಲುಕಲು ನಿರಾಕರಿಸಿದ ಪೊಲೀಸ್:

ಬಳ್ಳಾರಿ ಜೈಲ್​ ಒಳಗೆ ಹೋಗುವಾಗ ಪೊಲೀಸ್ ಅಧಿಕಾರಿಗಳಿಗೆ ಹಸ್ತಲಾಘವ ಮಾಡಲು ದರ್ಶನ್ ಮುಂದಾದರು. ಬೆಂಗಳೂರು ಜೈಲಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಬಂದಿದ್ದ ಎಸಿಪಿಗೆ ಶೇಕ್​ ಹ್ಯಾಂಡ್​ ನೀಡಲು ದರ್ಶನ್​ ಪ್ರಯತ್ನಿಸಿದರು. ಆದರೆ ದರ್ಶನ್​ ಜೊತೆ ಕೈ ಕುಲುಕಲು ಪೊಲೀಸ್ ಅಧಿಕಾರಿ ನಿರಾಕರಿಸಿದರು.

ಇದನ್ನೂ ಓದಿ: Darshan Thoogudeepa: ಬಳ್ಳಾರಿ ಜೈಲು ಸೇರಿದ ದರ್ಶನ್​ಗೆ ಹೊಸ ಕೈದಿ ಸಂಖ್ಯೆ

ಬೇರೆ ಖೈದಿಗಳಿಗೆ ಸಂಕಷ್ಟ:

ದರ್ಶನ ಆಗಮನದಿಂದ ಬಳ್ಳಾರಿ ಜೈಲಿನಲ್ಲಿರುವ ಉಳಿದ ಕೈದಿಗಳಿಗೆ ಸಂಕಷ್ಟ ಹೆಚ್ಚಾಗಿದೆ. ಜೈಲಿನಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮಕ್ಕೆ ಸಿಬ್ಬಂದಿ ಮುಂದಾಗಿದ್ದಾರೆ. ಖೈದಿಗಳಿಗೆ ಊಟ ಕೊಡಲು ಕುಟುಂಬದವರಿಗೆ ಜೈಲು ಸಿಬ್ಬಂದಿ ನಿರಾಕರಿಸಿದ್ದಾರೆ. ಈ ಮೊದಲು ಊಟ ಕೊಡಲು ಅವಕಾಶ ನೀಡುತ್ತಿದ್ದ ಬಳ್ಳಾರಿ ಜೈಲು ಸಿಬ್ಬಂದಿ ಈಗ ಖೈದಿಗಳಿಗಾಗಿ ಊಟ ತಂದಿದ್ದ ಹಲವರನ್ನು ವಾಪಸ್ ಕಳಿಸಿದ್ದಾರೆ. ದರ್ಶನ್‌ಗಾಗಿ ತಿರುಪತಿ ಪ್ರಸಾದ ತಂದಿದ್ದ ಅಭಿಮಾನಿಯನ್ನೂ ವಾಪಸ್​ ಕಳಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us