ದರ್ಶನ್ ಇಲ್ಲದೆ ಬಿಡುಗಡೆ ಆಗುತ್ತ ಡೆವಿಲ್? ಪ್ರಚಾರಕ್ಕೆ ಸ್ಟಾರ್ ನಟಿ?

Darshan Thoogudeepa: ದರ್ಶನ್ ತೂಗುದೀಪ ನಟನೆಯ ‘ಡೆವಿಲ್’ ಸಿನಿಮಾದ ಬಿಡುಗಡೆ ಮುಂದಿರುವಂತೆ ನಟ ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ಇದೀಗ ದರ್ಶನ್ ಇಲ್ಲದೆ ‘ಡೆವಿಲ್’ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ ಎನ್ನಲಾಗುತ್ತಿದೆ. ದರ್ಶನ್ ಇಲ್ಲದ ಕಾರಣ ಅವರ ಪರವಾಗಿ ಸ್ಟಾರ್ ನಟಿ ಹಾಗೂ ದರ್ಶನ್ ಆಪ್ತರು ಸಿನಿಮಾದ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ಇಲ್ಲದೆ ಬಿಡುಗಡೆ ಆಗುತ್ತ ಡೆವಿಲ್? ಪ್ರಚಾರಕ್ಕೆ ಸ್ಟಾರ್ ನಟಿ?
Devil Movie

Updated on: Aug 16, 2025 | 4:37 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದ್ದು, ಕನಿಷ್ಟ ಆರು ತಿಂಗಳಾದರೂ ದರ್ಶನ್ ಹಾಗೂ ಇತರೆ ಆರೋಪಿಗಳು ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ. ಆರು ತಿಂಗಳ ಬಳಿಕವೂ ಸಹ ದರ್ಶನ್ ಬಿಡುಗಡೆ ಖಾತ್ರಿ ಇಲ್ಲ. ಒಂದೊಮ್ಮೆ ಪ್ರಕರಣದ ವಿಚಾರಣೆ ಮುಗಿದರೂ ಸಹ ದರ್ಶನ್ ಶಿಕ್ಷೆಯ ಅವಧಿಯನ್ನು ಜೈಲಿನಲ್ಲಿ ಕಳೆಯಬೇಕಾಗಿರುತ್ತದೆ. ಹಾಗಾಗಿ ದರ್ಶನ್ ಈಗಾಗಲೇ ಮುಗಿಸಿರುವ ‘ಡೆವಿಲ್’ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ನಟನೆಯ ‘ಸಾರಥಿ’ ಸಿನಿಮಾ ಬಿಡುಗಡೆ ಆಗುವ ಸಂದರ್ಭದಲ್ಲಿಯೂ ಸಹ ದರ್ಶನ್ ಜೈಲಿನಲ್ಲಿದ್ದರು. ದರ್ಶನ್ ಜೈಲಿನಲ್ಲಿ ಇರುವಾಗಲೇ ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಯ್ತು. ಇದೀಗ ‘ಡೆವಿಲ್’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಮತ್ತೆ ದರ್ಶನ್ ಜೈಲು ಸೇರಿದ್ದಾರೆ. ಈಗಲೂ ಸಹ ‘ಡೆವಿಲ್’ ಸಿನಿಮಾವನ್ನು ತಡ ಮಾಡದೆ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ ಎನ್ನಲಾಗುತ್ತಿದೆ.

‘ಡೆವಿಲ್’ ಸಿನಿಮಾ ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಅದಕ್ಕೆ ಸಕಲ ತಯಾರಿ ಮುಗಿದಿತ್ತು. ಸಿನಿಮಾದ ಪ್ರಚಾರವನ್ನು ಕೆಲವೇ ವಾರಗಳಲ್ಲಿ ದರ್ಶನ್ ಪ್ರಾರಂಭ ಮಾಡುವವರಿದ್ದರು. ಆದರೆ ಈಗ ಸುಪ್ರೀಂಕೋರ್ಟ್ ತೀರ್ಪಿನಿಂದ ಆಘಾತಗೊಂಡಿರುವ ದರ್ಶನ್, ಮತ್ತೆ ಜೈಲು ಸೇರಿದ್ದಾರೆ. ಇತ್ತ ಸಿನಿಮಾ ಬಿಡುಗಡೆ ಅಡಕತ್ತರಿಯಲ್ಲಿ ಸಿಲುಕಿದೆ.

ಇದನ್ನೂ ಓದಿ:ದರ್ಶನ್ ಕೈಯಲ್ಲಿದ್ದ ಸಿನಿಮಾಗಳು ಎಷ್ಟು? ‘ಡೆವಿಲ್’ ಗತಿ ಏನು?

ಮೂಲಗಳ ಪ್ರಕಾರ, ನಿಗದಿಯಂತೆ ಅಕ್ಟೋಬರ್ 31ರಂದೇ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಲಿದೆಯಂತೆ. ಸಿನಿಮಾದ ಪ್ರಚಾರವನ್ನು ದರ್ಶನ್​ ಅವರ ಆಪ್ತ ಧನ್ವೀರ್ ಗೌಡ ಮತ್ತು ನಟಿ ರಚಿತಾ ರಾಮ್ ಅವರುಗಳು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರೂ ಸಹ ದರ್ಶನ್ ಅವರಿಗೆ ಬಲು ಆಪ್ತರಾಗಿದ್ದು, ಇಬ್ಬರೂ ಸಹ ದರ್ಶನ್ ಪರವಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ‘ಡೆವಿಲ್’ ಸಿನಿಮಾದ ಪ್ರಚಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ದರ್ಶನ್​ಗೆ ಆಪ್ತರಾಗಿರುವ ಇನ್ನೂ ಕೆಲವರು ಪ್ರಚಾರ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ಮರು ಬಂಧನದ ಬಳಿಕ ನಿರ್ದೇಶಕ ಪ್ರಕಾಶ್, ಆತಂಕಕ್ಕೆ ಈಡಾಗಿದ್ದು ಫೋನು ಸ್ವಿಚ್ ಆಫ್ ಮಾಡಿಕೊಂಡಿದ್ದಾರಂತೆ. ಸಿನಿಮಾಕ್ಕೆ ಅವರೂ ಸಹ ಬಂಡವಾಳ ಹೂಡಿದ್ದು, ತೀವ್ರ ಆತಂಕದಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ