Roberrt Collection: 59.8 ಕೋಟಿ ರೂ. ಬಾಚಿಕೊಂಡ ‘ರಾಬರ್ಟ್​’! ಇಲ್ಲಿದೆ 4 ದಿನದ ಬಾಕ್ಸ್​ ಆಫೀಸ್​ ರಿಪೋರ್ಟ್​

ರಾಬರ್ಟ್​ ಸಿನಿಮಾದ ನಾಗಾಲೋಟ ಮುಂದುವರಿದಿದೆ. ಸತತ ನಾಲ್ಕನೇ ದಿನ ಎಲ್ಲೆಡೆ ಹೌಸ್​ ಫುಲ್​ ಪ್ರದರ್ಶನ ಕಂಡಿದ್ದು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್​ ಆಗಿದೆ.

Roberrt Collection: 59.8 ಕೋಟಿ ರೂ. ಬಾಚಿಕೊಂಡ ‘ರಾಬರ್ಟ್​’! ಇಲ್ಲಿದೆ 4 ದಿನದ ಬಾಕ್ಸ್​ ಆಫೀಸ್​ ರಿಪೋರ್ಟ್​
ದರ್ಶನ್​ ರಾಬರ್ಟ್​ ಸಿನಿಮಾ ಪೋಸ್ಟರ್​

Updated on: Mar 15, 2021 | 11:15 AM

ಭಾರೀ ನಿರೀಕ್ಷೆಗಳೊಂದಿಗೆ ತೆರೆಕಂಡ ‘ರಾಬರ್ಟ್​’ ಚಿತ್ರಕ್ಕೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಅದರ ಪರಿಣಾಮವಾಗಿ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ ಉತ್ತಮ ಕಮಾಯಿ ಆಗುತ್ತಿದೆ. ಸತತ ನಾಲ್ಕು ದಿನಗಳ ಕಾಲ ಬಹುತೇಕ ಚಿತ್ರಮಂದಿರಗಳಲ್ಲಿ ‘ರಾಬರ್ಟ್​’ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಈವರೆಗೂ ಒಟ್ಟು 59.8 ಕೋಟಿ ರೂ. ಕಲೆಕ್ಷನ್​ ಆಗಿದೆ.

ಕೊರೊನಾ ಲಾಕ್​ಡೌನ್​ ಕಾರಣದಿಂದ ಎಲ್ಲ ಭಾಷೆಯ ಚಿತ್ರರಂಗಗಳು ಸೊರಗಿದ್ದವು. ಯಾವುದೇ ವಹಿವಾಟು ಇಲ್ಲದೆ ಹೀನಾಯವಾಗಿ ಮಲಗಿದ್ದ ಚಿತ್ರೋದ್ಯಮಕ್ಕೆ ರಾಬರ್ಟ್​ ಸಿನಿಮಾದಿಂದಾಗಿ ಹೊಸ ಚೈತನ್ಯ ಸಿಕ್ಕಿದೆ. ಬಿಡುಗಡೆಯಾದ ಮೊದಲ ದಿನವೇ (ಮಾ.11) ಈ ಸಿನಿಮಾ 17.24 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತ್ತು. ಅಲ್ಲಿಂದ ಮುಂದಿನ ಮೂರು ದಿನವೂ ಭರ್ಜರಿ ಕಲೆಕ್ಷನ್​ ಆಗಿದೆ.

ಎರಡನೇ ದಿನ 12.78 ಕೋಟಿ, ಮೂರನೇ ದಿನ 14.10 ಕೋಟಿ ಹಾಗೂ ನಾಲ್ಕನೇ ದಿನ ಬರೋಬ್ಬರಿ 15.68 ಕೋಟಿ ರೂ. ಹರಿದುಬಂದಿದೆ. ಈ ನಾಲ್ಕು ದಿನಗಳ ಕಲೆಕ್ಷನ್​ ಸೇರಿದರೆ 59.8 ಕೋಟಿ ರೂ. ಆಗಲಿದೆ. ನಾಲ್ಕೇ ದಿನದಲ್ಲಿ ಹಾಫ್​ ಸೆಂಚುರಿ ಬಾರಿಸಿದ ಕೀರ್ತಿ ರಾಬರ್ಟ್​ಗೆ ಸಲ್ಲುತ್ತದೆ. ಈ ಗೆಲುವನ್ನು ದರ್ಶನ್​ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಎಲ್ಲ ಚಿತ್ರಮಂದಿರಗಳ ಎದುರು ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಫ್ಯಾಮಿಲಿ ಪ್ರೇಕ್ಷಕರು ಕೂಡ ಸಿನಿಮಾವನ್ನು ಮೆಚ್ಚಿಕೊಂಡಿರುವುದು ಚಿತ್ರತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ಇನ್ನು, ಆಂಧ್ರ ಮತ್ತು ತೆಲಂಗಾಣದಲ್ಲೂ ‘ರಾಬರ್ಟ್​’ ಅಬ್ಬರಿಸುತ್ತಿದ್ದಾನೆ. ನಾಲ್ಕು ದಿನಗಳಲ್ಲಿ ಚಿತ್ರದ ತೆಲುಗು ವರ್ಷನ್​ನಿಂದ 6.19 ರೂ. ಸಂಗ್ರಹ ಆಗಿದೆ. ಸದ್ಯಕ್ಕಂತೂ ಎಲ್ಲೆಲ್ಲೂ ರಾಬರ್ಟ್​ನದ್ದೇ ಹವಾ. ಸತತ 5ನೇ ದಿನ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಈಗ 59.8 ಕೋಟಿ ರೂ. ಬಾಚಿಕೊಂಡಿರುವ ಈ ಸಿನಿಮಾ 100 ಕೋಟಿ ರೂ. ಕ್ಲಬ್​ ಸೇರಿಕೊಳ್ಳುತ್ತಾ ಎಂಬ ಕೌತುಕ ಈಗ ಸಿನಿಪ್ರಿಯರ ಮನದಲ್ಲಿ ಮೂಡಿದೆ.

ಇದನ್ನೂ ಓದಿ: Roberrt Kannada Movie Review: ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!

ಸಿಕ್ಕಿಬಿದ್ದ ‘ರಾಬರ್ಟ್​’ ಪೈರಸಿ ಮಾಡುತ್ತಿದ್ದ ವ್ಯಕ್ತಿ! ‘ದುಡ್ಡು ಕೊಟ್ಟರೆ ಹೊಸ ಕಾಪಿ ಶೇರ್ ಮಾಡ್ತೀನಿ’ ಎನ್ನುತ್ತಿದ್ದ ಆರೋಪಿ!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us