ರಾಬರ್ಟ್… ಎಲ್ಲೆಲ್ಲೂ ರಾಬರ್ಟ್ ರಂಗು.. ರಿಲೀಸ್‌ಗೂ ಮೊದಲೇ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದ ರಾಬರ್ಟ್.. ಇದೀಗ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ರಾಬರ್ಟ್ ಅಬ್ಬರ ಇಂದಿನಿಂದ ಶುರುವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾ ಬಾ ನಾ ರೆಡಿ ಅಂತಾ ಥಿಯೇಟರ್‌ಗೆ ಲಗ್ಗೆ ಇಟ್ಟಾಗಿದೆ. ನಾನು.. ದಶಕಂಠ ರಾವಣ ಅಂತಾ ಅದ್ಯಾವಾಗ ದರ್ಶನ್ ಕೇಕೆ ಹಾಕಿದ್ರೋ.. ಈ ಕೇಕೆಯ ಸದ್ದಿಗೆ ಕನ್ನಡ ಚಿತ್ರರಂಗದಲ್ಲಿ ರಾಬರ್ಟ್ ರಾರಾಜಿಸ್ತಿದೆ. ದಶದಿಕ್ಕುಗಳಿಂದ ಸುಂಟರಗಾಳಿಯಂತೆ ಎಂಟ್ರಿ ಕೊಟ್ಟ ರಾಬರ್ಟ್ ವೇಗ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇದೀಗ ಥಿಯೇಟರ್‌ಗಳನ್ನ ಶೇಕ್ ಮಾಡೋಕೆ ಎಂಟ್ರಿ ಕೊಟ್ಟಿರೋ ರಾಬರ್ಟ್ ಇಂದಿನಿಂದ ದೇಶಾದ್ಯಂತ ಅಬ್ಬರಿಸಲಿದ್ದಾನೆ. ಬೆಳಗ್ಗೆಯಿಂದಲೇ ರಾಬರ್ಟ್ ಬಾಕ್ಸಾಫೀಸ್ ರೇಡ್ ಆರಂಭವಾಗಿದೆ.
ಇನ್ನು ಅಭಿಮಾನಿಗಳಿಗಾಗಿ ರಾಬರ್ಟ್ ಚಿತ್ರದ ಬೆಳಗಿನ ಶೋಗಳು ಆರಂಭವಾಗಿವೆ. ಜೊತೆಗೆ ರಾತ್ರಿ ಹೆಚ್ಚುವರಿ 2 ಗಂಟೆ ಶೋಗಳನ್ನ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 6 ಗಂಟೆ ಮತ್ತು 6.30ರಿಂದ್ಲೇ ಬೆಳಗಿನ ಶೋಗಳು ಶುರುವಾಗಿವೆ. ಬೆಂಗಳೂರಿನ 12 ಚಿತ್ರಮಂದಿರಗಳಲ್ಲಿ ಬೆಳಗಿನ 6 ಗಂಟೆಯ ಪ್ರದರ್ಶನ ನಡೆಯುತ್ತಿವೆ. ಜೊತೆಗೆ ತುಮಕೂರು, ಕೋಲಾರದ ಜೊತೆಗೆ ಕೆಲವು ಜಿಲ್ಲೆಗಳಲ್ಲಿ ಬೆಳ್ ಬೆಳಗ್ಗೆಯೇ ಶೋಗಳು ಆರಂಭವಾಗಿವೆ.
ಚಿತ್ರಮಂದಿರಗಳ ಬಳಿ ಹಬ್ಬದ ಸಂಭ್ರಮ
ಪದ್ಮನಾಭನಗರದ ಶ್ರೀನಿವಾಸ ಥಿಯೇಟರ್‌ನಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ರಾಬರ್ಟ್ ತಂಡದಿಂದ ಥಿಯೇಟರ್ ಸ್ಕ್ರೀನ್ಗೆ ವಿಶೇಷ ಪೂಜೆ ಸಲ್ಲಿಸಿದ್ದು ಪೂಜೆಯಲ್ಲಿ ನಿರ್ದೇಶಕ ತರುಣ್ ಸುಧೀರ್, ನಾಯಕಿ ಆಶಾ ಭಟ್ ಹಾಗೂ ಚಿತ್ರತಂಡ ಭಾಗಿಯಾಗಿದ್ದಾರೆ.
ಥಿಯೇಟರ್ಗಳ ಬಳಿ ಫ್ಯಾನ್ಸ್ ನೂಕುನುಗ್ಗಲು, ಲಾಠಿ ಚಾರ್ಜ್
ಇನ್ನು ಚಿತ್ರದುರ್ಗದಲ್ಲಿ ರಾಬರ್ಟ್ ಸಿನೆಮಾ ಟಿಕೆಟ್ಗೆ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಬಹತೇಕ ಕಡೆ ರಾಬರ್ಟ್ ಚಿತ್ರ ವೀಕ್ಷಿಸಲು ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ. ಚಿತ್ರದುರ್ಗದಲ್ಲಿ ಅಭಿಮಾನಿಗಳನ್ನು ಚದುರಿಸಲು ಲಾಠಿ ಚಾರ್ಜ್ ಮಾಡುವಂತೆ ಪರಿಸ್ಥಿತಿ ಉಂಟಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ವೆಂಕಟೇಶ್ವರ ಚಿತ್ರಮಂದಿರ ಬಳಿ ಅಭಿಮಾನಿಗಳ ನೂಕು ನುಗ್ಗಲು ಉಂಟಾಗಿದೆ. ಮಾರ್ನಿಗ್ ಶೋ ಟಿಕೆಟ್ ಸಿಗದೆ ದರ್ಶನ್ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ಘೋಷಣೆ ಕೂಗಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಇಂದು ರಾಬರ್ಟ್ ಸಿನಿಮಾ ಬಿಡುಗಡೆ ಹಿನ್ನೆಲೆ ಕೋಲಾರದಲ್ಲೂ ಸಂಭ್ರಮ ಹೆಚ್ಚಾಗಿದೆ. ಭವಾನಿ ಚಿತ್ರಮಂದಿರದ ಎದುರು ಅಭಿಮಾನಿಗಳು ಜಮಾಯಿಸಿದ್ದು ದರ್ಶನ್ ಕಟೌಟ್ಗೆ ಹೂವು ಹಾಕಿ, ಹಾಲಿನ ಅಭಿಷೇಕ ಮಾಡಿ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ. ಆದ್ರೆ ತಾಂತ್ರಿಕ ಸಮಸ್ಯೆ ಹಿನ್ನೆಲೆ ಸಿನಿಮಾ ಇನ್ನೂ ಆರಂಭವಾಗಿಲ್ಲ.
1,596 ಚಿತ್ರಮಂದಿರ.. 3,889 ಶೋಗಳು!
ನೂರಲ್ಲ, ಇನ್ನೂರಲ್ಲ.. ರಾಬರ್ಟ್ ಹವಾ ಯಾವ್ ರೇಂಜ್‌ಗಿದೆ ಅಂದ್ರೆ, ದೇಶಾದ್ಯಂತ ಬರೋಬ್ಬರಿ 1 ಸಾವಿರದ 596 ಚಿತ್ರಮಂದಿರದಲ್ಲಿ ಚಿಂದಿ ಉಡಾಯಿಸೋಕೆ ಗೆರೆ ಬರೆದಿದ್ದಾನೆ. ಕರ್ನಾಟಕದಲ್ಲೇ 656 ಥಿಯೇಟರ್, ಆಂಧ್ರದಲ್ಲಿ 433, ತೆಲಂಗಾಣದಲ್ಲೂ 407 ಥಿಯೇಟರ್‌ನಲ್ಲಿ ಫ್ಯಾನ್ಸ್‌ಗೆ ರಾಬರ್ಟ್ ದರ್ಶನವಾಗಲಿದೆ. ಇವತ್ತು ಬೆಳಗ್ಗೆ 6ಗಂಟೆಯಿಂದ ನಾಳೆ ಮುಂಜಾನೆವರೆಗೂ ರಾಬರ್ಟ್ ಶೋ ನಡೆಯಲಿದೆ. ಇದನ್ನ ಹೊರತುಪಡಿಸಿ ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ದೆಹಲಿಯಲ್ಲಿನ ಮಲ್ಟಿಫ್ಲೆಕ್ಸ್‌ಗಳಲ್ಲಿ ರಾಬರ್ಟ್ ರಿಲೀಸ್ ಆಗ್ತಿದೆ. ಇನ್ನು ಕರ್ನಾಟಕದಲ್ಲೇ 100ಕ್ಕೂ ಹೆಚ್ಚು ಶೋಗಳು ಮಲ್ಟಿಫ್ಲೆಕ್ಸ್‌ನಲ್ಲಿ ನಡೆಯಲಿವೆ.
ಒಂದೇ ಥಿಯೇಟರ್ ಮುಂದೆ 13ಕಟೌಟ್.. ಡಿ ಬಾಸ್ ರೆಕಾರ್ಡ್
ಇನ್ನು ದರ್ಶನ್ ಫಿಲ್ಮ್ ಬಂತೂ ಅಂದ್ರೆ ಫ್ಯಾನ್ಸ್‌ಗೆ ಹಬ್ಬ.. ವರ್ಷದ ಬಳಿಕ ಸಿನಿಮಾ ಬರ್ತಿದೆ ಅಂದ್ರೆ ಬಿಡ್ತಾರಾ. ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ದರ್ಶನ್‌ರ 13 ಪ್ರತ್ಯೇಕ ಕಟೌಟ್ ರಾರಾಜಿಸುತ್ತಿವೆ. ಒಂದೊಂದು ಕಟೌಟ್ 13 ಅಡಿ ಇರಲಿವೆ. ಇದಕ್ಕಾಗಿಯೇ ಹೈದ್ರಾಬಾದ್‌ನಿಂದ ಕ್ರಿಯೇಟಿವ್ ಆರ್ಟಿಸ್ಟ್ ಕೆಲಸ ಮಾಡಿದ್ದಾರೆ.
ಇನ್ನೂ ರಿಲೀಸ್‌ಗೆ ಎರಡು ದಿನದ ಮೊದಲೇ ರಾಬರ್ಟ್ ಚಿತ್ರದ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿವೆ. ಬಹುತೇಕ ಥಿಯೇಟರ್ ಮುಂದೆ ಹೌಸ್‌ಪುಲ್ ಬೋರ್ಡ್ ಬಿದ್ದಿದೆ. ಇನ್ನೇನಿದ್ರೂ ಶಿವರಾತ್ರಿ ಜೊತೆಗೆ ರಾಬರ್ಟ್ ಹಬ್ಬ ಮಾಡೋದೊಂದೇ ಬಾಕಿ.
ಇದನ್ನೂ ಓದಿ: Roberrt Movie: ರಾಬರ್ಟ್ ಸ್ವಾಗತಕ್ಕೆ ಒಂದೇ ಥಿಯೇಟರ್‌ನಲ್ಲಿ ದರ್ಶನ್ 13 ಕಟೌಟ್!
Published On - 7:24 am, Thu, 11 March 21