ನಟ​ ದರ್ಶನ್​‌ Fansಗೆ ಸಿಹಿ ಸುದ್ದಿ!

ಬೆಂಗಳೂರು: ಕೊರೊನಾ ಮತ್ತು ಲಾಕ್​ಡೌನ್​ನಿಂದ ಜನರು ಎಲ್ಲೂ ಹೊರಗಡೆ ಹೋಗೋಕಾಗದೆ ಬೇಸತ್ತು ಹೋಗಿದ್ದಾರೆ. ಅದರಲ್ಲೂ ಸಿನಿಮಾ ಪ್ರಿಯರಿಗಂತೂ ಫುಲ್​ ಬೋರ್​ ಆಗಿ ಹೋಗಿದೆ. ಈ ನಡುವೆ ನಟ ದರ್ಶನ್ ಅಭಿಮಾನಿಗಳಿಗೆ ರಾಬರ್ಟ್ ಚಿತ್ರ ತಂಡ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ರಾಬರ್ಟ್ ಚಿತ್ರವನ್ನು ರಿಲೀಸ್‌ ಮಾಡಲು ಸಿದ್ಧತೆ ನಡೆಸುತ್ತಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್​ನಲ್ಲಿ ರಾಬರ್ಟ್ ತೆರೆಕಾಣಬೇಕಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಬರೋಬ್ಬರಿ 4 ತಿಂಗಳಿಂದ ಸ್ತಬ್ಧವಾಗಿರೋ ಕನ್ನಡ […]

ನಟ​ ದರ್ಶನ್​‌ Fansಗೆ ಸಿಹಿ ಸುದ್ದಿ!
ಆಯೇಷಾ ಬಾನು Edited By:

Updated on: Jul 27, 2020 | 2:32 PM

ಬೆಂಗಳೂರು: ಕೊರೊನಾ ಮತ್ತು ಲಾಕ್​ಡೌನ್​ನಿಂದ ಜನರು ಎಲ್ಲೂ ಹೊರಗಡೆ ಹೋಗೋಕಾಗದೆ ಬೇಸತ್ತು ಹೋಗಿದ್ದಾರೆ. ಅದರಲ್ಲೂ ಸಿನಿಮಾ ಪ್ರಿಯರಿಗಂತೂ ಫುಲ್​ ಬೋರ್​ ಆಗಿ ಹೋಗಿದೆ. ಈ ನಡುವೆ ನಟ ದರ್ಶನ್ ಅಭಿಮಾನಿಗಳಿಗೆ ರಾಬರ್ಟ್ ಚಿತ್ರ ತಂಡ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ರಾಬರ್ಟ್ ಚಿತ್ರವನ್ನು ರಿಲೀಸ್‌ ಮಾಡಲು ಸಿದ್ಧತೆ ನಡೆಸುತ್ತಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್​ನಲ್ಲಿ ರಾಬರ್ಟ್ ತೆರೆಕಾಣಬೇಕಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಬರೋಬ್ಬರಿ 4 ತಿಂಗಳಿಂದ ಸ್ತಬ್ಧವಾಗಿರೋ ಕನ್ನಡ ಚಿತ್ರರಂಗ ಇದೀಗ ಆಗಸ್ಟ್​ನಲ್ಲಿ ಮತ್ತೆ ಚುರುಕುಗೊಳ್ಳಲಿದೆ. ಕೊರೊನಾದಿಂದ ಬಂದ್ ಆಗಿರೋ ಸ್ಯಾಂಡಲ್​ವುಡ್ ಇದೀಗ ರಾಬರ್ಟ್ ಸಿನಿಮಾ ಮೂಲಕ ಮತ್ತೆ ಎಂಟ್ರಿ ಕೊಡೋಕೆ ರೆಡಿಯಾಗ್ತಿದೆ.

ರಾಬರ್ಟ್ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ರಿಲೀಸ್​ಗಾಗಿ ಕಾಯ್ತಿದೆ. ನಾಳೆ ಈ ಚಿತ್ರದ ಮತ್ತೊಂದು ಹೊಸ ಪೋಸ್ಟರ್ ರಿಲೀಸ್ ಆಗಲಿದೆ. ಈ ಮೂಲಕ ಸ್ಯಾಂಡಲ್​ವುಡ್ ಕೊರೊನಾ ಸಂಕಷ್ಟದಿಂದ ಹೊರಬರೋಕೆ ಒಂದೊಂದೇ ಹೆಜ್ಜೆ ಇಡುವ ಪ್ರಯತ್ನ ಮಾಡ್ತಿದೆ. ಅತ್ತ ಶಿವಣ್ಣನ ನೇತೃತ್ವದಲ್ಲಿ ಚಿತ್ರಮಂದಿರ ತೆರೆಯೋದರ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಹ ಸಿದ್ಧತೆ ನಡೀತಿದೆ‌.

Published On - 2:39 pm, Sun, 26 July 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us