ಪವಿತ್ರಾಗೆ ಸಂತೈಸಿದ ನಟ ದರ್ಶನ್, ಮೊಬೈಲ್ ನಂಬರ್ ಎಕ್ಸ್​ಚೇಂಜ್?

Darshan Thoogudeepa: ದರ್ಶನ್ ಹಾಗೂ ಪವಿತ್ರಾ ಗೌಡ ಅವರುಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇತರೆ ಕೆಲ ಆರೋಪಿಗಳು ಸಹ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರಡುವ ಸಂದರ್ಭದಲ್ಲಿ ನಟ ದರ್ಶನ್ ಅವರು ಪವಿತ್ರಾ ಗೌಡ ಅವರೊಟ್ಟಿಗೆ ಮಾತನಾಡಿ ಸಂತೈಸಿದ್ದಾರೆ ಎನ್ನಲಾಗುತ್ತಿದೆ.

ಪವಿತ್ರಾಗೆ ಸಂತೈಸಿದ ನಟ ದರ್ಶನ್, ಮೊಬೈಲ್ ನಂಬರ್ ಎಕ್ಸ್​ಚೇಂಜ್?
Darshan Thoogudeepa

Updated on: May 20, 2025 | 3:23 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರುಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇತರೆ ಕೆಲ ಆರೋಪಿಗಳು ಸಹ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರಡುವ ಸಂದರ್ಭದಲ್ಲಿ ನಟ ದರ್ಶನ್ ಅವರು ಪವಿತ್ರಾ ಗೌಡ ಅವರೊಟ್ಟಿಗೆ ಮಾತನಾಡಿ ಸಂತೈಸಿದ್ದಾರೆ ಎನ್ನಲಾಗುತ್ತಿದೆ.

ನ್ಯಾಯಾಲಯದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರುಗಳು ಪಕ್ಕ-ಪಕ್ಕದಲ್ಲೇ ನಿಂತಿದ್ದರಂತೆ. ಈ ಸಮಯದಲ್ಲಿ ಪರಸ್ಪರ ತುಸು ಸಮಯ ಮಾತನಾಡಿದ್ದಾರೆ. ವಿಚಾರಣೆ ಮುಗಿಸಿ ಹೊರಬಂದಾಗಲೂ ಸಹ ಇಬ್ಬರೂ ಒಟ್ಟಿಗೆ ಬಂದರಂತೆ. ಹೊರಗೆ ಬಂದಾಗಲೂ ಸಹ ಒಟ್ಟಿಗೆ ಲಿಫ್ಟ್​ನಲ್ಲಿ ಬಂದರಂತೆ. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಅವರುಗಳು ಪರಸ್ಪರ ಮಾತನಾಡಿದ್ದಾರೆ. ಈ ವೇಳೆ ಪವಿತ್ರಾ ಗೌಡ ಅವರು ತಮ್ಮ ಕಷ್ಟ ಹೇಳಿಕೊಂಡರಂತೆ. ಆಗ ದರ್ಶನ್, ಪವಿತ್ರಾ ಅವರನ್ನು ಅಪ್ಪಿಕೊಂಡು ಸಮಾಧಾನ ಮಾಡಿದ್ದಾರೆ. ನಾನಿದ್ದೀನಿ ಟೆನ್ಷನ್ ಬೇಡ ಎಂದು ಭರವಸೆ ನೀಡಿದರಂತೆ.

ಆ ಬಳಿಕ ಪವಿತ್ರಾ ಗೌಡ ಅವರು ದರ್ಶನ್ ಅವರ ಹೊಸ ಮೊಬೈಲ್ ನಂಬರ್ ಅನ್ನು ಕೇಳಿದರಂತೆ. ಅದರಂತೆ ದರ್ಶನ್ ಅವರು ಪವಿತ್ರಾ ಗೌಡಗೆ ತಮ್ಮ ಹೊಸ ಮೊಬೈಲ್ ನಂಬರ್ ಅನ್ನು ನೀಡಿದರಂತೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಸಂಪರ್ಕದಲ್ಲಿ ಇಲ್ಲ. ದರ್ಶನ್, ಜೈಲಿಗೆ ಹೋಗಿ ಬಂದ ಬಳಿಕ ಪತ್ನಿ ವಿಜಯಲಕ್ಷ್ಮಿ ಅವರೊಟ್ಟಿಗೆ ಆತ್ಮೀಯತೆ ಹೆಚ್ಚಾಗಿದೆ. ಇತ್ತ ಪವಿತ್ರಾ ಗೌಡ ಜೊತೆಗೆ ಸಂಬಂಧವನ್ನು ಕಡಿದುಕೊಂಡಿದ್ದಾರೆ ದರ್ಶನ್.

ಇದನ್ನೂ ಓದಿ:ಕೋರ್ಟ್​ ಹಾಲ್​ನಲ್ಲಿ ಅಕ್ಕ-ಪಕ್ಕ ನಿಂತ ದರ್ಶನ್,ಪವಿತ್ರಾ; ಹೊರಬರುವಾಗ ಅಪರೂಪದ ಘಟನೆ

ವಿಜಯಕ್ಷ್ಮಿ ಅವರು ದರ್ಶನ್ ಅವರೊಟ್ಟಿಗೆ ನಿನ್ನೆಯಷ್ಟೆ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಪವಿತ್ರಾ ಅವರು ದರ್ಶನ್ ಅವರ ಬಳಿ ನಂಬರ್ ಪಡೆದು ಮತ್ತೆ ಸಂಪರ್ಕಕ್ಕೆ ಬರುವ ಪ್ರಯತ್ನ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರು ದರ್ಶನ್ ಜೊತೆಗೆ ಹಲವೆಡೆ ಸುತ್ತಾಡುತ್ತಿದ್ದಾರೆ. ಪೂಜೆಗಳನ್ನು ಮಾಡಿಸುತ್ತಿದ್ದಾರೆ. ವಿಶೇಷವೆಂದರೆ ನಟಿ ಪವಿತ್ರಾ ಗೌಡ ಸಹ ಅದೇ ದೇವಸ್ಥಾನಗಳಿಗೆ ಹೋಗಿ ಪೂಜೆಗಳನ್ನು ಮಾಡಿಸುತ್ತಿದ್ದಾರೆ. ಮತ್ತೆ ದರ್ಶನ್ ಹಾಗೂ ಪವಿತ್ರಾ ಒಂದಾಗುತ್ತಾರಾ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Tue, 20 May 25