‘ಬೇರೆ ನಟರನ್ನು ನಿಂದಿಸಬೇಡಿ’; ದರ್ಶನ್ ಅಭಿಮಾನಿಗಳಿಗೆ ಬಂತು ವಿಶೇಷ ಮನವಿ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನನ್ನು ನೀಡಿದೆ. ಅವರ ಅಭಿಮಾನಿ ಸಂಘಟನೆಗಳು ಒಂದು ಕೋರಿಕೆ ಇಟ್ಟಿದ್ದಾರೆ.

‘ಬೇರೆ ನಟರನ್ನು ನಿಂದಿಸಬೇಡಿ’; ದರ್ಶನ್ ಅಭಿಮಾನಿಗಳಿಗೆ ಬಂತು ವಿಶೇಷ ಮನವಿ
ದರ್ಶನ್

Updated on: Oct 30, 2024 | 12:26 PM

ನಟ ದರ್ಶನ್ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈಗ ಸಿಕ್ಕಿರುವುದು ಆರು ವಾರಗಳ ಮಧ್ಯಂತರ ಜಾಮೀನು. ಇದಕ್ಕೆ ಸಾಕಷ್ಟು ಷರತ್ತುಗಳನ್ನು ಕೂಡ ಹಾಕಲಾಗಿದೆ. ಈ ಮಧ್ಯೆ ದರ್ಶನ್ ಅವರ ಅಧಿಕೃತ ಫ್ಯಾನ್​ ಪೇಜ್ ಕಡೆಯಿಂದ ಮನವಿ ಒಂದು ಬಂದಿದೆ.

ದರ್ಶನ್ ಬಂಧನಕ್ಕೆ ಒಳಗಾದಾಗಿನಿಂದಲೂ ಅವರ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಅಗ್ರೆಸ್ಸಿವ್ ಆಗಿ ಪೋಸ್ಟ್ ಮಾಡುತ್ತಾ ಬರುತ್ತಿದ್ದಾರೆ. ಬೇರೆ ಕಲಾವಿದರನ್ನು, ಮಾಧ್ಯಮದವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕೆಲಸ ಮುಂದುವರಿದಿದೆ. ಇದಕ್ಕೆ ತಡೆ ಬಿದ್ದಿಲ್ಲ. ಈಗ ದರ್ಶನ್​ಗೆ ಜಾಮೀನು ಸಿಕ್ಕಿದೆ. ಅವರು ಈ ಖುಷಿಯಲ್ಲಿ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಭಯ ಇದೆ. ಹೀಗಾಗಿ, ಫ್ಯಾನ್ಸ್ ಕಡೆಯಿಂದಲೇ ಇತರ ಅಭಿಮಾನಿಗಳಿಗೆ ಮನವಿ ಮಾಡಲಾಗಿದೆ.

ದರ್ಶನ್ ಅವರ ಅಧಿಕೃತ ಫ್ಯಾನ್​ಪೇಜ್ ಆದ ‘ಡಿ ಕಂಪನಿ’ ಈ ಬಗ್ಗೆ ಪೋಸ್ಟ್ ಮಾಡಿದೆ. ‘ಎಲ್ಲಾ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಈ ಮೂಲಕ ತಿಳಿಸುವುದು ಏನೆಂದರೆ, ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರವರಿಗೆ ಜಾಮೀನು ಸಿಕ್ಕಿದೆ. ಈ ಸಂತೋಷದ ಸಂಭ್ರಮದಲ್ಲಿ ಅಭಿಮಾನಿಗಳು ಯಾವುದೇ ಕಾರಣಕ್ಕೂ ಮಾಧ್ಯಮದವರು, ರಾಜಕಾರಣಿಗಳು, ಬೇರೆ ನಟರು ಹಾಗೂ ಕಾನೂನಿನ ಬಗ್ಗೆ ನಿಂದನೆ ಬೇಡ’ ಎಂದು ಕೋರಲಾಗಿದೆ.

ಇದನ್ನೂ ಓದಿ: ಶೂಟಿಂಗ್ ಮಾಡುವಂತಿಲ್ಲ, ಪಾಸ್​​ಪೋರ್ಟ್ ಸರೆಂಡರ್​ ಮಾಡಬೇಕು; ದರ್ಶನ್​ಗೆ ಕೋರ್ಟ್ ಹಾಕಿದ ಷರತ್ತುಗಳಿವು

ಸದ್ಯ ದರ್ಶನ್​ಗೆ ಸಿಕ್ಕಿರುವುದು ಮಧ್ಯಂತರ ಜಾಮೀನು ಅಷ್ಟೇ. ಅನಾರೋಗ್ಯದ ಕಾರಣಕ್ಕೆ ಈ ಜಾಮೀನು ಕೊಡಲಾಗಿದೆ. ಅವರಿಗೆ ಕೋರ್ಟ್ ಕಡೆಯಿಂದ ಆರು ವಾರಗಳ ಸಮಾಯವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ಅವರು ಚಿಕಿತ್ಸೆ ಪಡೆದು ಬರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us