ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಪ್ರಕರಣದ ಆಳಕ್ಕೆ ಹೋದಂತೆಲ್ಲ ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿವೆ. ಅಸಲಿಗೆ ಈ ಪ್ರರಣದಿಂದ ದರ್ಶನ್ ಅವರು ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದರು. ಆದರೇ ಇದೇ ಪ್ಲ್ಯಾನ್ ಉಲ್ಟಾ ಆಗಿತ್ತು. ಹೀಗಾಗಿ, ಅವರು ಸಿಕ್ಕಿ ಬಿದ್ದರು. ಅಷ್ಟಕ್ಕೂ ಅಲ್ಲಾಗಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.
ರೇಣುಕಾ ಸ್ವಾಮಿ ಮೃತಪಟ್ಟ ಬಳಿಕ ಶವ ವಿಲೇವಾರಿಯ ಭಯ ಕಾಡಿತು. ಅವರ ಶವವನ್ನು ಹೇಗೆ ಸಾಗಿಸೋದು? ಸಿಕ್ಕಿ ಬಿದ್ದರೆ ಏನು ಕಥೆ ಎನ್ನುವ ಭಯ ದರ್ಶನ್ಗೆ ಕಾಡಿತ್ತು. ಹೀಗಾಗಿ, ನಾಲ್ವರಿಗೆ ದರ್ಶನ್ ಸರೆಂಡರ್ ಆಗುವಂತೆ ಸೂಚನೆ ನೀಡಿದ್ದ. ಇದಕ್ಕೆ ಪ್ರತಿಯಾಗಿ 30 ಲಕ್ಷ ನೀಡುವುದಾಗಿ ದರ್ಶನ್ ಹೇಳಿದ್ದರು ಎನ್ನಲಾಗಿದೆ. ಫೈನಾನ್ಸ್ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಈ ಗ್ಯಾಂಗ್ ಸರೆಂಡರ್ ಆಗಿತ್ತು. ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಒಬ್ಬೊಬ್ಬರದ್ದು ಒಂದೊಂದು ರೀತಿಯ ಹೇಳಿಕೆ ಬಂದಿತ್ತು. ಇದರಿಂದ ಪೊಲೀಸರಿಗೆ ಅನುಮಾನ ಬಂದಿತ್ತು.
ಮೊಬೈಲ್ ಪರಿಶೀಲಿಸಿದಾಗ ಶನಿವಾರ ಇಡೀ ರಾತ್ರಿ ದರ್ಶನ್ ಆ್ಯಂಡ್ ಟೀಮ್ಗೆ ಕಾಲ್ ಮಾಡಿರೋದು ಬಯಲಾಗಿದೆ. ನಿರಂತರವಾಗಿ ರಾತ್ರಿಯಿಡೀ ಇವರು ದರ್ಶನ್ ಜೊತೆ ಸಂಪರ್ಕದಲ್ಲಿ ಇದ್ದರು. ಆಗ ಪೊಲೀಸರಿಗೆ ಕೊಲೆಯ ಅಸಲಿ ಸೂತ್ರದಾರನ ಬಗ್ಗೆ ಗೊತ್ತಾಗಿದೆ. ಎಲ್ಲವನ್ನೂ ಪರಿಶೀಲಿಸಿದಾಗ ದರ್ಶನ್ ಹೆಸರು ಹೊರಬಿದ್ದಿದೆ.
ಇದನ್ನೂ ಓದಿ: ರೇಣುಕಾ ಸ್ವಾಮಿ ಶವ ಎಸೆಯಲು 30 ಲಕ್ಷ ಹಣ ಕೊಟ್ಟಿದ್ದ ದರ್ಶನ್
ರೇಣುಕಾಸ್ವಾಮಿಗೆ ಮನಬಂದಂತೆ ಥಳಿಸಲಾಗಿತ್ತು. ಗುಪ್ತಾಂಗದ ಮೇಲೆ ಒದೆಯಲಾಗಿತ್ತು. ಪವಿತ್ರಾ ಅವರು ಚಪ್ಪಲ್ಲಿಯಲ್ಲಿ ರೇಣುಕಾಸ್ವಾಮಿಗೆ ಹೊಡೆದಿದ್ದರು. ಇನ್ನೊಂದ್ ಸಲ ಈ ರೀತಿಯ ಮೆಸೇಜ್ ಬಂದ್ರೆ ಗತಿ ಕಾಣಿಸ್ತೀನಿ ಅಂತಾ ದರ್ಶನ್ ಆವಾಜ್ ಹಾಕಿದ್ದರು. ಹಲ್ಲೆ ಮಾಡಿದ ಬಳಿಕ ಊಟ ಮತ್ತು ಟ್ಯಾಬ್ಲೆಟ್ ಕೊಡಿಸಿ ಎಂದು ದರ್ಶನ್ ಹೇಳಿದ್ದರು. ಆ ಬಳಿಕ ದರ್ಶನ್ ಶಿಷ್ಯರಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಪವನ್, ರಘು, ಕಾರ್ತಿಕ್ ಸೇರಿದಂತೆ ಹಲವರಿಂದ ಹಲ್ಲೆ ನಡೆದಿದೆ. ಈ ವೇಳೆ ರೇಣುಕಾ ಸ್ವಾಮಿ ಮೃತಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.