‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯ’; ದರ್ಶನ್​​ಗೆ ವಿಜಯಲಕ್ಷ್ಮೀ ವಿಶ್

Darshan Thoogudeepa Birthday: ನಟ ದರ್ಶನ್ ಜೈಲಿನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಅವರಿಗೆ ಪತ್ನಿ ವಿಜಯಲಕ್ಷ್ಮೀ ಭಾವುಕರಾಗಿ ಶುಭಾಶಯ ಕೋರಿದ್ದಾರೆ. ಅಭಿಮಾನಿಗಳು ಸಾಮಾಜಿಕ ಕಾರ್ಯಗಳ ಮೂಲಕ ಪ್ರೀತಿ ತೋರುತ್ತಿದ್ದರೂ, ನೆಚ್ಚಿನ ನಟ ಜೈಲಿನಲ್ಲಿರುವುದು ಅವರಿಗೆ ನೋವುಂಟು ಮಾಡಿದೆ. ಜನ್ಮದಿನದಂದು ದೇವಸ್ಥಾನಕ್ಕೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯ’; ದರ್ಶನ್​​ಗೆ ವಿಜಯಲಕ್ಷ್ಮೀ ವಿಶ್
ದರ್ಶನ್, ವಿಜಯಲಕ್ಷ್ಮೀ ಹಾಗೂ ವಿನೀಶ್

Updated on: Feb 16, 2026 | 7:00 AM

ನಟ ದರ್ಶನ್ (Darshan) ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನ. ಅವರು ಜೈಲಿನಲ್ಲಿ ಇರುವುದರಿಂದ ಸಂಭ್ರಮಕ್ಕೆ ಅವಕಾಶ ಇಲ್ಲ. ನೆಚ್ಚಿನ ನಟ ಇಲ್ಲ ಎಂಬ ಕೊರಗು ಅಭಿಮಾನಿಗಳಲ್ಲಿ ಎದ್ದು ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ದರ್ಶನ್​​ಗೆ ಅಭಿಮಾನಿಗಳು ಹಾಗೂ ಅವರನ್ನು ಇಷ್ಟಪಡೋ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಅಲ್ಲದೆ, ಕೆಲವರು ಸಾಮಾಜಿಕ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪ್ರೀತಿಯಿಂದ ಪತಿಗೆ ವಿಶ್ ಮಾಡಿದ್ದಾರೆ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅರೆಸ್ಟ್ ಆದರು. ಅವರು ಆರಂಭದಲ್ಲಿ ಕೆಲ ತಿಂಗಳು ಜೈಲಿನಲ್ಲಿ ಇದ್ದರು. ಆ ಬಳಿಕ ಜಾಮೀನು ಪಡೆದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದರ್ಶನ್ ಮತ್ತೆ ಬಂಧನಕ್ಕೆ ಒಳಗಾಗಿದ್ದಾರೆ. ಜೈಲಿನಲ್ಲಿ ಅವರು ತುಂಬಾನೇ ಕಷ್ಟಪಡುತ್ತಿದ್ದಾರೆ.ಈ ಕಷ್ಟ ನೋಡಲು ಅವರ ಅಭಿಮಾನಿಗಳ ಬಳಿ ಸಾಧ್ಯವಾಗುತ್ತಿಲ್ಲ. ಈಗ ಅವರು ಜೈಲಿನಲ್ಲೇ ಜನ್ಮದಿನ ಆಚರಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಸಿಗಲಿಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ

ದರ್ಶನ್ ಅವರು ಜೀವನದಲ್ಲಿ ಮೊದಲ ಬಾರಿಗೆ ಜೈಲಿನಲ್ಲೇ ಬರ್ತ್​​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಹೆಚ್ಚಿನ ಸಂಭ್ರಮಕ್ಕೆ ಅವಕಾಶವಿಲ್ಲ. ವಿಜಯಲಕ್ಷ್ಮೀ ಅವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ವಿಶೇಷ ಒಪ್ಪಿಗೆ ಪಡೆದು ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಬರುವ ಸಾಧ್ಯತೆ ಇದೆ. ಈ ಮಧ್ಯೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು’ ಎಂದು ವಿಜಯಲಕ್ಷ್ಮೀ ಇನ್​​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್, ವಿನೀಶ್ ಹಾಗೂ ವಿಜಯಲಕ್ಷ್ಮೀ ಅವರು ಕೇಕ್ ಎದುರು ನಿಂತಿದ್ದಾರೆ. ಈ ಪೋಸ್ಟ್ ಗಮನ ಸೆಳೆದಿದೆ. ದರ್ಶನ್ ಅವರಿಗೆ ಆನೆ ಎಂದರೆ ಇಷ್ಟ. ಹೀಗಾಗಿ, ಕೇಕ್​​ನಲ್ಲಿ ಆನೆಯನ್ನು ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:59 am, Mon, 16 February 26

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us