
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ನಟ ದರ್ಶನ್ ಹೆಚ್ಚು ದೈವ ಭಕ್ತರಾದಂತಿದೆ. ಒಂದರ ಹಿಂದೊಂದು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ ದರ್ಶನ್. ಚಾಮುಂಡೇಶ್ವರಿ ದೇವಾಲಯ, ಗೌಡಗೆರೆ ಚಾಮುಂಡೇಶ್ವರಿ ದೇವಾಲಯ, ಬನಶಂಕರಿ ದೇವಾಲಯ, ತಮಿಳುನಾಡಿನ ದೇವಾಲಯ ರಾಜ್ಯದ ಇನ್ನೂ ಕೆಲವು ದೇವಾಲಯಗಳ ಬಳಿಕ ಕೇರಳದ ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ಶತ್ರು ಸಂಹಾರ ಪೂಜೆಯನ್ನು ಸಹ ಮಾಡಿಸಿದ್ದರು. ಇದೀಗ ಮತ್ತೊಮ್ಮೆ ಕೇರಳದ ಇನ್ನೊಂದು ಅತ್ಯಂತ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ.
ಕೇರಳದ ಕೊಟ್ಟೆಯೂರು ದೇವಾಲಯಕ್ಕೆ ನಟ ದರ್ಶನ್ ಭೇಟಿ ನೀಡಿದ್ದಾರೆ. ಆತ್ಮೀಯ ಧನ್ವೀರ್ ಗೌಡ ಹಾಗೂ ಕುಟುಂಬದ ಜೊತೆಗೆ ನಟ ದರ್ಶನ್ ಕೊಟ್ಟೆಯೂರು ದೇವಾಲಯಕ್ಕೆ ದರ್ಶನ್ ಭೇಟಿ ನೀಡಿದ್ದಾರೆ. ಇದು ಶಿವ ದೇವಾಲಯವಾಗಿದ್ದು, ದಕ್ಷಿಣ ಕಾಶಿ ಎಂದೇ ಈ ಸ್ಥಳವನ್ನು ಕರೆಯಲಾಗುತ್ತದೆ. ವಿಜಯಲಕ್ಷ್ಮಿ, ಧನ್ವೀರ್ ಅವರುಗಳ ಜೊತೆಗೆ ನಟ ದರ್ಶನ್ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ದರ್ಶನ್ ಹಾಗೂ ಅವರ ಕುಟುಂಬ ಭೇಟಿ ನೀಡಿರುವ ಈ ಕೊಟ್ಟೆಯೂರು ದೇವಾಲಯ ಧಾರ್ಮಿಕ ಮಹತ್ವ ಹೊಂದಿರುವ ದೇವಾಲಯ ಆಗಿದೆ. ಈಗ ದರ್ಶನ್ ಭೇಟಿ ನೀಡಿರುವ ದೇವಾಲಯ ವರ್ಷದಲ್ಲಿ ಕೇವಲ ಮೂವತ್ತು ದಿನ ಮಾತ್ರವೇ ತೆರೆದಿರುತ್ತದೆ. ಕೊಟ್ಟೆಯೂರುನಲ್ಲಿ ಎರಡು ದೇವಾಲಯಗಳಿಗೆ ಅಕ್ಕರೆ ಕೊಟ್ಟೆಯೂರು ಮತ್ತು ಇಕ್ಕರೆ ಕೊಟ್ಟೆಯೂರು ಎಂದು. ಈಗ ದರ್ಶನ್ ಭೇಟಿ ನೀಡಿರುವುದು ಅಕ್ಕರೆ ಕೊಟ್ಟೆಯೂರು, ಇಲ್ಲಿ ವೈಶಾಖ ಮಾಸದಲ್ಲಿ ಮಾತ್ರ ಪೂಜೆ ನಡೆಯುತ್ತದೆ. ಇದೇ ಕಾರಣಕ್ಕೆ ಜೂನ್ 8 ರಿಂದ ಜುಲೈ 4 ರವರೆಗೆ ಮಾತ್ರ ಈ ದೇವಾಲಯ ತೆರೆದಿರುತ್ತದೆ. ಜೂನ್ 30ರ ಬಳಿಕ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಲಾಗುತ್ತದೆ.
ಇದನ್ನೂ ಓದಿ:ಕೇರಳದ ಕೊಟ್ಟಿಯೂರು ದೇವಸ್ಥಾನಕ್ಕೆ ದರ್ಶನ್ ಭೇಟಿ
ಹಲವು ಧಾರ್ಮಿಕ ಮಹತ್ವ ಹೊಂದಿರುವ ದೇವಾಲಯ ಇದಾಗಿದ್ದು, ಈಗ ವಿಶೇಷ ಪೂಜೆಗಳು ನಡೆಯುತ್ತಿದ್ದು ದರ್ಶನ್, ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಕೇರಳದ ಕಣ್ಣೂರಿನ ಬಳಿ ಪಡೆಕಾವು ಶ್ರೀ ಭಗವತಿ ದೇವಾಲಯಕ್ಕೆ ನಟ ದರ್ಶನ್ ಭೇಟಿ ನೀಡಿದ್ದರು. ಈ ದೇವಾಲಯದಲ್ಲಿ ಶತ್ರು ವಿನಾಶ ಪೂಜೆಯನ್ನು ದರ್ಶನ್ ಅವರು ಮಾಡಿಸಿದ್ದರು. ಈಗ ಕೇರಳದ ಮತ್ತೊಂದು ಧಾರ್ಮಿಕ ಮಹತ್ವದ ದೇವಾಲಯವಾದ ಕೊಟ್ಟೆಯೂರು ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ನಟ ದರ್ಶನ್, ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮುಗಿಸಿರುವ ಕಾರಣ ದೇವಾಲಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಮುಂಚೆ ದರ್ಶನ್ ‘ಡೆವಿಲ್’ ಸಿನಿಮಾ ಪ್ರಾರಂಭಿಸಿದ್ದರು. ಕೊಲೆ ಪ್ರಕರಣ ಆ ನಂತರ ಜೈಲುವಾಸ ಇನ್ನಿತರೆ ಕಾರಣಗಳಿಂದಾಗಿ ‘ಡೆವಿಲ್’ ಸಿನಿಮಾ ತಡವಾಗಿಯ್ತು. ಇದೀಗ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಚಾಲ್ತಿಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Wed, 18 June 25