ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಈಗ ಕೊನೆಗೂ ಅವರು ಸಂಪೂರ್ಣ ರಿಲೀಫ್ ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ಕೊಟ್ಟು ಆದೇಶ ಹೊರಡಿಸಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹಾಕಿದ ಪೋಸ್ಟ್ ಏನು? ಆ ಬಗ್ಗೆ ಇಲ್ಲಿದೆ ವಿವರ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೂನ್ 11ರಂದು ಬಂಧನಕ್ಕೆ ಒಳಗಾದರು. ಅವರನ್ನು ಪೊಲೀಸರು ಮೈಸೂರಿನಲ್ಲಿ ಅರೆಸ್ಟ್ ಮಾಡಿದರು. ಆ ಬಳಿಕ ವಿಜಯಲಕ್ಷ್ಮೀ ಅವರು ಮಾಡದ ಪ್ರಾರ್ಥನೆಗಳಿಲ್ಲ, ಭೇಟಿ ನೀಡದ ದೇವಸ್ಥಾನಗಳಿಲ್ಲ. ಅನೇಕ ದೇವಾಲಯಗಳಿಗೆ ತೆರಳಿ ವಿಜಯಲಕ್ಷ್ಮೀ ದರ್ಶನ್ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದರು. ಈ ಪ್ರಾರ್ಥನೆ ಈಗ ಫಲ ಕೊಟ್ಟಿದೆ.
ದೇವಾಲಯದಲ್ಲಿ ಹೂವುಗಳನ್ನು ಹಿಡಿದಿರುವ ಫೋಟೋನ ವಿಜಯಲಕ್ಷ್ಮೀ ಹಂಚಿಕೊಂಡಿದ್ದಾರೆ. ತಮ್ಮ ಪ್ರಾರ್ಥನೆ ಫಲ ಕೊಟ್ಟ ಖುಷಿ ಅವರಿಗೆ ಇದೆ. ಅವರು ಮಾಧ್ಯಮಗಳ ಎದುರು ಬಂದು ಪ್ರತಿಕ್ರಿಯೆ ನೀಡುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಇದೆ.
ದರ್ಶನ್ಗೆ ಜಾಮೀನು ಸಿಗಲಿ ಬಳ್ಳಾರಿ ಕನಕ ದುರ್ಗಮ್ಮನ ಮೊರೆ ಹೋಗಿದ್ದರು. ಮಧ್ಯಂತರ ಜಾಮೀನಿಗೂ ಮುನ್ನ ಹಾಗೂ ಸಿಕ್ಕ ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಜಯಲಕ್ಷ್ಮೀ ವಿಶೇಷ ಪೂಜೆ ಸಲ್ಲಿಸಿದ್ದರು. ನಿರಂತರವಾಗಿ ಪೂಜೆ ಮಾಡುತ್ತಿದ್ದ ಅವರು ದರ್ಶನ್ಗೆ ಪ್ರಸಾದ ತಂದುಕೊಡುತ್ತಿದ್ದರು. ಪೂರ್ಣಾವಧಿ ಜಾಮೀನು ಸಿಕ್ಕ ಬಳಿಕ ಪತಿಯೊಂದಿಗೆ ಮತ್ತೊಮ್ಮೆ ದೇವಸ್ಥಾನಕ್ಕೆ ಬರುವುದಾಗಿ ಅವರು ಹರಕೆ ಕಟ್ಟಿದ್ದಾರೆ ಎನ್ನಲಾಗಿದೆ.
ದರ್ಶನ್ ಮಗ ವಿನಿಶ್ ಕೂಡ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ದರ್ಶನ್ ಜೊತೆ ಇರೋ ಪೋಟೋನ ಅವರು ಪೋಸ್ಟ್ ಮಾಡಿದ್ದಾರೆ. ತಂದೆಗೆ ಜಾಮೀನು ಸಿಕ್ಕ ವಿಚಾರದ ಬಗ್ಗೆ ಅವರಿಗೆ ಖುಷಿ ಇದೆ.
ಇದನ್ನೂ ಓದಿ: ದರ್ಶನ್ ಜೊತೆ ಸಹಚರರಿಗೂ ಬಿಗ್ ರಿಲೀಫ್; ಹೈಕೋರ್ಟ್ನಲ್ಲಿ ಸಿಕ್ತು ಜಾಮೀನು
ದರ್ಶನ್ ಜಾಮೀನು ಪಡೆದು ಹೊರ ಬರುತ್ತಿದ್ದಂತೆ ದರ್ಶನ್ ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಆರಂಭಿಸಿದ್ದಾರೆ. ನೆಚ್ಚಿನ ನಟ ಹೊರ ಬರುತ್ತಿರುವುದಕ್ಕೆ ಸಂತಸ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.