ಭಾನುವಾರ ಕೋಟಿಯಲ್ಲಿ ವ್ಯವಹಾರ ಮಾಡಿದ ‘ಡೆವಿಲ್’; ಒಟ್ಟಾರೆ ಕಲೆಕ್ಷನ್ ಎಷ್ಟು?

'ಡೆವಿಲ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಮೊದಲ ದಿನ ಉತ್ತಮ ಗಳಿಕೆ ಕಂಡರೂ, ನಂತರದ ದಿನಗಳಲ್ಲಿ ಕುಸಿಯಿತು. ವೀಕೆಂಡ್‌ನಲ್ಲಿ ಕೊಂಚ ಚೇತರಿಕೆ ಕಂಡಿದೆ. ಆದರೆ ಚಿತ್ರದ ಬಜೆಟ್‌ಗೆ ಹೋಲಿಸಿದರೆ ಗಳಿಕೆ ಕಡಿಮೆ ಎನ್ನಲಾಗಿದೆ. ಹೊಸ ಸಿನಿಮಾಗಳ ಸ್ಪರ್ಧೆಯಿಂದ ‘ಡೆವಿಲ್’ಗೆ ಮುಂದಿನ ದಿನಗಳಲ್ಲಿ ದೊಡ್ಡ ಸವಾಲಿದೆ.

ಭಾನುವಾರ ಕೋಟಿಯಲ್ಲಿ ವ್ಯವಹಾರ ಮಾಡಿದ ‘ಡೆವಿಲ್’; ಒಟ್ಟಾರೆ ಕಲೆಕ್ಷನ್ ಎಷ್ಟು?
Devil Movie

Updated on: Dec 22, 2025 | 7:40 AM

‘ಡೆವಿಲ್’ ಸಿನಿಮಾ (Devil Movie)  ಭಾನುವಾರ ಒಳ್ಳೆಯ ಕಲೆಕ್ಷನ್ ಮಾಡಿದೆ. ಡಿಸೆಂಬರ್ 11ರಂದು ರಿಲೀಸ್ ಆದ ಈ ಸಿನಿಮಾ ವಾರದ ಮಧ್ಯದಲ್ಲಿ ಕುಂಟುತ್ತಾ ಸಾಗಿತ್ತು. ವೀಕೆಂಡ್​ನಲ್ಲಿ ಸಿನಿಮಾ ಚೇತರಿಕೆ ಕಂಡಿದೆ. ಆದರೆ, ಚಿತ್ರದ ಬಜೆಟ್​ಗೂ ಸಿನಿಮಾದ ಗಳಿಕೆಗೂ ಅಜಗಜಾಂತರ ಇದೆ ಎಂದು ಹೇಳಲಾಗುತ್ತಾ ಇದೆ. ಈ ವಾರದಿಂದ ಸಿನಿಮಾ ಮತ್ತಷ್ಟು ದೊಡ್ಡ ಸವಾಲನ್ನು ಎದುರಿಸಬೇಕಿದೆ. ಈ ಚಿತ್ರದ ಲೈಫ್​ಟೈಮ್ ಕಲೆಕ್ಷನ್ ಎಷ್ಟಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

‘ಡೆವಿಲ್’ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ದರ್ಶನ್ ಜೈಲಿನಲ್ಲಿ ಇದ್ದಾರೆ. ಇದರ ಮಧ್ಯೆಯೂ ಅಭಿಮಾನಿಗಳು ಸಿನಿಮಾನ ಪ್ರಚಾರ ಮಾಡುವ ಕೆಲಸ ಮಾಡಿದ್ದರು. ಮೊದಲ ದಿನ ಸಿನಿಮಾ ಅಬ್ಬರಿಸಿತ್ತು. 10 ಕೋಟಿ ರೂಪಾಯಿ ಹಣವನ್ನು ಈ ಚಿತ್ರ ಮೊದಲ ದಿನ ಗಳಿಕೆ ಮಾಡಿತ್ತು. ನಂತರ ಶನಿವಾರ ಹಾಗೂ ಭಾನುವಾರ ಉತ್ತಮ ಕಲೆಕ್ಷನ್ ಮಾಡಿತ್ತು. ನಂತರದ ದಿನಗಳಲ್ಲಿ ಸಿನಿಮಾದ ಗಳಿಕೆ ಕುಗ್ಗಿದೆ.

ಭಾನುವಾರ ಸಿನಿಮಾದ ಕಲೆಕ್ಷನ್​ನಲ್ಲಿ ಕೊಂಚ ಚೇತರಿಕೆ ಕಂಡಿದೆ. ಈ ಸಿನಿಮಾ ಡಿಸೆಂಬರ್ 21ರಂದು 1.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಹೇಳಿದೆ. ಶನಿವಾರ (ಡಿಸೆಂಬರ್ 20) ಚಿತ್ರ 74 ಲಕ್ಷ ರೂಪಾಯಿ ಗಳಿಸಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ‘ದಿ ಡೆವಿಲ್’ ಪ್ರಚಾರ ಮಾಡಿದ ವಿಜಯಲಕ್ಷ್ಮಿ ದರ್ಶನ್

ಸದ್ಯ ‘ಡೆವಿಲ್’ ಸಿನಿಮಾದ ಕಲೆಕ್ಷನ್ 27.6 ಕೋಟಿ ರೂಪಾಯಿ ಆಗಿದೆ ಎಂದು sacnilk ವರದಿ ಹೇಳಿದೆ. ಇಂದಿನಿಂದ ಮೂರು ದಿನಗಳ ಕಾಲ ಸಿನಿಮಾ ಎಷ್ಟು ಗಳಿಕೆ ಮಾಡುತ್ತದೆ ಎಂಬುದು ಮುಖ್ಯವಾಗುತ್ತದೆ. ಇದಾದ ಬಳಿಕ ಸಿನಿಮಾದ ಕಲೆಕ್ಷನ್ ತೀವ್ರವಾಗಿ ಕುಸಿಯೋ ಸಾಧ್ಯತೆ ಇದೆ. ಸುದೀಪ್ ನಟನೆಯ ‘ಮಾರ್ಕ್’ ಹಾಗೂ ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾ ತೆರೆಗೆ ಬರುತ್ತಿರುವುದೇ ಇದಕ್ಕೆ ಕಾರಣ. ‘ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶನ ಇದೆ. ರಚನಾ ರೈ ಸಿನಿಮಾಗೆ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:39 am, Mon, 22 December 25