ಫ್ರೆಂಡ್ಸ್​ ಅಂದ್ರೆ ಪ್ರಾಣ ಕೊಡೋಕೂ ರೆಡಿ ‘ಬಡವ ರಾಸ್ಕಲ್’; ಹೈಪ್ ಸೃಷ್ಟಿಸಿದ ಧನಂಜಯ ನಟನೆಯ​ ಸಿನಿಮಾ ಟ್ರೇಲರ್

Badava Rascal Trailer: ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳು ಇರಲಿವೆ ಎಂಬುದು ಟ್ರೇಲರ್​​​ನಲ್ಲಿ ಹೈಲೈಟ್​ ಆಗಿದೆ. ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ 20 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಟ್ರೇಲರ್ ಪಡೆದುಕೊಂಡಿದೆ.

ಫ್ರೆಂಡ್ಸ್​ ಅಂದ್ರೆ ಪ್ರಾಣ ಕೊಡೋಕೂ ರೆಡಿ ‘ಬಡವ ರಾಸ್ಕಲ್’; ಹೈಪ್ ಸೃಷ್ಟಿಸಿದ ಧನಂಜಯ ನಟನೆಯ​ ಸಿನಿಮಾ ಟ್ರೇಲರ್
ಧನಂಜಯ-ನಾಗ ಭೂಷಣ
Edited By:

Updated on: Dec 13, 2021 | 6:35 PM

ಧನಂಜಯ ​ನಟನೆಯ ‘ಬಡವ ರಾಸ್ಕಲ್’ ಸಿನಿಮಾದ ಟ್ರೇಲರ್ ಇಂದು (ಡಿಸೆಂಬರ್​ 13) ಸಂಜೆ ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ರಿಲೀಸ್​ ಆಗಿದೆ. ಗೆಳೆಯರಿಗಾಗಿ ಪ್ರಾಣ ಬೇಕಾದರೂ ಕೊಡೋಕೆ ಸಿದ್ಧನಿರುವ ಮಧ್ಯಮ ವರ್ಗದ ಯುವಕನಾಗಿ ಧನಂಜಯ ಮಿಂಚಿದ್ದಾರೆ. ಟ್ರೇಲರ್​ ರಿಲೀಸ್​ ಆದ ನಂತರದಲ್ಲಿ ಈ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆಗಳು ದುಪ್ಪಟ್ಟಾಗಿವೆ.  

ಧನಂಜಯ ಈ ಸಿನಿಮಾದಲ್ಲಿ ಆಟೋ ಓಡಿಸೋ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಥಾ ನಾಯಕ ಗೆಳೆಯರಿಗಾಗಿ ಏನು ಮಾಡೋಕೂ ರೆಡಿ ಇರುತ್ತಾನೆ. ಇದು ಆತನನ್ನು ಪ್ರೀತಿಸುವ ಹುಡುಗಿಗೆ ಇಷ್ಟವಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗುತ್ತದೆ. ಇನ್ನು, ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳು ಇರಲಿವೆ ಎಂಬುದು ಟ್ರೇಲರ್​​​ನಲ್ಲಿ ಹೈಲೈಟ್​ ಆಗಿದೆ. ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ 20 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಟ್ರೇಲರ್ ಪಡೆದುಕೊಂಡಿದೆ. ಇನ್ನು, ನಾಯಕಿಯಾಗಿ ಅಮೃತಾ ಅಯ್ಯಂಗಾರ್​ ಮಿಂಚಿದ್ದಾರೆ.

‘ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್‌ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನವಿದೆ. ಈ ಚಿತ್ರವನ್ನು ಕೆಆರ್​ಜಿ ಸ್ಟೂಡಿಯೋಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಬಿಸ್ಕತ್​ ಪ್ಯಾಕ್​ನಿಂದ ಹಿಡಿದು ದಿನಸಿ ಅಂಗಡಿವರೆಗೆ ಧನಂಜಯ್​ ನಟನೆಯ ‘ಬಡವ ರಾಸ್ಕಲ್​’ ಹವಾ

‘ಬಡವ ರಾಸ್ಕಲ್​’ ಸಿನಿಮಾ ಟ್ರೇಲರ್​ ರಿಲೀಸ್​ ಕಾರ್ಯಕ್ರಮ ಲೈವ್​ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ

 

Published On - 6:34 pm, Mon, 13 December 21

Web contact

TV9 Kannada

Read More
Follow Us