
ಅತ್ತ ದರ್ಶನ್ ಜೈಲಿನಲ್ಲಿ ದಿನಗಳನ್ನು ದೂಡುತ್ತಿದ್ದರೆ ಹೊರಗಡೆ ಇಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಜಗಳ ಬೀದಿಗೆ ಬಿದ್ದಿದೆ. ಬೆಳಿಗ್ಗೆಯಷ್ಟೆ ಧನ್ವೀರ್ ಗೌಡ ವಿರುದ್ಧ ದರ್ಶನ್ ಅವರ ಆಪ್ತ ಸಹಾಯಕ ನಾಗರಾಜು ದೂರು ನೀಡಿದ್ದರು. ಸಂಜೆ ವೇಳೆಗೆ ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಧನ್ವೀರ್ ಅವರ ತಂದೆ ತಿಮ್ಮ ಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲಿಗೆ ಇಷ್ಟು ದಿನ ಮುಸುಕಿನಲ್ಲಿ ನಡೆಯುತ್ತಿದ್ದ ಇವರಿಬ್ಬರ ಜಗಳ ಈಗ ಬಟಾಬಯಲಾಗಿದೆ.
ದರ್ಶನ್ ತಂದೆ ತಿಮ್ಮ ಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ವಿಜಯಲಕ್ಷ್ಮಿ ದರ್ಶನ್, ಪಿ ಎ ನಾಗರಾಜು ಮತ್ತು ಭೋಜ ಹಾಗೂ ಬಾಟಲಿ ಪ್ರಮೋದ ಎಂಬುವರ ವಿರುದ್ಧ ದೂರು ದಾಖಲಿಸಿದ್ದು, ಈ ನಾಲ್ವರು ತಮ್ಮ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ ಎಂದು ತಿಮ್ಮಗೌಡ ಆರೋಪ ಮಾಡಿದ್ದಾರೆ. ದೂರಿನನ್ವಯ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ಸಹ ದಾಖಲಾಗಿದ್ದು, ವಿಜಯಲಕ್ಷ್ಮಿ ದರ್ಶನ್ ಹಾಗೂ ಇತರರಿಗೆ ಪೊಲೀಸರು ನೊಟೀಸ್ ನೀಡಿ ಠಾಣೆಗೆ ಕರೆಸುವ ಸಾಧ್ಯತೆ ಇದೆ.
ತಿಮ್ಮ ಗೌಡ ಅವರು ನೀಡಿರುವ ದೂರಿನಲ್ಲಿರುವಂತೆ, ಅಕ್ಟೋಬರ್ 21 ರಂದು ವಿಜಯಲಕ್ಷ್ಮಿ ಮತ್ತು ದರ್ಶನ್ ಪಿಎ ನಾಗರಾಜು ಧನ್ವೀರ್ ಅವರ ಮನೆಗೆ ಹೋಗಿ, ಧನ್ವೀರ್ ಬಗ್ಗೆ ವಿಚಾರಿಸಿದ್ದು, ಅವನನ್ನು ಕರೆಸಿರಿ ಮಾತನಾಡಬೇಕು ಎಂದು ಕೇಳಿದರಂತೆ ಆದರೆ ಅಂದು ಧನ್ವೀರ್ ಮೈಸೂರಿಗೆ ಹೋಗಿದ್ದರು. ಆಗ ಅವರ ತಂದೆಯನ್ನು ಕರೆಸಿ ಅವರೊಟ್ಟಿಗೆ ಮಾತನಾಡುತ್ತೇವೆ ಎಂದು ವಿಜಯಲಕ್ಷ್ಮಿ ಮತ್ತು ನಾಗರಾಜು ಹೇಳಿದರಂತೆ. ಆಗ ಧನ್ವೀರ್ ಅವರ ತಾಯಿ, ತಮ್ಮ ಸಹೋದರಿಯ ಮಗನಿಗೆ ಕರೆ ಮಾಡಿ ಮನೆಗೆ ಕರೆದಿದ್ದಾರೆ. ಸಹೋದರನ ಮಗನನ್ನು ರೌಡಿ ಎಂದುಕೊಂಡ ನಾಗರಾಜು ‘ನಾವೂ ರೌಡಿಗಳನ್ನು ಕರೆಸುತ್ತೇನೆ’ ಎಂದು ಗೌರವ್ ಶೆಟ್ಟಿ ಎಂಬಾತನಿಗೆ ಫೋನ್ ಮಾಡಿ ಬೋಜಣ್ಣ ಮತ್ತು ಬಾಟಲಿ ಪ್ರಮೋದ್ ಅವರನ್ನು ಕರೆಸಿದರಂತೆ.
ಇದನ್ನೂ ಓದಿ:ಡಿ ಬಾಸ್ ದರ್ಶನ್ ಹೆಸರು ದುರ್ಬಳಕೆ ಮಾಡಿಕೊಳ್ಳುವವರಿಗೆ ವಿಜಯಲಕ್ಷ್ಮಿ ಖಡಕ್ ಎಚ್ಚರಿಕೆ
ಆ ಇಬ್ಬರೂ ಮನೆಗೆ ಬಂದು ಧನ್ವೀರ್ ತಂದೆಯ ಮೇಲೆ ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ನೀವೆಲ್ಲ ಯಾರು ಎಂದು ಧನ್ವೀರ್ ತಂದೆ ಕೇಳಿದಾಗ, ಬಾಟಲಿ ಪ್ರಮೋದ, ನಾವು ವಿಜಯಲಕ್ಷ್ಮಿ ಅವರ ಸಹೋದರ ಎಂದು ಹೇಳಿದ್ದನಂತೆ. ಆ ಬಳಿಕ ಎಲ್ಲರೂ ಜೋರಾಗಿ ಮಾತನಾಡುತ್ತಾ, ಬೈಯ್ಯುತ್ತಾ ಕಾರಿನಲ್ಲಿ ಹೊರಟು ಹೋದರಂತೆ. ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿರುವ ತಿಮ್ಮ ಗೌಡ, ‘ಆ ನಾಲ್ವರನ್ನು ಠಾಣೆಗೆ ಕರೆಸಿ ಅವರು ಇನ್ನು ಮುಂದೆ ನಮ್ಮ ತಂಟೆಗೆ ಬರೆದಂತೆ ಬುದ್ಧಿಹೇಳಿ’ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ.
ದರ್ಶನ್ ಜೈಲಿಗೆ ಹೋದ ಬಳಿಕ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಅವರು ಮುಂದೆ ನಿಂತು ದರ್ಶನ್ ಪರವಾಗಿ ಕೆಲಸ ಮಾಡುತ್ತಿದ್ದರು. ನ್ಯಾಯಾಲಯದ ವಿಷಯಗಳು ಸೇರಿದಂತೆ ಹಲವು ವಿಷಯಗಳನ್ನು ಒಟ್ಟಿಗೆ ನಿರ್ವಹಿಸಿರುವಂತೆಯೇ ನೋಡುಗರಿಗೆ ಕಾಣುತ್ತಿತ್ತು. ಆದರೆ ಕಳೆದ ಕೆಲ ತಿಂಗಳುಗಳಿಂದ ಇಬ್ಬರ ನಡುವೆ ಮನಸ್ಥಾಪ ಶುರುವಾಗಿದೆ. ಕೆಲ ದಿನಗಳ ಹಿಂದೆ ಸಹ ಇಬ್ಬರೂ ಸಾಮಾಜಿಕ ಜಾಲತಾಣ ಮೂಲಕ ಪರಸ್ಪರರ ಬಗ್ಗೆ ಪರೋಕ್ಷವಾಗಿ ಪೋಸ್ಟುಗಳನ್ನು ಹಂಚಿಕೊಂಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:05 pm, Fri, 23 October 26