ಹೃದಯಾಘಾತದಿಂದ ನಟ ಧೀರೇಂದ್ರ ಗೋಪಾಲ್ ಪತ್ನಿ ನಿಧನ

ವಿಚಿತ್ರ ಎಂದರೆ 1999ರಲ್ಲಿ ಧೀರೇಂದ್ರ ಗೋಪಾಲ್​ ಅವರಿಗೆ ಹರಿಹರದಲ್ಲೇ ಹೃದಯಾಘಾತವಾಗಿತ್ತು.  ಹೃದಯಾಘಾತವಾಗಿತ್ತು. ಇದರಿಂದ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು.

ಹೃದಯಾಘಾತದಿಂದ ನಟ ಧೀರೇಂದ್ರ ಗೋಪಾಲ್ ಪತ್ನಿ ನಿಧನ
ಧೀರೇಂದ್ರ ಗೋಪಾಲ್​ ಪತ್ನಿ
Edited By:

Updated on: May 06, 2021 | 1:36 PM

ಕನ್ನಡ ಚಲನಚಿತ್ರರಂಗದ ಖ್ಯಾತ ಖಳ ನಟ ಧೀರೇಂದ್ರ ಗೋಪಾಲ್ ಪತ್ನಿ ಸುನಂದಮ್ಮ ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ ಆಗಿತ್ತು. ದಾವಣಗೆರೆ ಜಿಲ್ಲೆಯ ಹರಿಹರದ ಸ್ವಗೃಹದಲ್ಲಿ ಇಬ್ಬರು ಪುತ್ರರರ ಜತೆ ಗೋಪಾಲಮ್ಮ ವಾಸವಾಗಿದ್ದರು.   ಇಂದು ಮಧ್ಯಾಹ್ನ ಅವರಿಗೆ ಹೃದಯಾಘಾತವಾಗಿದೆ. ತೀವ್ರ ಪ್ರಮಾಣದಲ್ಲಿ ಹೃದಯಾಘಾತವಾದ್ದರಿಂದ ಅವರು ಮನೆಯಲ್ಲೇ ಮೃತಪಟ್ಟಿದ್ದಾರೆ. ನಗರದ ದಾಲ್ಮೀಯಾ ಘಾಟ್​​ನಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆದಿದೆ.

ಸುನಂದಮ್ಮ ರಂಗ ಕಲಾವಿದೆ ಆಗಿದ್ದರು. ದಾವಣಗೆರೆ ಮತ್ತು ಹರಿಹರದಲ್ಲಿ ನಾಟಕ ಪ್ರದರ್ಶನದ ವೇಳೆ ನಟ ಧೀರೇಂದ್ರ ಗೋಪಾಲ್ ಪರಿಚಯ ಆಗಿತ್ತು. ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಧೀರೇಂದ್ರ ಗೋಪಾಲ್​ ಅವರು 350ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದಿನ ಕಾಲದಲ್ಲಿ ಬೇಡಿಕೆಯ ಖಳನಟರಾಗಿದ್ದರು. ಸ್ಟಾರ್​​ ನಟರ ಸಿನಿಮಾಗಳಲ್ಲಿ ಅವರೇ ವಿಲನ್​ ಪಾತ್ರ ಮಾಡುತ್ತಿದ್ದರು.

ವಿಚಿತ್ರ ಎಂದರೆ 1999ರಲ್ಲಿ ಧೀರೇಂದ್ರ ಗೋಪಾಲ್​ ಅವರಿಗೆ ಹರಿಹರದಲ್ಲೇ ಹೃದಯಾಘಾತವಾಗಿತ್ತು.  ಹೃದಯಾಘಾತವಾಗಿತ್ತು. ಇದರಿಂದ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ನಂತರ ಡಿಸೆಂಬರ್​ 25, 2000ರಲ್ಲಿ ಮತ್ತೊಮ್ಮೆ ಅವರಿಗೆ ಹೃದಯಾಘಾತವಾಯಿತು. ಈ ವೇಳೆ ಅವರು ಮೃತಪಟ್ಟಿದ್ದರು. ಆಗ ಅವರಿಗೆ 59 ವರ್ಷ ವಯಸ್ಸು. ಈಗ ಅವರ ಪತ್ನಿ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ:

Ramu Kanagal: ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊರೊನಾದಿಂದ ನಿಧನCovid-19 Karnataka Update: ಕರ್ನಾಟಕದಲ್ಲಿ ಒಂದೇ ದಿನ 50 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು, ಇದು ಈವರೆಗಿನ ದಾಖಲೆ

Published On - 8:36 pm, Wed, 5 May 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us