OTT ವೇದಿಕೆಗೆ ಸೆನ್ಸಾರ್ ಶಿಪ್ ಲಗಾಮು! ಇನ್ನು ಸಿನಿಮಾ, ವೆಬ್ ಸಿರೀಸ್ ಮೇಲೆ ಸರ್ಕಾರದ ಹದ್ದಿನಕಣ್ಣು
ಒಟಿಟಿ ಮತ್ತು ಡಿಜಿಟಲ್ ವೇದಿಕೆಗಳಿಗೆ ಕಣ್ಗಾವಲು ಹಾಕುವತ್ತ ಕೇಂದ್ರ ಸರ್ಕಾರ ಮೊದಲ ಹೆಜ್ಜೆಯಿಟ್ಟಿದೆ. ಇನ್ನು ಮುಂದೆ ಮಾಹಿತಿ ಮತ್ತು ಪ್ರಸಾರಾಂಗ ಮಂತ್ರಾಲಯ ಆನ್ಲೈನ್ ವೇದಿಕೆಗಳಲ್ಲಿ ಒದಗಿಸುವ ಸುದ್ದಿ, ಮಾಹಿತಿ ಮತ್ತು ಮನರಂಜನೆಯ ಕಂಟೆಂಟ್ ಗಳ ಮೇಲೆ ನಿಗಾ ವಹಿಸಲಿದೆ. ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್ ಸ್ಟಾರ್ ಮುಂತಾದ ಓಟಿಟಿ ವೇದಿಕೆಗಳಲ್ಲಿ ಸಿನಿಮಾ, ವೆಬ್ ಸಿರೀಸ್ ಗಳು ಪ್ರಸಾರವಾಗುವ ಮುನ್ನ ಕೇಂದ್ರ ಸರ್ಕಾರದ ವೀಕ್ಷಣೆಗೆ ಲಭ್ಯವಾಗಲಿದೆ. ಓಟಿಟಿ ವೇದಿಕೆಗಳಿಗೆ ಸೆನ್ಸಾರ್ ಶಿಪ್ ಅಳವಡಿಸಲು ಸರ್ಕಾರ ತೆಗೆದುಕೊಂಡ ಮೊದಲ […]
ಒಟಿಟಿ ಮತ್ತು ಡಿಜಿಟಲ್ ವೇದಿಕೆಗಳಿಗೆ ಕಣ್ಗಾವಲು ಹಾಕುವತ್ತ ಕೇಂದ್ರ ಸರ್ಕಾರ ಮೊದಲ ಹೆಜ್ಜೆಯಿಟ್ಟಿದೆ. ಇನ್ನು ಮುಂದೆ ಮಾಹಿತಿ ಮತ್ತು ಪ್ರಸಾರಾಂಗ ಮಂತ್ರಾಲಯ ಆನ್ಲೈನ್ ವೇದಿಕೆಗಳಲ್ಲಿ ಒದಗಿಸುವ ಸುದ್ದಿ, ಮಾಹಿತಿ ಮತ್ತು ಮನರಂಜನೆಯ ಕಂಟೆಂಟ್ ಗಳ ಮೇಲೆ ನಿಗಾ ವಹಿಸಲಿದೆ. ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್ ಸ್ಟಾರ್ ಮುಂತಾದ ಓಟಿಟಿ ವೇದಿಕೆಗಳಲ್ಲಿ ಸಿನಿಮಾ, ವೆಬ್ ಸಿರೀಸ್ ಗಳು ಪ್ರಸಾರವಾಗುವ ಮುನ್ನ ಕೇಂದ್ರ ಸರ್ಕಾರದ ವೀಕ್ಷಣೆಗೆ ಲಭ್ಯವಾಗಲಿದೆ. ಓಟಿಟಿ ವೇದಿಕೆಗಳಿಗೆ ಸೆನ್ಸಾರ್ ಶಿಪ್ ಅಳವಡಿಸಲು ಸರ್ಕಾರ ತೆಗೆದುಕೊಂಡ ಮೊದಲ ನಿರ್ಣಯವಾಗಿದೆ. ಜೊತೆಗೆ ಡಿಜಿಟಲ್ ಸುದ್ದಿತಾಣಗಳ ಮೇಲೂ ಕಣ್ಗಾವಲು ಇಡಬಹುದಾಗಿದೆ.
ಸಚಿವ ಪ್ರಕಾಶ್ ಜಾವಡೇಕರ್ ಅವರ ನೇತೃತ್ವದ ಮಾಹಿತಿ ಮತ್ತು ಪ್ರಸಾರಾಂಗ ಮಂತ್ರಾಲಯ ಇದುವರೆಗೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ನಿಯಂತ್ರಿಸುತ್ತಿತ್ತು. ಹೊರಡಿಸಿರುವ ಆದೇಶದ ಪ್ರಕಾರ ಭಾರತ ಸರ್ಕಾರದ ವ್ಯವಹಾರ ಹಂಚಿಕೆ ನಿಯಮ 1961 ಕ್ಕೆ ತಿದ್ದುಪಡಿ ತರುವ ಮೂಲಕ ಈ ಆದೇಶವನ್ನು ಹೊರಡಿಸಲಾಗಿದೆ. ಈ ಆದೇಶವನ್ನು 357 ನೇ ತಿದ್ದುಪಡಿ ಆದೇಶ 2020 ಎಂದು ಕರೆಯಲ್ಪಡಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈಗಾಗಲೇ ರಾಷ್ಟ್ರಪತಿಗಳು ಈ ಆದೇಶಕ್ಕೆ ಅಂಕಿತ ಹಾಕಿದ್ದಾರೆ. ಆನ್ಲೈನ್ ನಲ್ಲಿ ಒದಗಿಸುವ ದೃಶ್ಯ, ಶ್ರವಣ ಮತ್ತು ಅಕ್ಷರ ರೂಪದಲ್ಲಿರುವ ಎಲ್ಲ ಪ್ರಕಾರದ ಕಂಟೆಂಟುಗಳಿಗೂ ಈ ಆದೇಶ ಅನ್ವಯವಾಗಲಿದೆ.
ಕಂಟೆಂಟುಗಳ ಮೇಲೆ ಯಾವ ನಿಯಂತ್ರಣವಿಲ್ಲದ ಕಾರಣ ಈ ವೇದಿಕೆಗಳು ಎಗ್ಗಿಲ್ಲದೆ ವರ್ತಿಸುತ್ತಿವೆ ಎಂಬ ಕೂಗು ಕೇಳಿಬಂದಿತ್ತು. ಅಶ್ಲೀಲ, ಅಸಭ್ಯ ಮತ್ತು ಕ್ರೌರ್ಯವನ್ನು ಬಿಂಬಿಸುವ ವಿಷಯಗಳನ್ನು ಯಾವ ನಿಯಂತ್ರಣವಿಲ್ಲದೆ ಆನ್ಲೈನ್ ವೇದಿಕೆಗಳು ಪ್ರಸಾರ ಮಾಡುತ್ತವೆ ಎಂದು ವಕೀಲ ಶಶಾಂಕ್ ಶೇಖರ್ ಝಾ, ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು.
2019ರಲ್ಲಿ ನೆಟ್ಪಿಕ್ಸ್, ಪ್ರೈಮ್, ವೂಟ್, ಡಿಸ್ನಿ ಹಾಟ್ ಸ್ಟಾರ್ ಮುಂತಾದ 9 ಓಟಿಟಿ ವೇದಿಕೆಗಳು ಸ್ವಯಂ ನಿಯಂತ್ರಣ ನಿಯಮವೊಂದನ್ನು ಜಾರಿಗೊಳಿಸಿಕೊಳ್ಳುವುದಾಗಿ ತಿಳಿಸಿದ್ದವು. 2020ರಲ್ಲಿ 15 ಓಟಿಟಿ ವೇದಿಕೆಗಳು ಒಟ್ಟುಗೂಡಿ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾದಡಿ ಸ್ವಯಂ ನಿಯಂತ್ರಣ ಕಾಯ್ದೆಗೆ ಸಹಿ ಹಾಕಿದ್ದವು. ಆದರೆ ಮಾಹಿತಿ ಮತ್ತು ಪ್ರಸಾರಾಂಗ ಮಂತ್ರಾಲಯ ಸ್ವಯಂ ನಿಯಂತ್ರಣ ನಿಯಮಗಳಿಗೆ ಒಪ್ಪಿಗೆ ಸೂಚಿಸಿರಲಿಲ್ಲ.
Published On - 1:36 pm, Wed, 11 November 20