ಚಿರು-ಮೇಘನಾ ಸರ್ಜಾ ಪುತ್ರನಿಗೆ ತೊಟ್ಟಿಲು ಶಾಸ್ತ್ರ
ಬೆಂಗಳೂರು: ಕನ್ನಡಿಗರ ಆಶೀರ್ವಾದದೊಂದಿಗೆ ಸರ್ಜಾ ಕುಟುಂಬದ ಆಸೆಯಂತೆ ಗಂಡು ಮಗು ಜನಿಸಿದ್ದು ಇಂದು ಚಿರು-ಮೇಘನಾ ಪುತ್ರನಿಗೆ ಶುಭದಿನ. ದುಃಖದಲ್ಲಿ ಮುಳುಗಿದ್ದ ಸರ್ಜಾ ಕುಟುಂದಲ್ಲಿ ಪುಟ್ಟ ಕಂದಮ್ಮನಿಂದ ಸಂಭ್ರಮ, ಸಡಗರ ಶುರುವಾಗಿದೆ. ಇಂದು ಮಧ್ಯಾಹ್ನ 12ಗಂಟೆಯ ಶುಭಗಳಿಗೆಯಲ್ಲಿ ಚಿರು ರೂಪದಲ್ಲಿ ಬಂದ ಮೇಘನಾ ಪುತ್ರನ ತೊಟ್ಟಿಲು ಶಾಸ್ತ್ರ ನಡೆಯಲಿದೆ. ಹಿರಿಯರು, ಕುಟುಂಬಸ್ಥರ ಸಮ್ಮುಖದಲ್ಲಿ ಆನಂದ ಹೊತ್ತು ತಂದ ಮಗುವನ್ನು ತೊಟ್ಟಿಲಿಗೆ ಹಾಕಿ ಶಾಸ್ತ್ರ ಮಾಡಲಾಗುತ್ತೆ. ಕುಟುಂಬಸ್ಥರು ಬೆಳಿಗ್ಗೆಯಿಂದಲೇ ಎಲ್ಲಾ ತಯಾರಿ ಮಾಡಿಕೊಳ್ತಿದ್ದಾರೆ. ಮನೆಯಂಗಳದಲ್ಲಿ ಸಂತಸದ ರಂಗೋಲಿ ಅರಳಿದೆ. ಹೂವು, […]
ಬೆಂಗಳೂರು: ಕನ್ನಡಿಗರ ಆಶೀರ್ವಾದದೊಂದಿಗೆ ಸರ್ಜಾ ಕುಟುಂಬದ ಆಸೆಯಂತೆ ಗಂಡು ಮಗು ಜನಿಸಿದ್ದು ಇಂದು ಚಿರು-ಮೇಘನಾ ಪುತ್ರನಿಗೆ ಶುಭದಿನ. ದುಃಖದಲ್ಲಿ ಮುಳುಗಿದ್ದ ಸರ್ಜಾ ಕುಟುಂದಲ್ಲಿ ಪುಟ್ಟ ಕಂದಮ್ಮನಿಂದ ಸಂಭ್ರಮ, ಸಡಗರ ಶುರುವಾಗಿದೆ.
ಇಂದು ಮಧ್ಯಾಹ್ನ 12ಗಂಟೆಯ ಶುಭಗಳಿಗೆಯಲ್ಲಿ ಚಿರು ರೂಪದಲ್ಲಿ ಬಂದ ಮೇಘನಾ ಪುತ್ರನ ತೊಟ್ಟಿಲು ಶಾಸ್ತ್ರ ನಡೆಯಲಿದೆ. ಹಿರಿಯರು, ಕುಟುಂಬಸ್ಥರ ಸಮ್ಮುಖದಲ್ಲಿ ಆನಂದ ಹೊತ್ತು ತಂದ ಮಗುವನ್ನು ತೊಟ್ಟಿಲಿಗೆ ಹಾಕಿ ಶಾಸ್ತ್ರ ಮಾಡಲಾಗುತ್ತೆ. ಕುಟುಂಬಸ್ಥರು ಬೆಳಿಗ್ಗೆಯಿಂದಲೇ ಎಲ್ಲಾ ತಯಾರಿ ಮಾಡಿಕೊಳ್ತಿದ್ದಾರೆ. ಮನೆಯಂಗಳದಲ್ಲಿ ಸಂತಸದ ರಂಗೋಲಿ ಅರಳಿದೆ. ಹೂವು, ರಂಗೋಲಿಯಿಂದ ಮನೆಯಂಗಳ ಸಿಂಗಾರಗೊಂಡಿದೆ.
ಜೂ.ಚಿರು ಆಗಮನ, ನಟಿ ಮೇಘನಾ ಸರ್ಜಾಗೆ ಗಂಡು ಮಗು: ಚಿಕ್ಕಪ್ಪನ ತೋಳಿನಲ್ಲಿ ಕಂದಾ ನಾನು..
ಚಿರು ಮಗನಿಗಾಗಿ ಗದಗದಿಂದ ಬಂತು ವಿಶೇಷ ತೊಟ್ಟಿಲು: ಇನ್ನು ತೊಟ್ಟಿಲು ಶಾಸ್ತ್ರಕ್ಕಾಗಿ ಗದಗದ ಮಹಿಳಾ ಸಂಘದಿಂದ ಬಣ್ಣಗಳಿಂದ ಕೂಡಿರೋ ಹ್ಯಾಂಡ್ ಮೇಡ್ ತೊಟ್ಟಿಲು ಬಂದಿದೆ. ಚಿರು, ಮೇಘನಾ ಪುತ್ರನಿಗಾಗಿ ಅಭಿಮಾನಿಗಳು ವಿಷೇಶ ತೊಟ್ಟಿಲನ್ನು ಉಡುಗೊರೆಯಾಗಿ ಕಳಿಸಿದ್ದಾರೆ.
ಇದನ್ನೂ ಓದಿ: ಕೂಸು ಹುಟ್ಟುವ ಮೊದಲೇ.. ಅಣ್ಣನ ಮಗುವಿಗಾಗಿ ಬೆಳ್ಳಿ ತೊಟ್ಟಿಲು ಖರೀದಿಸಿದ ಧ್ರುವ