‘ಭೀಮ’ ಸಿನಿಮಾನಲ್ಲಿ ‘ಸಲಗ 2’ ಸುಳಿವು ಕೊಟ್ಟ ದುನಿಯಾ ವಿಜಯ್

|

Updated on: Aug 09, 2024 | 4:16 PM

Bheema: ದುನಿಯಾ ವಿಜಯ್ ನಿರ್ದೇಶಿಸಿರುವ ಎರಡನೇ ಸಿನಿಮಾ ‘ಭೀಮ’ ಮೊದಲ ದಿನ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಂದಹಾಗೆ ‘ಭೀಮ’ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಟ್ವಿಸ್ಟ್ ಒಂದನ್ನು ದುನಿಯಾ ವಿಜಯ್ ನೀಡಿದ್ದಾರೆ.

‘ಭೀಮ’ ಸಿನಿಮಾನಲ್ಲಿ ‘ಸಲಗ 2’ ಸುಳಿವು ಕೊಟ್ಟ ದುನಿಯಾ ವಿಜಯ್
Follow us on

ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಇಂದು (ಆಗಸ್ಟ್ 09) ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ಮಾದಕ ವಸ್ತುವಿನ ಪ್ರಸಾರ ಹಾಗೂ ಅದರ ಪರಿಣಾಮ ಯುವಕರ ಮೇಲೆ ಹೇಗೆ ಆಗುತ್ತಿದೆ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಮೊದಲೆರಡು ಶೋ ಭರ್ಜರಿ ಪ್ರದರ್ಶನ ಕಂಡಿದೆ. ದುನಿಯಾ ವಿಜಯ್ ಅಭಿಮಾನಿಗಳು ‘ಭೀಮ’ ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಮೊದಲ ಶೋ ರದ್ದಾಗಿದ್ದಕ್ಕೆ ಕೆಲವೆಡೆ ಅಭಿಮಾನಿಗಳು ಗಲಾಟೆ ಸಹ ಮಾಡಿದ್ದಾರೆ.

‘ಭೀಮ’ ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ. ಇದಕ್ಕೆ ಮುನ್ನ ‘ಸಲಗ’ ಸಿನಿಮಾವನ್ನು ದುನಿಯಾ ವಿಜಯ್ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಿನಿಮಾದ ಬಗ್ಗೆ ದುನಿಯಾ ವಿಜಯ್ ಅಭಿಮಾನಿಗಳು ಮಾತ್ರವೇ ಅಲ್ಲದೆ ಎಲ್ಲ ವರ್ಗದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂತೆಯೇ ‘ಭೀಮ’ ಸಿನಿಮಾಕ್ಕೂ ಸಹ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆಯೇ ವ್ಯಕ್ತವಾಗಿದೆ. ಈ ವೀಕೆಂಡ್​ನಲ್ಲಿ ಸಿನಿಮಾದ ಕಲೆಕ್ಷನ್ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಚಾರ್ಮಾಡಿ ಘಾಟ್​​​ನಲ್ಲಿ KSRTC ಬಸ್​ಗೆ ಅಡ್ಡನಿಂತ ಒಂಟಿ ಸಲಗ, ಮುಂದೇನಾಯ್ತು?

‘ಭೀಮ’ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಸಿನಿಮಾದಲ್ಲಿ ಬೆಂಗಳೂರಿನ ಗಲ್ಲಿಗಳ ಯುವಕರ ನೈಜ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಗಾಂಜಾದ ಪ್ಯಾಕಿಂಗ್ ಹೇಗಾಗುತ್ತದೆ. ಅದರ ಪ್ರಸಾರ ಹೇಗಾಗುತ್ತದೆ. ಸ್ಲಂ ಕುಟುಂಬಗಳನ್ನು ಹೇಗೆ ಇದಕ್ಕೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಇದರ ಜೊತೆಗೆ ಮೆಡಿಕಲ್ ಶಾಪ್​ಗಳಲ್ಲಿ ಸಿಗುವ ಔಷಧವನ್ನೇ ಹೇಗೆ ಡ್ರಗ್ಸ್ ಆಗಿ ಬಳಸುತ್ತಿದ್ದಾರೆ ಎಂಬಿತ್ಯಾದಿಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಸಿನಿಮಾದ ಕೊನೆಯಲ್ಲಿ ಅಭಿಮಾನಿಗಳಿಗೆ ಸಖತ್ ಟ್ವಿಸ್ಟ್ ಒಂದನ್ನು ದುನಿಯಾ ವಿಜಯ್ ನೀಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಇನ್ನೇನು ಸಿನಿಮಾ ಮುಗಿಯಿತು ಎಂದುಕೊಳ್ಳುವಾಗ ಹೊಸ ಪಾತ್ರದ ಎಂಟ್ರಿ ಆಗುತ್ತದೆ. ಅದೇ ‘ಸಲಗ’ನ ಪಾತ್ರ. ಹೌದು, ‘ಭೀಮ’ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ‘ಸಲಗ’ ಸಹ ಇದ್ದಾನೆ. ಆದರೆ ‘ಭೀಮ’ ಸಿನಿಮಾನಲ್ಲಿ ‘ಸಲಗ’ ಹೇಗೆ ಬರುತ್ತಾನೆ? ‘ಭೀಮ’ ಸಿನಿಮಾದ ಕತೆಯಲ್ಲಿ ‘ಸಲಗ’ನಿಗೆ ಏನು ಕೆಲಸ ಇತ್ಯಾದಿಗಳನ್ನು ತಿಳಿಯಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ