‘ಕರ್ನಾಟಕಕ್ಕೆ ನಾನೇ ನಂಬರ್ 1 ಬಾಸ್’; ಇದು ಯಶ್ ಕಾರ್ ನಂಬರ್​ ಪ್ಲೇಟ್ ಸ್ಪೆಷಾಲಿಟಿ

ಹೀರೋಗಳ ಕಾರು ಎಷ್ಟು ಗಮನ ಸೆಳೆಯುತ್ತದೆಯೋ ಅವರ ಕಾರಿನ ನಂಬರ್​ಪ್ಲೇಟ್ ಕೂಡ ಗಮನ ಸೆಳೆಯುತ್ತವೆ. ಈಗ ಯಶ್ ಅವರ ಕಾರಿನ ಸಂಖ್ಯೆ ವೈರಲ್ ಆಗುತ್ತಿದೆ. ‘ಕರ್ನಾಟಕಕ್ಕೆ ನಾನೇ ನಂಬರ್ 1 ಬಾಸ್’ ಎಂಬ ರೀತಿಯಲ್ಲಿ ಆ ನಂಬರ್ ಪ್ಲೇಟ್ ಇದೆ. ಈ ಮಾತನ್ನು ಅನೇಕರು ಒಪ್ಪಿದ್ದಾರೆ. ಸದ್ಯ ನಂಬರ್​ಪ್ಲೇಟ್ ವೈರಲ್ ಆಗುತ್ತಿದೆ.

‘ಕರ್ನಾಟಕಕ್ಕೆ ನಾನೇ ನಂಬರ್ 1 ಬಾಸ್’; ಇದು ಯಶ್ ಕಾರ್ ನಂಬರ್​ ಪ್ಲೇಟ್ ಸ್ಪೆಷಾಲಿಟಿ
ಯಶ್
Follow us
ರಾಜೇಶ್ ದುಗ್ಗುಮನೆ
|

Updated on:Aug 10, 2024 | 7:35 AM

ಬಾಸ್ ಯಾರು ಎನ್ನುವ ಬಗ್ಗೆ ಚರ್ಚೆ ಮೊದಲಿನಿಂದಲೂ ಇದೆ. ದರ್ಶನ್ ಅಭಿಮಾನಿಗಳು ತಮ್ಮ ಹೀರೋ ಬಾಸ್ ಎನ್ನುತ್ತಾರೆ. ಅದಕ್ಕಾಗಿ ಫ್ಯಾನ್ಸ್ ಅವರನ್ನು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಾರೆ. ಇನ್ನು ಧ್ರುವ ಫ್ಯಾನ್ಸ್ ಕೂಡ ‘ಡಿ ಬಾಸ್’ ಎಂದರೆ ಧ್ರುವ ಬಾಸ್ ಎನ್ನುತ್ತಿದ್ದಾರೆ. ಅತ್ತ ಸುದೀಪ್ ಹಾಗೂ ಯಶ್ ಫ್ಯಾನ್ಸ್ ಕೂಡ ನಮ್ಮ ಹೀರೋನೇ ಬಾಸ್ ಎನ್ನುತ್ತಿದ್ದಾರೆ. ಈ ಮಧ್ಯೆ ಯಶ್ ಅವರ ಕಾರ್ ನಂಬರ್ ಸಾಕಷ್ಟು ಗಮನ ಸೆಳೆದಿದೆ. ‘ಕರ್ನಾಟಕಕ್ಕೆ ನಾನೇ ನಂಬರ್ 1 ಬಾಸ್’ ಎಂಬ ರೀತಿಯಲ್ಲಿ ಆ ನಂಬರ್ ಪ್ಲೇಟ್ ಇದೆ.

ಇತ್ತೀಚೆಗೆ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್ ಆರಂಭಿಸಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಇದರ ಶೂಟಿಂಗ್ ನಡೆಯುತ್ತಿದೆ. ಸಿನಿಮಾ ಕೆಲಸಗಳ ಕಾರಣಕ್ಕೆ ಯಶ್ ಅವರು ಕಾರಿನಲ್ಲಿ ಶೂಟಿಂಗ್ ಸ್ಪಾಟ್​ಗೆ ತೆರಳುತ್ತಿದ್ದಾರೆ. ಅವರ ಕಾರು ರೇಂಜ್ ರೋವರ್. 2023ರ ಜೂನ್ 14ರಂದು ಈ ಕಾರು ನೋಂದಣಿ ಆಗಿದೆ. ಬೆಂಗಳೂರು ಕೇಂದ್ರ ಆರ್​ಟಿಒನಲ್ಲಿ ಈ ಕಾರನ್ನು ನೋಂದಣಿ ಮಾಡಿಸಲಾಗಿದೆ.

ಹಾಗಾದರೆ ಯಶ್ ಅವರ ಕಾರಿನ ಸಂಖ್ಯೆ ಏನು? ‘KA01 NA 8055’ ಇದು ಯಶ್ ಅವರ ಕಾರಿನ ಸಂಖ್ಯೆ. 8055 ಹಾಗೂ BOSS ಮಧ್ಯೆ ಸಾಮ್ಯತೆ ಇರುವುದರಿಂದ ಈ ಸಂಖ್ಯೆಯನ್ನು ಎಲ್ಲರೂ ಬಾಸ್ ಸಂಖ್ಯೆ ಎಂದೇ ಪರಿಗಣಿಸುತ್ತಾರೆ.  ಯಶ್ ಕೂಡ ಈ ಸಂಖ್ಯೆ ಪಡೆದುಕೊಂಡಿದ್ದಾರೆ. KA ಕರ್ನಾಟಕವನ್ನು ಪ್ರತಿನಿಧಿಸುತ್ತದೆ. NA 01 ಅನ್ನೋದನ್ನು ನಂಬರ್ 1 ಎಂದು ಫ್ಯಾನ್ಸ್ ವಿಶ್ಲೇಷಿಸಿದ್ದಾರೆ. ಹೀಗಾಗಿ, ಈ ನಂಬರ್​ ಪ್ಲೇಟ್​ ‘ಕರ್ನಾಟಕಕ್ಕೆ ನಾನೇ ನಂಬರ್ 1 ಬಾಸ್’ ಎಂಬುದನ್ನು ಸೂಚಿಸುತ್ತದೆ ಎಂದು ಫ್ಯಾನ್ಸ್ ಬಣ್ಣಿಸುತ್ತಿದ್ದಾರೆ. ಈ ಮಾತನ್ನು ಅನೇಕರು ಒಪ್ಪಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್​’ ಸಿನಿಮಾ ಮುಹೂರ್ತದಲ್ಲಿ ಹೇಗಿತ್ತು ಯಶ್​ ಗತ್ತು? ವಿಡಿಯೋ ನೋಡಿ..

ಯಶ್ ಅವರು ‘ಕೆಜಿಎಫ್ 2’ ರಿಲೀಸ್ ಬಳಿಕ ಹೊಸ ಸಿನಿಮಾ ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಈಗ ಅವರು ‘ಟಾಕ್ಸಿಕ್’ ಸಿನಿಮಾದ ಶೂಟ್ ಆರಂಭಿಸಿದ್ದಾರೆ. ಈ ಚಿತ್ರದ ರಿಲೀಸ್​ಗೆ ಫ್ಯಾನ್ಸ್ ಕಾದಿದ್ದಾರೆ. ಮಲಯಾಳಂನ ಗೀತು ಮೋಹನ್​ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:42 am, Sat, 10 August 24